antalya otogar rent a car Elektronik Sigara al ordu haberleri fatsa haberleri ordu haberleri sesli chat

ಪವಿತ್ರ ರಂಝಾನ್ ಆತ್ಮಶುದ್ದಿಗೆ ಪ್ರೇರಣೆಯಾಗಲಿ..... | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಪವಿತ್ರ ರಂಝಾನ್ ಆತ್ಮಶುದ್ದಿಗೆ ಪ್ರೇರಣೆಯಾಗಲಿ.....

ಪಿ.ಎಂ.ಎ. ಪಾಣೆಮಂಗಳೂರು
Published on Saturday, June 11 2016
img

[ www.asiavisionnews.com ] ಪವಿತ್ರ ಇಸ್ಲಾಮಿನ ಕಡ್ಡಾಯ ಕರ್ಮಗಳಲ್ಲೊಂದಾಗಿದೆ ರಂಝಾನ್ ತಿಂಗಳ ಉಪವಾಸ ವೃತಾಚರಣೆ. ಇಸ್ಲಾಮೀ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳಾಗಿರುವ ಪವಿತ್ರ ರಂಝಾನ್‍ನಲ್ಲಿ ಉಪವಾಸ ವೃತವನ್ನು ಆಚರಿಸುವುದು ಪ್ರಾಯ ಪೂರ್ತಿಯಾಗಿರುವ, ಬುದ್ದಿ ಇರುವ ಪ್ರತಿಯೊಬ್ಬ ಮುಸಲ್ಮಾನನಿಗೂ ಕಡ್ಡಾಯವಾಗಿದೆ. ಸದ್ರಿ ರಂಝಾನ್ ತಿಂಗಳು ಎಲ್ಲ ವರ್ಷದಂತೆ ಈ ವರ್ಷವೂ ನಮ್ಮನ್ನು ಸ್ವಾಗತಿಸಿದೆ. ಮಾನವ ಸಮುದಾಯದ ಅದರಲ್ಲೂ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಅನುಯಾಯಿಗಳಾದ ನಮಗೆ ಅಲ್ಲಾಹನು ಅನುಗ್ರಹೀತವಾಗಿ ನೀಡಿರುವ ಪುಣ್ಯ ಮಾಸವನ್ನು ಅತ್ಯುತ್ತಮ ರೀತಿಯಲ್ಲಿ ವ್ಯಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. [ www.asiavisionnews.com ]
ಪೂರ್ವಿಕ ಪ್ರವಾದಿಗಳ ಅನುಯಾಯಿಗಳು ಈ ಲೋಕದಲ್ಲಿ ಸಾವಿರಾರು ವರ್ಷಗಳ ಕಾಲ ಬಾಳಿ ಬದುಕಿದ್ದು, ಅಷ್ಟೂ ವರ್ಷಗಳಲ್ಲಿ ಅವರು ಸೃಷ್ಟಿಕರ್ತನ ಆರಾಧನೆಯಲ್ಲಿ ತಲ್ಲೀನರಾಗುತ್ತಿದ್ದರು. ಆದರೆ ಅಂತ್ಯ ಪ್ರವಾದಿ (ಸ.ಅ) ರವರ ಅನುಯಾಯಿಗಳಾದ ನಮ್ಮ ಆಯುಷ್ಯವಾದರೋ ಕೇವಲ ಅರುವತ್ತೋ-ಎಪ್ಪತ್ತೋ ವರ್ಷಗಳ ಮಧ್ಯೆ ಇರುವ ಅಲ್ಪಾವಧಿಯಾಗಿದೆ. ಹೀಗಿರುತ್ತಾ ಪೂರ್ವಿಕ ಪ್ರವಾದಿಗಳ ಅನುಯಾಯಿಗಳ ದೀರ್ಘಾಯುಷ್ಯದ ಸತ್ಕರ್ಮಗಳೊಂದಿಗೆ ನಮ್ಮ ಅಲ್ಪಾಯುಷ್ಯದ ಆರಾಧನೆಗಳು ಸಮಾನವಾಗಲು ಅಲ್ಲಾಹನು ನಮಗೆ ಕೆಲವೊಂದು ಪುಣ್ಯವೇರಿದ ತಿಂಗಳು, ದಿವಸಗಳು ಹಾಗೂ ಸಮಯಗಳನ್ನು ನಿಗದಿಪಡಿಸಿದ್ದಾನೆ. ಅಂತಹ ಸಂದರ್ಭಗಳನ್ನು ಸಮರ್ಪಕವಾಗಿ ನಾವು ಬಳಸಿಕೊಂಡಿದ್ದೇ ಆದರೆ ಸಾವಿರಾರು ವರ್ಷಗಳ ಕಾಲ ಬಾಳಿ ಬದುಕಿ ಆರಾಧನಾ ಕರ್ಮಗಳನ್ನು ಕೈಗೊಂಡ ಪೂರ್ವಿಕ ಮಹಾನುಭಾವರ ಸತ್ಕರ್ಮಗಳನ್ನು ಮೀರಿದ ಪ್ರತಿಫಲವನ್ನು ಪಡೆಯುವ ಸದಾವಕಾಶ ನಮ್ಮ ಮುಂದಿದೆ. ಅವುಗಳಲ್ಲಿ ಪ್ರಮುಖ ಒಂದಾಗಿದೆ ಪವಿತ್ರ ರಂಝಾನ್ ತಿಂಗಳು.
ರಮಳಾನ್ ಎಂಬುದರ ಭಾವಾರ್ಥವೇ ಸುಡುವುದು ಎಂದರ್ಥ. ಈ ತಿಂಗಳಲ್ಲಿ ಮುಸಲ್ಮಾನನೊಬ್ಬ ಎಲ್ಲಾ ಕೆಡುಕುಗಳಿಂದ ದೂರವಿದ್ದು, ಅಂತಃಶುದ್ದಿಯಿಂದ ಉಪವಾಸ ವೃತವನ್ನು ಅಲ್ಲಾಹನಿಗಾಗಿ ಆಚರಿಸಿದರೆ ಆತನ ಜೀವಿತದಲ್ಲಿ ಆತ ಕೈಗೊಂಡ ಸಕಲ ಪಾಪಗಳನ್ನು ಅಲ್ಲಾಹನು ಸುಟ್ಟು ಹಾಕುವನು. ಅಲ್ಲದೆ ಪ್ರವಾದಿ (ಸ.ಅ) ರವರು ಹದೀಸ್‍ವೊಂದರಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ : “ಪವಿತ್ರ ರಮಳಾನಿನ ಆಗಮನದೊಂದಿಗೆ ಯಾವೊಬ್ಬ ಮುಸಲ್ಮಾನ ಸಂತೋಷದಿಂದ ಪುಳಕಿತಗೊಳ್ಳುತ್ತಾನೋ ಆತನ ಶರೀರವನ್ನು ಅಲ್ಲಾಹನು ಎಲ್ಲಾ ನರಕಗಳಿಂದ ನಿಷಿದ್ದಗೊಳಿಸುತ್ತಾನೆ”. ಎಂದರೆ ಕೇವಲ ರಮಳಾನಿನ ಆಗಮನದೊಂದಿಗೇ ಮುಸಲ್ಮಾನನೊಬ್ಬನ ವಿಜಯ ಪ್ರಾರಂಭವಾಗುತ್ತದೆ. ನಂತರ ಈ ತಿಂಗಳಲ್ಲಿ ಕೈಗೊಳ್ಳುವ ಎಲ್ಲಾ ಸತ್ಕರ್ಮಗಳಿಗೂ ಉಳಿದ ಸಮಯಗಳಲ್ಲಿ ಕೈಗೊಳ್ಳುವ ಸತ್ಕರ್ಮಗಳಿಗಿಂತ ದುಪ್ಪಟ್ಟು ಪ್ರತಿಫಲವನ್ನು ಪಡೆಯುತ್ತಾನೆ. ರಮಳಾನಿನಲ್ಲಿ ಒಂದು ಕಡ್ಡಾಯ ಕರ್ಮವನ್ನು ಕೈಗೊಂಡರೆ ಉಳಿದ ಸಮಯಗಳಲ್ಲಿ ಕೈಗೊಳ್ಳುವ 70 ಸತ್ಕರ್ಮಗಳ ಪ್ರತಿಫಲವೂ, ಐಚ್ಛಿಕ ಕರ್ಮವನ್ನು ಕೈಗೊಂಡರೆ ಉಳಿದ ಸಮಯಗಳಲ್ಲಿ ಕೈಗೊಳ್ಳುವ ಕಡ್ಡಾಯ ಕರ್ಮದ ಪ್ರತಿಫಲವೂ ಪ್ರಾಪ್ತವಾಗುತ್ತದೆ. [ www.asiavisionnews.com ]
ರಮಳಾನಿನಲ್ಲಿ ಕೈಗೊಳ್ಳುವ ಉಪವಾಸ ವೃತವು ಕೇವಲ ಅನ್ನಾಹಾರ, ಪಾನೀಯಾದಿಗಳನ್ನು ತೊರೆಯುವುದಕ್ಕೆ ಮಾತ್ರ ಸೀಮಿತಗೊಳಿಸದೆ, ಸಕಲ ದೇಹೇಚ್ಚೆಗಳಿಂದ ದೂರವಿದ್ದರೆ ಮಾತ್ರ ಉಪವಾಸ ವೃತದ ಪರಿಪೂರ್ಣ ಪ್ರತಿಫಲ ದೊರೆಯಲು ಸಾಧ್ಯ. ಶರೀರದ ಯಾವುದಾದರೊಂದು ಅಂಗದ ಮುಖಾಂತರ ಕೈಗೊಳ್ಳುವ ಒಂದು ಸಣ್ಣ ತಪ್ಪಾದರೂ ಅದು ಅಂದಿನ ಆತನ ಉಪವಾಸದ ಪ್ರತಿಫಲದಲ್ಲಿ ಕೊರತೆಯನ್ನು ಅನುಭವಿಸುವಂತೆ ಮಾಡುತ್ತದೆ. ರಮಳಾನಿನ ರಾತ್ರಿ ಸಮಯದಲ್ಲಿ ತರಾವೀಹ್ ಎಂಬ ಸುನ್ನತ್ ನಮಾಜ್ ಪ್ರತ್ಯೇಕ ಸುನ್ನತಾಗಿದ್ದು, ಸಾಮಾನ್ಯವಾಗಿ ಎಲ್ಲ ಮಸೀದಿಗಳಲ್ಲೂ ಅದನ್ನು ಸಾಮೂಹಿಕವಾಗಿ ನೆರವೇರಿಸಲಾಗುತ್ತದೆ. ಕನಿಷ್ಠ ಪಕ್ಷ ಅಂತಹ ಸತ್ಕರ್ಮಗಳಲ್ಲಾದರೂ ಪಾಲ್ಗೊಳ್ಳುವ ಮೂಲಕ ರವiಳಾನ್ ತಿಂಗಳ ಸಾರ್ಥಕತೆಗೆ ಪ್ರಯತ್ನಿಸಬೇಕಾಗಿದೆ. ಆದರೆ ಇಂದಿನ ಮುಸಲ್ಮಾನ ಮಾತ್ರ ಪವಿತ್ರ ರಂಝಾನ್ ತಿಂಗಳನ್ನು ಕೇವಲ ಹಬ್ಬದ ಪೂರ್ವ ಸಿದ್ದತೆಯಲ್ಲೇ ಕಳೆಯುತ್ತಿರುವಂತಹ ದುರಂತ ಸನ್ನಿವೇಶವನ್ನು ಇಂದು ಸಾರ್ವತ್ರಿಕವಾಗಿ ಕಾಣಲು ಸಾಧ್ಯವಾಗುತ್ತಿದೆ. ಅದರಲ್ಲೂ ಮುಸ್ಲಿಂ ಮಹಿಳಾ ಮಣಿಗಳ ದುರವಸ್ಥೆಯನ್ನಂತೂ ಹೇಳಿ ಮುಗಿಸಲು ಪದಗಳೇ ದೊರೆಯುತ್ತಿಲ್ಲ. ಅಂತಹ ವಿನಾಶದ ಸನ್ನಿವೇಶದಲ್ಲಿ ಇಂದು ಮುಸ್ಲಿಂ ಸಮಾಜ ಸಾಗುತ್ತಿದೆ. ರಂಝಾನ್ ಚಂದ್ರದರ್ಶನವಾಗುತ್ತಲೇ ಮಹಿಳೆಯರು ಈದುಲ್ ಫಿತ್ರ್ ಆಚರಣೆಯ ಸಂಭ್ರಮಕ್ಕಾಗಿ ವಸ್ತ್ರ ಖರೀದಿಗಾಗಿ ಪೇಟೆ-ಪಟ್ಟಣಗಳನ್ನು ಅಲೆದಾಡಲು ಶುರುವಿಡುತ್ತಾರೆ. ನಮ್ಮ ಪುರುಷ ಸಮಾಜವಾದರೋ ಇದನ್ನು ಕಂಡೂ ಕಾಣದಂತೆ ಜಾಣ ಕುರುಡುತನವನ್ನು ಪ್ರದರ್ಶಿಸುತ್ತದೆ. ಫ್ಯಾಶನ್ ಹೆಸರಿನಲ್ಲಿ ತಮ್ಮ ಹೆಂಗಸರನ್ನು ಬೀದಿ ಅಳೆಯಲು ಬಿಡುವುದು ಪುರುಷ ಸಮಾಜಕ್ಕೆ ಇಂದು ಯಾಕೋ ಅನಿವಾರ್ಯವಾಗುತ್ತಿದೆ. [ www.asiavisionnews.com ]
ಹಬ್ಬದ ಹೆಸರಿನಲ್ಲಿ ಒಂದು ಕ್ಷಣ ಆಚರಿಸುವ ಸಂಭ್ರಮ ನಮ್ಮ ಶಾಶ್ವತ ಇಹ-ಪರ ನಷ್ಟಕ್ಕೆ ಹೇತು ಎಂಬುದನ್ನು ಯಾರೂ ಕೂಡಾ ಅರ್ಥಮಾಡಿಕೊಂಡಂತಿಲ್ಲ. ಇಸ್ಲಾಮಿನಲ್ಲಿ ಹಬ್ಬಗಳ ಆಚರಣೆಗೂ ಒಂದು ಮಿತಿಯಿದೆ. ಅವುಗಳನ್ನು ಪಾಶ್ಚಾತ್ಯ ಆಚರಣೆಗಳೊಂದಿಗೆ ಸಮೀಕರಿಸುವುದನ್ನು ಇಸ್ಲಾಂ ಯಾವತ್ತೂ ಒಪ್ಪುವುದಿಲ್ಲ. ಸಂಭ್ರಮದ ಹಬ್ಬಗಳ ಆಚರಣೆಯಲ್ಲೂ ಸೃಷ್ಟಿಕರ್ತನಾದ ಅಲ್ಲಾಹನ ಸ್ಮರಣೆಯನ್ನು ಅಧಿಕಗೊಳಿಸಲು ಇಸ್ಲಾಂ ಕಲ್ಪಿಸುತ್ತದೆ. ಹಬ್ಬಗಳ ಹೆಸರಿನಲ್ಲಿ ಒಂದು ಕ್ಷಣ ಕೈಗೊಳ್ಳುವ ಅನಿಸ್ಲಾಮಿಕ ಸಂಭ್ರಮಾಚರಣೆ ಮುಸಲ್ಮಾನನೊಬ್ಬನ ಜೀವಮಾನವಿಡೀ ಸಂಪಾದಿಸಿದ ಸತ್ಕರ್ಮಗಳ ವಿನಾಶಕ್ಕೆ ಹೇತುವಾಗುವ ಸನ್ನಿವೇಶ ಇಂದು ಸಾರ್ವತ್ರಿಕವಾಗಿ ಕಂಡುಬರುತ್ತಲಿದೆ. ಇದಕ್ಕೆ ಕಡಿವಾಣ ಬೀಳದೆ ನಿಜಕ್ಕೂ ಮುಸ್ಲಿಂ ಸಮುದಾಯ ಪ್ರಗತಿಯ ಪಥಕ್ಕೆ ತಿರುಗಲು ಸಾಧ್ಯವಿಲ್ಲ.
ಪವಿತ್ರ ರಂಝಾನ್ ಈಗಾಗಲೇ ನಮ್ಮನ್ನು ಸ್ವಾಗತಿಸಿದೆ. ರಂಝಾನ್ ತಿಂಗಳ ಪ್ರತಿಯೊಂದು ದಿವಸಗಳು, ಸಮಯಗಳು, ಕ್ಷಣಗಳೂ ಮುಸ್ಲಿಂ ಉಮ್ಮತ್ತಿನ ಪಾಲಿಗೆ ಅತ್ಯಂತ ಬೆಲೆಬಾಳುವಂತದ್ದು ಎಂಬುದು ಸತ್ಯ. ಪವಿತ್ರ ರಂಝಾನ್ ನಮ್ಮನ್ನು ಬೀಳ್ಕೊಡುವಾಗ ಯಾವತ್ತೂ ಶಪಿಸುತ್ತಾ ಬೀಳ್ಕೊಡುವ ಸನ್ನಿವೇಶ ನಿರ್ಮಾಣವಾಗಬಾರದು. ಒಂದು ವೇಳೆ ರಂಝಾನ್ ತಿಂಗಳು ಮುಸ್ಲಿಮನನ್ನು ಶಪಿಸುತ್ತಾ ವಿದಾಯ ಕೋರಿದರೆ ಅದು ಆತನ ಇಡೀ ಪಾರತ್ರಿಕ ಜೀವನದ ವಿನಾಶಕ್ಕೆ ಸಾಕಾದೀತು. ರಂಝಾನ್ ತಿಂಗಳಿನಲ್ಲಿ ಕಳೆದು ಹೋಗುವ ಪ್ರತಿಯೊಂದು ಅತ್ಯಮೂಲ್ಯ ಕ್ಷಣವೂ ನಮ್ಮ ಜೀವನದಲ್ಲಿ ಮತ್ತೊಮ್ಮೆ ಮರಳಿ ಪಡೆಯಬಹುದು ಎಂಬ ವಿಶ್ವಾಸ ನಮಗ್ಯಾರಿಗೂ ಇರುವುದಿಲ್ಲ. ಅಂದರೆ ಕಾಲವು ಅಂತಿಮ ಘಟ್ಟಕ್ಕೆ ಸಮೀಪಿಸುತ್ತಿದೆ. ಅಂತ್ಯ ದಿವಸದ ಎಲ್ಲ ಪ್ರಮುಖ ಲಕ್ಷಣಗಳನ್ನು ನಾವು ನಮ್ಮ ಕಣ್ಣಲ್ಲಿ ಕಾಣಲು ಆರಂಭಿಸಿದ್ದೇವೆ. ಅವುಗಳಲ್ಲಿ ಪ್ರಮುಖ ಒಂದಾಗಿದೆ ಮಾನವನ ಮರಣ ಅಧಿಕಗೊಳ್ಳುವುದು. ಇದನ್ನು ಇಂದು ನಾವು ವ್ಯಾಪಕವಾಗಿ ಅನುಭವ ವೇದ್ಯವಾಗಿ ಕಾಣುತ್ತಿದ್ದೇವೆ. ಯಾವುದೇ ರೋಗ ಲಕ್ಷಣಗಳಿಲ್ಲದೆ, ಮರಣದ ಬಗ್ಗೆ ನಿರೀಕ್ಷಿಸಿಯೇ ಇರದಂತಹ ಅದೆಷ್ಟೋ ಮಂದಿಗಳು ದಿನದಿಂದ ದಿನಕ್ಕೆ ನಮ್ಮಿಂದ ಕಣ್ಮರೆಯಾಗುತ್ತಿದ್ದಾರೆ. ಇಂದಲ್ಲ ನಾಳೆ ನಮಗೂ ಇದೇ ಗತಿ ಎಂಬುದನ್ನೂ ಯಾವತ್ತೂ ನಾವು ಯೋಚಿಸಿದ್ದೇ ಇಲ್ಲ. ಅಂತಹ ಯೋಚನೆಯನ್ನು ಕೈಗೊಳ್ಳುವ ಅವಕಾಶ ನಮಗೆ ಒದಗಿ ಬಂದೇ ಇಲ್ಲ ಎಂಬುದೇ ನಮ್ಮ ದೌರ್ಭಾಗ್ಯ. [ www.asiavisionnews.com ]
ಆದುದರಿಂದ ನಮ್ಮ ಪಾಲಿಗೆ ವರದಾನವಾಗಿ ಆಗಮಿಸುತ್ತಿರುವ ಪರಿಶುದ್ದ ರಮಳಾನ್ ತಿಂಗಲಿನ ಪ್ರತೀ ಕ್ಷಣವೂ ಯಾವುದೇ ಕಾರಣಕ್ಕೂ ಪೋಲಾಗದೆ ಅಲ್ಲಾಹನ ಸಂಪ್ರೀತಿ ಗಳಿಕೆಯ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ತಯಾರಾಗೋಣ. ನಾವು ನಿರ್ವಹಿಸುವ ಸಕಲ ಸತ್ಕರ್ಮಗಳು ಲೋಕಮಾನ್ಯತೆಯ ಉದ್ದೇಶದಿಂದ ಮುಕ್ತಗೊಂಡು ದೇವ ಸಂಪ್ರೀತಿಯ ಏಕಮಾತ್ರ ಉದ್ದೇಶವನ್ನು ಹೊಂದಿರುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಸರ್ವ ಶಕ್ತನಾದ ಅಲ್ಲಾಹು ನಮಗೆಲ್ಲರಿಗೂ ಅನುಗ್ರಹಿಸಲಿ.... ಆಮೀನ್.. ಯಾ ರಬ್ಬಲ್ ಆಲಮೀನ್ .....

ರಂಝಾನ್ ಸಮಯದಲ್ಲಿ ಟಿ.ವಿ. ಕಾಯಕ್ರಮಗಳು : ಎಷ್ಟು ಸಮಂಜಸ....?
ಪವಿತ್ರ ರಂಝಾನ್ ತಿಂಗಳು ಎಂಬುದು ಕಳೆದ ಹನ್ನೊಂದು ತಿಂಗಳುಗಳಲ್ಲಿ ಮುಸ್ಲಿಮನೊಬ್ಬ ಮಾಡಿದ ಪಾಪಗಳಿಗೆ ಪ್ರಾಯಶ್ಚಿತ ಬಯಸುವ ಪುಣ್ಯ ಮಾಸವಾಗಿದೆ. ಇತರೆಲ್ಲ ಸಮಯಗಳಿಗಿಂತ ಹೆಚ್ಚಾಗಿ ದೈವಾರಾಧನೆಯಲ್ಲಿ ತಲ್ಲೀನರಾಗುವಂತೆ ಮುಸ್ಲಿಂ ಸಮುದಾಯಕ್ಕೆ ಪವಿತ್ರ ಇಸ್ಲಾಂ ಕಲ್ಪಿಸುತ್ತದೆ. ಇತರ ಸಮಯಗಳಲ್ಲಿ ಕೈಗೊಳ್ಳುವ ಸತ್ಕರ್ಮಗಳಿಗಿಂತ ದುಪ್ಪಟ್ಟು ಪ್ರತಿಫಲ ರಂಝಾನ್ ತಿಂಗಳಲ್ಲಿ ದೊರೆಯುತ್ತದೆ ಎಂಬುದೇ ಇದಕ್ಕೆ ಕಾರಣ. ಈ ಮೂಲಕ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ.) ರವರ ಅನುಯಾಯಿಗಳಿಗೆ ತಮ್ಮ ಅಲ್ಪಾಯುಷ್ಯದ ಸತ್ಕರ್ಮಗಳನ್ನು ಇತರ ಪ್ರವಾದಿಗಳ ಅನುಯಾಯಿ ವರ್ಗದ ಸಾವಿರಾರು ವರ್ಷಗಳ ಆಯುಷ್ಯದಲ್ಲಿ ನಿರ್ವಹಿಸಿದ ಸತ್ಕರ್ಮಗಳೊಂದಿಗೆ ಸರಿದೂಗಿಸಿಕೊಳ್ಳಲು ಸಾಧ್ಯ ಎಂಬುದು ಗಮನಾರ್ಹ. ಇಂತಹ ಸನ್ನಿವೇಶದಲ್ಲಿ ಮುಸ್ಲಿಂ ಸಮುದಾಯವು ತಮ್ಮೆಲ್ಲ ಅವಯವಗಳಿಂದ ಬರುವ ಕೆಡುಕುಗಳಿಂದ ದೂರ ನಿಲ್ಲುವ ಗರಿಷ್ಠ ಪ್ರಯತ್ನವನ್ನು ಮಾಡುವುದು ಸಾಮಾನ್ಯವಾಗಿದೆ.
ದೃಶ್ಯ ಮಾಧ್ಯಮಗಳೆಂಬುದು ಒಳಿತಿಗಿಂತ ಕೆಡುಕುಗಳತ್ತ ಚಿಂತಿಸುವಂತೆ ಮಾಡುವ ಒಂದು ಸಾಧನ ಎಂಬುದರಲ್ಲಿ ಸಂಶಯವಿಲ್ಲ.[ www.asiavisionnews.com ] ಅದಕ್ಕಾಗಿಯೇ ಹಿಂದಿನ ಕಾಲದಲ್ಲಿ ಪವಿತ್ರ ಇಸ್ಲಾಮಿನ ಪಂಡಿತರು ಸೂಕ್ಷ್ಮತೆಗೋಸ್ಕರ ಟಿ.ವಿ. ಎಂದಾಕ್ಷಣ ಅದರ ವೀಕ್ಷಣೆ ಹರಾಂ ಎಂದು ತಕ್ಷಣ ಫತ್ವಾ ನೀಡಿ ಬಿಡುತ್ತಿದ್ದರು. ಅಂದರೆ ಅವರ ದೇವಭಕ್ತಿಗೆ ಟಿ.ವಿ. ಮಾಧ್ಯಮದಲ್ಲಿ ಬರುವ ಕಾರ್ಯಕ್ರಮಗಳು ಅಡ್ಡಿಯಾಗುತ್ತಿತ್ತು ಎಂಬುದು ನಿಸ್ಸಂಶಯ. ಆದರೆ ಆಧುನಿಕ ಕಾಲದ ವೈಜ್ಞಾನಿಕ ಯುಗದಲ್ಲಿ ಬದುಕುವ ಮಾನವನಿಗೆ ಇಂತಹ ದೃಶ್ಯ ಮಾಧ್ಯಮಗಳಿಂದ ದೂರ ಸರಿದು ಬದುಕಲು ಸಾಧ್ಯವಿಲ್ಲ. ಅದರ ಒಳಿತಿಗಾಗಿ ಉಪಯೋಗ ಎಂದುಕೊಂಡರೂ ಕ್ರಮೇಣವಾಗಿ ಆತ ಅದರ ಕೆಡುಕುಗಳತ್ತಲೂ ಕಣ್ಣೋಡಿಸುವುದು ಖಂಡಿತ. ಇವೆಲ್ಲದರ ಹೊರತಾಗಿಯೂ ಮುಸಲ್ಮಾನನೊಬ್ಬ ಪವಿತ್ರ ರಂಝಾನ್ ತಿಂಗಳಲ್ಲಿ ಅದರ ಗೌರವಕ್ಕೆ ಮನ್ನಣೆ ನೀಡಿ ಈ ಒಂದು ತಿಂಗಳಲ್ಲಿ ಟಿ.ವಿ. ಪೆಟ್ಟಿಗೆಗೆ ಭದ್ರ ಕಟ್ಟು ಹಾಕಿ ಮುಚ್ಚಿ ಬಿಡುತ್ತಿದ್ದ ದೃಶ್ಯ ಈ ಹಿಂದೆ ಸಾಮಾನ್ಯವಾಗಿ ಕಂಡು ಬರುತ್ತಿತ್ತು. ಆದರೆ ಇದೀಗ ಒಂದೊಮ್ಮೆ ಟಿ.ವಿ. ಎಂದಾಕ್ಷಣ ಹರಾಂ ಎಂದು ಫತ್ವಾ ಹೊರಡಿಸುತ್ತಿದ್ದ ವರ್ಗವೇ ಇವತ್ತು ಟಿ.ವಿ. ವೀಕ್ಷಣೆಗೆ ಪ್ರೇರಣೆಯನ್ನು ನೀಡುವ ಕಾರ್ಯಕ್ರಮಗಳಿಗೆ ಹಸಿರು ನಿಶಾನೆಯನ್ನು ತೋರುತ್ತಿರುವುದಕ್ಕೆ ಕಾಲದ ದುರಂತವೆನ್ನಬೇಕಷ್ಟೆ. ಅದೂ ಕೂಡಾ ಪವಿತ್ರ ರಂಝಾನ್ ತಿಂಗಳಲ್ಲಿ ಇಸ್ಲಾಮಿನ ಬಗ್ಗೆ ಟಿ.ವಿ. ಕಾರ್ಯಕ್ರಮಗಳನ್ನು ನೀಡಿ ಜನರ ನೈಜ ದೈವ ಭಕ್ತಿಗೆ ಮಣ್ಣೆರಚುವ ಪ್ರವೃತ್ತಿ ಬೆಳೆದು ಬರುತ್ತಿದೆ.
ಯಾರೋ ಏನೋ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಅದನ್ನು ಪರಿಹರಿಸುವ ಪ್ರಯತ್ನದಲ್ಲಿ ಸರಿಯಿದ್ದವರಿಗೂ ತಪ್ಪು ಹಾದಿ ತೋರಿಸುವ ಕ್ರಮ ಎಷ್ಟು ಮಾತ್ರಕ್ಕೂ ಸರಿಯಲ್ಲ ಎಂಬುದು ಮುಸ್ಲಿಂ ಸಮುದಾಯದಿಂದಲೇ ಕೇಳಿ ಬರುವ ಮಾತು. ಮಸೀದಿ ಮದ್ರಸಗಳಲ್ಲಿ ಯಾವುದೇ ಮತ ಪ್ರವಚನಗಳೂ ಇಲ್ಲದೆ ಸಂಪೂರ್ಣ ನಿಂತು ಹೋದ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಫಲಪ್ರದವಾಗುತ್ತಿತ್ತೋ ಏನೋ? ಆದರೆ ಇವತ್ತು ರಂಝಾನ್ ಪ್ರಾರಂಭವಾದಂದಿನಿಂದ ಜಗತ್ತಿನ ಸರ್ವ ಮೂಲೆ ಮೂಲೆಗಳಲ್ಲಿರುವ ಮಸೀದಿ ಮದ್ರಸಗಳಲ್ಲಿ ಮತ ಪ್ರವಚನಗಳು, ಅಲ್ಲಾಹನ ನಾಮಸ್ಮರಣೆಗಳು ಎಗ್ಗಿಲ್ಲದೆ ನಡೆಯುತ್ತಿರುವಾಗ ಇಂತಹ ಟಿ.ವಿ. ಕಾರ್ಯಕ್ರಮಗಳನ್ನು ನೀಡಿ, ಅದಕ್ಕೆ ಬೇಕಾದಷ್ಟು ಪ್ರಚಾರವನ್ನೂ ನೀಡಿ ಜನರನ್ನು ಪ್ರತ್ಯಕ್ಷ ಇಲ್ಮಿನ ಮಜ್ಲಿಸ್‍ನಿಂದ ವಂಚಿತರನ್ನಾಗಿ ಮಾಡುವುದು ಯಾವ ಪುರುಷಾರ್ಥಕ್ಕೆ ಎಂಬುದಾಗಿ ನೈಜ ಮುಸಲ್ಮಾನನೊಬ್ಬ ಪ್ರಶ್ನಿಸುವಂತಾಗಿದೆ. ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವ ವೀಕ್ಷಕರಿಗಿಂತಲೂ, ಈ ಕಾರ್ಯಕ್ರಮಗಳನ್ನು ಸಂಘಟಿಸುವ ಸಂಯೋಜಕರು, ಇದನ್ನು ಪ್ರಾಯೋಜಿಸುವ ಪ್ರಾಯೋಜಕರು, ಇದಕ್ಕಾಗಿ ಹಣಕಾಸು ಒದಗಿಸಿದವರು ಹಾಗೂ ಇದಕ್ಕಾಗಿ ಇನ್ನಿಲ್ಲದ ಶ್ರಮವಹಿಸಿದವರು ಸದ್ರಿ ಕಾರ್ಯಕ್ರಮದ ಸಮಯ ಸಮೀಪಿಸುವಾಗ ತಮ್ಮ ಶ್ರಮದ ಸಾರ್ಥಕತೆಯನ್ನು ಸವಿಯಲು ತಮ್ಮ ತಮ್ಮ ಮಸೀದಿಗಳಲ್ಲಿರುವ ಯದಾರ್ಥ ಮಜ್ಲಿಸ್‍ಗಳನ್ನು ತೊರೆದು ಕಾಲಿಗೆ ಬುದ್ದಿ ಹೇಳುವ ಪರಿ ಕಾಣುವಾಗ ಯಾವನೇ ಒಬ್ಬ ಮುಸಲ್ಮಾನ ಇವರ ನೈಜ ದೈವ ಭಕ್ತಿಯ ಬಗ್ಗೆ ಸಂಶಯಪಡದಿರಲಾರ.
[ www.asiavisionnews.com ]ರಂಝಾನ್ ಸಮಯದಲ್ಲಿ ಟಿ.ವಿ. ಆನ್ ಮಾಡಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಮಂದಿ ಯಾರೂ ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವುದಿಲ್ಲ ಎಂಬುದು ಪರಮ ಸತ್ಯ. ಬದಲಾಗಿ ರಂಝಾನ್ ಸಮಯದಲ್ಲಿ ಟಿ.ವಿ.ಯನ್ನು ಭದ್ರವಾಗಿ ಮುಚ್ಚಿಡುವ ಮಂದಿ ಮಾತ್ರ ಇಂತಹ ಕಾರ್ಯಕ್ರಮಗಳ ನೆಪದಲ್ಲಿ ಟಿ.ವಿ. ಆನ್ ಮಾಡಿ ಇವುಗಳ ವೀಕ್ಷಣೆಯನ್ನು ಮಾಡುವುದರ ಜೊತೆಗೆ ಅದರಲ್ಲಿರುವ ಇನ್ನಿತರ ಚಾನಲ್‍ಗಳಿಗೂ ಕಣ್ಣೋಡಿಸುತ್ತಾರೆ. ಒಂದು ವೇಳೆ ಇತರ ಚಾನಲ್‍ಗಳಿಗೆ ಗಮನ ಕೊಡದಿದ್ದರೂ, ಅದೇ ಇಸ್ಲಾಮೀ ಕಾರ್ಯಕ್ರಮದ ಮಧ್ಯೆ ಅನಿಸ್ಲಾಮೀ ಜಾಹೀರಾತುಗಳೇನಾದರೂ ಬಂದರೆ ಅದನ್ನು ವೀಕ್ಷಿಸಿಯೇ ವೀಕ್ಷಿಸುತ್ತಾರೆ ಎಂಬುದಾಗಿದೆ ವಾಸ್ತವ. ಒಟ್ಟಾರೆಯಾಗಿ ರಂಝಾನ್ ತಿಂಗಳಲ್ಲಿ ಧಾರ್ಮಿಕ ಜೀವನದ ಬದಲಾವಣೆಯನ್ನು ಬಯಸುವ ಮಂದಿಗೆ ಇಂತಹ ಟಿ.ವಿ. ಕಾರ್ಯಕ್ರಮಗಳು ಮುಳ್ಳಾಗಿವೆ ಎಂಬ ಮಾತು ಮುಸ್ಲಿಂ ವಲಯದಿಂದಲೇ ಕೇಳಿ ಬರುತ್ತಿದೆ. ಧಾರ್ಮಿಕತೆಯ ಹೆಸರಿನಲ್ಲಿ ಅಧಾರ್ಮಿಕತೆಯನ್ನು ಹುಟ್ಟು ಹಾಕುವ, ಜನರ ಧಾರ್ಮಿಕ ಜೀವನದಲ್ಲೂ ತಮ್ಮ ಕೈಚಳಕವನ್ನು ತೋರಿಸುವ ಇಂತಹ ಕಾರ್ಯಕ್ರಮಗಳನ್ನು ಪ್ರಯೋಜಿಸುವ ಮಂದಿಗೆ [ www.asiavisionnews.com ]ಬೆನ್ನೆಲುಬಾಗಿ ನಿಂತಿರುವ ಆಲಿಂ, ಉಲಮಾ ವರ್ಗ, ಅದಕ್ಕಾಗಿ ಲಕ್ಷಗಟ್ಟಲೆ ಹಣವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೀರಿನಂತೆ ಸುರಿಯುವ ಧನಿಕ ಪ್ರಯೋಜಕರು, ಅದೇ ರೀತಿ ಇಂತಹ ಕಾರ್ಯಕ್ರಮದ ಹಿಂದೆ ಹಗಲು ರಾತ್ರಿಯೆನ್ನದೆ ತಮ್ಮ ಧಾರ್ಮಿಕ ರಂಗವನ್ನು ಮರೆತು ಆಧುನಿಕ ಜಂಜಾಟದ ಹಿಂದೆ ಕಾಲ ಕಳೆಯುವ ಮುಅಲ್ಲಿಂ-ಮುತಲ್ಲಿಂಗಳು ಇತ್ಯಾದಿ ಈ ಎಲ್ಲಾ ವರ್ಗಗಳು ತಮ್ಮ ನಾಗಾಲೋಟದ ಕುರಿತು ಒಂದು ಕ್ಷಣ ಕುಳಿತು ಚಿಂತಿಸಲಿ ಎಂಬ ಹಿತ ವಚನ ಮುಸ್ಲಿಂ ಸಮುದಾಯದೊಳಗಿನಿಂದ ಮೊಳಗುತ್ತಿದೆ.

Comments