ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪ್ರತಿಭೆ: ಗ್ರಾಮೀಣ ಪ್ರದೇಶದ ಜನರ ಮಧ್ಯೆ ಮಿಂಚುತ್ತಿರುವ ಕಸಾಯಿ ಅಝೀಝ್

ರಹಿಮಾನ್ ಉದ್ಯಾವರ
Published on Wednesday, April 06 2016
img

ಮಂಜೇಶ್ವರ [ www.asiavisionnews.com ] : ಮನುಷ್ಯರಲ್ಲಿ ಹಲವಾರು ಪ್ರತಿಭೆಗಳು ಹುದುಮಿಕೊಂಡಿದ್ದರೂ ಅದನ್ನು ಸೂಕ್ತವಾದ ಸ್ಥಳದಲ್ಲಿ ಪ್ರದರ್ಶಿಸಲು ಸಾಧ್ಯವಾಗದೆ ಪರಿತಪಿಸುವಂತಹ ಎಷ್ಟೋ ಕಲಾ ಪ್ರತಿಭೆಗಳನ್ನು ನಾವು ನೋಡಿದ್ದೇವೆ. ಆದರೆ ಇವರು ನಿಜವಾದ ಪ್ರತಿಭೆಗಳಾಗಿದ್ದಾರೆ. ನಿರ್ಗತಿಕ ಕುಟುಂಬದಲ್ಲಿ ಜನಿಸಿದ ಒಬ್ಬ ವ್ಯಕ್ತಿ ಇಂತಹ ಸನ್ನಿವೇಶಗಳಿಗೆ ಬಲಿಯಾಗುತಿದ್ದಾನೆ.
ಇದಕ್ಕೆ ಉದಾಹರಣೆಯಗಿ ಮಂಜೇಶ್ವರಕ್ಕೆ ಸಮೀಪದ ತೂಮಿನಾಡಿನಲ್ಲಿ ವಾಸವಾಗಿರುವ ವೃತ್ತಿಯಲ್ಲಿ ಮಾಂಸ ವ್ಯಾಪಾರಿಯಾಗಿರುವ ಅಬ್ದುಲ್ ಅಝೀಝ್.(63) ಮೂಲತಃ ಮಂಗಳೂರಿನ ಕುದ್ರೋಳಿ ನಿವಾಸಿಯಾಗಿರುವ ಇವರು ಕಳೆದ 40 ವರ್ಷಗಳಿಂದ ತೂಮಿನಾಡಿನಲ್ಲಿ ಮಕ್ಕಳು ಪತ್ನಿಯರೊಂದಿಗೆ ತೂಮಿನಾಡಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಹಿಂದಿಯ ಖ್ಯಾತ ಗಾಯಕರಾದ ಮಹಮ್ಮದ್ ರಫಿ, ಮುಖೇಶ್, ಕಿಶೋರ್ ಕುಮಾರ್ ಹಾಗೂ ಎಸ್ ಪಿ ಬಾಲಸುಬ್ರಮಣ್ಯರವರ ಹಾಡುಗಳನ್ನು ಅದೇ ರೀತಿ ಅನುಕರಿಸಿ ಬಹಳ ಉತ್ತಮವಾಗಿ ಹಾಡಿ ಜನತೆಯನ್ನು ಗಾನಲೋಕಕ್ಕೆ ಕೊಂಡೊಯ್ಯುವುದರಲ್ಲಿ ನಿಸ್ಸೀಮರಾಗಿದ್ದಾರೆ. ಮದುವೆ ಸಮಾರಂಭ ಹಾಗೂ ಇತರ ಯಾವುದೇ ಸಮಾರಂಭಗಳಲ್ಲೂ ತನ್ನ ಗಾಯನದೊಂದಿಗೆ ಇವರು ಮನರಂಜಿಸುತಿದ್ದಾರೆ. ಅತ್ಯಲ್ಪ ವಿದ್ಯಾಭ್ಯಾಸವನ್ನು ಹೊಂದಿರುವ ಇವರು ತನ್ನ 10 ನೇ ವರ್ಷದಲ್ಲೇ ಗಾಯನದಲ್ಲಿ ಆಸಕ್ತಿ ಉಳ್ಳವರಾಗಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನ ನೀಡಿ ಗೌರವಿಸಿವೆ. ಹಾಗೂ ಮಂಗಳೂರಿನ ಕ್ವಾಲಿಟಿ ಹೋಟೆಲ್ ನಲ್ಲೂ 5 ವರ್ಷಗಳ ಕಾಲ ಗಾಯಕರಾಗಿದ್ದರು. ಸಮಾಜದಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಪ್ರತಿಭೆಯನ್ನು ಹೊಂದಿರುತ್ತಾನೆ. ತನ್ನದೇ ಆದ ಅಸ್ಮಿತೆಯನ್ನು ಛಾಪಿಸಲು ಹವಣಿಸುತ್ತಾನೆ. ಗಾಯಕ ಕವಿ ಸಾಹಿತಿಗಳಾದವರು ತಮ್ಮ ಸೃಜನ ಶೀಲ ಉಪಕ್ರಮಗಳ ಮೂಲಕ ಸಾಂಸ್ಕೃತಿಕ ನೆಲೆಗಳ ಹುಡುಕಾಟಕ್ಕೆ ಬೇಕಾದ ದಾರಿಗಳನ್ನು ಶೋಧಿಸಿಕೊಳ್ಳುತಿದ್ದಾನೆ. ಆದರೆ ಇನ್ನಾದರೂ ಗ್ರಾಮೀಣ ಪ್ರದೇಶದಲ್ಲೇ ಉಳಿದಿರುವ ಈ ಸಾಮಾನ್ಯ ವ್ಯಕ್ತಿಯ ಅಪ್ರತಿಮ ಪ್ರತಿಭೆಯನ್ನು ಯಾರಾದರೂ ಗುರುತಿಸುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

Comments