antalya otogar rent a car ordu haberleri fatsa haberleri - instagram türk takipçi al instagram yavaş beğeni satın al ko-cuce ko-cuce sesli siteler

ಅಬಕಾರಿ ಸುಂಕ ಹೆಚ್ಚಳ ಮದ್ಯ ದುಬಾರಿ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಅಬಕಾರಿ ಸುಂಕ ಹೆಚ್ಚಳ ಮದ್ಯ ದುಬಾರಿ

Saturday, April 01 2017
img

ಬೆಂಗಳೂರು(www.asiavisionnews.com) :ರಾಜ್ಯ ಬಜೆಟ್‌ನಲ್ಲಿ ಅಬಕಾರಿ ಸುಂಕ ಹೆಚ್ಚಳಗೊಳಿಸಿರುವುದರಿಂದ ಏ. 1ರಿಂದ (ಶನಿವಾರ) ಮದ್ಯ ದುಬಾರಿ ಆಗಲಿದೆ.

ಬಿಯರ್, ವೈನ್‌, ವಿಸ್ಕಿ ಹಾಗೂ ರಮ್‌ ಮೇಲೆ ಶೇ 5.5 ಮೌಲ್ಯವರ್ಧಿತ ತೆರಿಗೆ ತೆಗೆದುಹಾಕಲಾಗಿದೆ. ಅದಕ್ಕೆ ಬದಲಾಗಿ ವಿವಿಧ ಸ್ಲ್ಯಾಬ್‌ಗಳಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿರುವುದರಿಂದಾಗಿ ಎಲ್ಲ ವಿಧದ ಮದ್ಯಗಳು ದುಬಾರಿಯಾಗಲಿವೆ.

ಅಬಕಾರಿ ಇಲಾಖೆ ಮೂಲಗಳ ಪ್ರಕಾರ, ಹೊಸ ದಾಸ್ತಾನುಗಳಿಗೆ ಹೊಸ ಅಬಕಾರಿ ಸುಂಕ ಅನ್ವಯ ಆಗಲಿದೆ. ಪ್ರಸಿದ್ಧ ಬ್ರ್ಯಾಂಡ್‌ಗಳ ಹೊಸ ಗರಿಷ್ಠ ಮಾರುಕಟ್ಟೆ ದರ (ಎಂಆರ್‌ಪಿ) ಅನ್ವಯ ದರ ಪಟ್ಟಿ ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು. ಉದಾಹರಣೆಗೆ ರಾಜ್ಯದಲ್ಲಿ ಜನಪ್ರಿಯವಾಗಿರುವ 375 ಎಂ.ಎಲ್‌ನ ಮ್ಯಾಕ್‌ಡೊವೆಲ್‌ ವಿಸ್ಕಿಗೆ ಸದ್ಯ ₹ 275 ದರ ಇದ್ದು, ಅದು ₹ 300ಕ್ಕೆ ಹೆಚ್ಚಳಗೊಳ್ಳಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ರಟ್ಟಿನ ಪೆಟ್ಟಿಗೆಯ ಮಾರುಕಟ್ಟೆ ದರದ ಆಧಾರದ ಮೇಲೆ ಅಬಕಾರಿ ಸುಂಕ ಹೆಚ್ಚಳವಾಗಲಿದೆ.

ಅತಿ ಕಡಿಮೆ ದರ ಇರುವ ವಿಸ್ಕಿಗೆ ಶೇ 6ರಷ್ಟು ಹೆಚ್ಚಳವಾದರೆ, ಅತಿ ಹೆಚ್ಚಿನ ದರದ ವಿಸ್ಕಿಗೆ ಶೇ 15ರಿಂದ ಶೇ21ರಷ್ಟು ಹೆಚ್ಚಳವಾಗಲಿದೆ.

**

ಬೈಕ್‌ ನೋಂದಣಿ ಶುಲ್ಕ ಶೇ 6 ರಷ್ಟು ತುಟ್ಟಿ

₹1 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಬೈಕ್‌ಗಳ ಮೇಲಿನ ಮೋಟಾರು ವಾಹನ ತೆರಿಗೆಯನ್ನು ಸರ್ಕಾರ ಶೇ 12ರಿಂದ ಶೇ 18ಕ್ಕೆ ಹೆಚ್ಚಿಸಿದ್ದರಿಂದ ದುಬಾರಿ ಬೈಕ್‌ಗಳ ಬೆಲೆಯಲ್ಲೂ ಹೆಚ್ಚಳ ಆಗಲಿದೆ.

ಮೋಟಾರು ವಾಹನ ತೆರಿಗೆ ಹೆಚ್ಚಳಗೊಳಿಸಿದ್ದರಿಂದ ₹ 1,33,580 ಲಕ್ಷ ಮೌಲ್ಯದ ಹೊಸ ಮಾದರಿಯ ಎನ್‌ಫೀಲ್ಡ್‌ ಗೆ ಸದ್ಯ ₹18,394 ತೆರಿಗೆ ಮತ್ತು ₹3,472 ವಿಮೆ ಸೇರಿದಂತೆ ₹ 1,55,451 ಆಗಲಿದೆ.

ಬಜೆಟ್‌ನಲ್ಲಿ ತೆರಿಗೆ ಪ್ರಮಾಣವನ್ನು ಶೇ 18ಕ್ಕೆ ಹೆಚ್ಚಿಸಿರುವುದರಿಂದ ಗ್ರಾಹಕರು ಈ ಬೈಕ್‌ಗೆ ಸುಮಾರು ₹1,65,500 ಪಾವತಿಸಬೇಕಾಗುತ್ತದೆ.

Comments