antalya otogar rent a car Elektronik Sigara al

ಅತಿದೊಡ್ಡ ಮಾರುಕಟ್ಟೆ: ವಾಟ್ಸ್‌ಆ್ಯಪ್‌ ಡಿಜಿಟಲ್‌ ಪಾವತಿ ಸೇವೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಅತಿದೊಡ್ಡ ಮಾರುಕಟ್ಟೆ: ವಾಟ್ಸ್‌ಆ್ಯಪ್‌ ಡಿಜಿಟಲ್‌ ಪಾವತಿ ಸೇವೆ

Wednesday, April 05 2017
img

ಮುಂಬೈ ((www.asiavisionnews.com)): ಫೇಸ್‌ಬುಕ್‌ ಒಡೆತನದ ವಾಟ್ಸ್‌ಆ್ಯಪ್‌ ಶೀಘ್ರ ಭಾರತದಲ್ಲಿ ಡಿಜಿಟಲ್‌ ಪಾವತಿ ಸೇವೆ ಆರಂಭಿಸಲು ಉದ್ದೇಶಿಸಿದೆ.

ವ್ಯಕ್ತಿಯಿಂದ ವ್ಯಕ್ತಿಗೆ ಹಣ ಪಾವತಿ ಮಾಡುವ ಸೌಲಭ್ಯವನ್ನು ಆರು ತಿಂಗಳಲ್ಲಿ ಜಾರಿಗೆ ತರಲು ಮುಂದಾಗಿದೆ. ಈ ಉದ್ದೇಶಕ್ಕೆ, ಮೊಬೈಲ್‌ನ ‘ಭೀಮ್‌’ ಮತ್ತು ‘ಯುಪಿಐ’ ಆ್ಯಪ್‌ ನೆರವಿನಿಂದ ಹಣ ಪಾವತಿ ಮಾಡುವ ವ್ಯವಸ್ಥೆಯನ್ನು ಚೆನ್ನಾಗಿ ಬಲ್ಲ ತಂತ್ರಜ್ಞಾನ ಮತ್ತು ಹಣಕಾಸು ತಂತ್ರಜ್ಞನ ನೇಮಕ ಮಾಡಿಕೊಳ್ಳಲು ಸಂಸ್ಥೆ ಉದ್ದೇಶಿಸಿದೆ.

ವಾಟ್ಸ್‌ಆ್ಯಪ್‌ಗೆ ಭಾರತ ಅತಿದೊಡ್ಡ ಮಾರುಕಟ್ಟೆಯಾಗಿದ್ದು 20 ಕೋಟಿ ಬಳಕೆದಾರರನ್ನು ಹೊಂದಿದೆ. ಚೀನಾದಲ್ಲಿ ಟೆನ್‌ಸೆಂಟ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ನ ವಿಚಾಟ್‌ ಆ್ಯಪ್‌ ಆರಂಭಿಸಿರುವ ಡಿಜಿಟಲ್‌ ಪಾವತಿ ಸೇವೆಯ ಮಾದರಿಯನ್ನು ಭಾರತದಲ್ಲಿ ಪರಿಚಯಿಸಲು ವಾಟ್ಸ್‌ಆ್ಯಪ್‌ ಮುಂದಾಗಿದೆ.

Comments