Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಷೇರುದಾರರಿಗೆ ₹13 ಸಾವಿರ ಕೋಟಿ ಮರಳಿಸಲು ಇನ್ಫೊಸಿಸ್‌ ನಿರ್ಧಾರ

Friday, April 14 2017
img

ಬೆಂಗಳೂರು(www.asiavisionnews.com) : ಸಾಫ್ಟ್‌ವೇರ್‌ ಸೇವೆಗಳನ್ನು ರಫ್ತು ಮಾಡುವ ದೇಶದ ಎರಡನೇ ಅತಿದೊಡ್ಡ ಕಂಪೆನಿ ಇನ್ಪೊಸಿಸ್‌, ಷೇರುಗಳ ಮರು ಖರೀದಿ ರೂಪದಲ್ಲಿ ಷೇರುದಾರರಿಗೆ ₹13 ಸಾವಿರ ಕೋಟಿ ಮರಳಿಸಲು ನಿರ್ಧರಿಸಿದೆ.

ಕಂಪೆನಿ ಬಳಿಯಲ್ಲಿ ಇರುವ ಹೆಚ್ಚುವರಿ ನಗದನ್ನು ಷೇರುದಾರರಿಗೆ ವಿತರಿಸಲು ಷೇರು ಮರು ಖರೀದಿ ಮಾಡುವಂತೆ ಮತ್ತು ಲಾಭಾಂಶ ಹೆಚ್ಚಿಸಲು ಸಂಸ್ಥೆಯ ಸಹ ಸ್ಥಾಪಕರು ಮತ್ತು ಮಾಜಿ ಕಾರ್ಯನಿರ್ವಾಹಕ ಅಧಿಕಾರಿಗಳು ತೀವ್ರ ಒತ್ತಡ ತಂದಿದ್ದರು.

ಈ ಕಾರಣಕ್ಕೆ ಕಂಪೆನಿ ನಾಲ್ಕನೇ ತ್ರೈಮಾಸಿಕ ಫಲಿತಾಂಶದ ವೇಳೆ ಈ ನಿರ್ಧಾರ ಪ್ರಕಟಿಸಿದೆ. ಸಂಸ್ಥೆಯ ಬಳಿ₹ 40,000 ಕೋಟಿಗಳಷ್ಟು ಹೆಚ್ಚುವರಿ ನಗದು ಇದೆ.

2017–18ನೇ ಆರ್ಥಿಕ ವರ್ಷದಲ್ಲಿ , ಶೇ 6.5 ರಿಂದ ಶೇ 8.5 ರಷ್ಟು ವರಮಾನ ವೃದ್ಧಿಯಾಗಲಿದೆ ಎಂದು ಅಂದಾಜಿಸಿದೆ. ಇದು ಅತ್ಯಂತ ನಿರಾಶಾದಾಯಕ ಮುನ್ನೋಟವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Comments