antalya otogar rent a car Elektronik Sigara al ordu haberleri fatsa haberleri ordu haberleri sesli chat sesli chat yemek tarifleri

ಷೇರುಪೇಟೆ ಜಾಗತಿಕ ವಿದ್ಯಮಾನ ಪ್ರಭಾವ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಷೇರುಪೇಟೆ ಜಾಗತಿಕ ವಿದ್ಯಮಾನ ಪ್ರಭಾವ

Monday, April 17 2017
img

ನವದೆಹಲಿ (www.asiavisionnews.com): ಜಾಗತಿಕ ವಿದ್ಯಮಾನಗಳು ಮತ್ತು ತ್ರೈಮಾಸಿಕ ಫಲಿತಾಂಶ ಪ್ರಕಟಣೆಯು ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಸಿರಿಯಾ ವಾಯುನೆಲೆ ಮೇಲೆ ಅಮೆರಿಕ ದಾಳಿ ನಡೆಸಿರುವುದು ಈಗಾಗಲೇ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ಇಂತಹ ಸಂದರ್ಭದಲ್ಲಿಯೇ ಅಮೆರಿಕ ಮತ್ತು ಉತ್ತರ ಕೊರಿಯಾ ಮಧ್ಯೆ ಮೂಡಿರುವ ಸಂಘರ್ಷವು ಉದ್ವಿಗ್ನ ಸ್ಥಿತಿಗೆ ತಲುಪಿದೆ. ಅಣ್ವಸ್ತ್ರ ದಾಳಿ ನಡೆಸಲು ತಾನು ಸಜ್ಜಾಗಿರುವುದಾಗಿ ಉತ್ತರ ಕೊರಿಯಾ ಹೇಳಿಕೆ ನೀಡಿರುವುದು ಹೂಡಿಕೆದಾರರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಇದರಿಂದ ಭಾರತವೂ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆ ಪ್ರಮಾಣ ತಗ್ಗುತ್ತಿದೆ ಎಂದು ಟ್ರೇಡ್‌ ಸ್ಮಾರ್ಟ್‌ ಆನ್‌ಲೈನ್‌ನ ಸ್ಥಾಪಕ ವಿಜಯ್‌ ಸಿಂಘಾನಿಯಾ ಹೇಳಿದ್ದಾರೆ.

ದೇಶದಲ್ಲಿ ಪ್ರಮುಖ ಕಂಪೆನಿಗಳ ತ್ರೈಮಾಸಿಕ ಫಲಿತಾಂಶವೂ ಸೂಚ್ಯಂಕಗಳ ಏರಿಳಿತವನ್ನು ನಿರ್ಧರಿಸಲಿವೆ ಎಂದು ಅವರು ಹೇಳಿದ್ದಾರೆ.
ಎಸ್‌ ಬ್ಯಾಂಕ್‌, ಹಿಂದೂಸ್ತಾನ್‌ ಜಿಂಕ್‌, ಮೈಂಡ್ ಟ್ರೀ, ಎಸಿಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ತಮ್ಮ ಆರ್ಥಿಕ ಸಾಧನೆ ಪ್ರಕಟಿಸಲಿವೆ.
ಸೋಮವಾರ ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರದ ಅಂಕಿ–ಅಂಶ ಹೊರಬೀಳಲಿದೆ. ಇದೂ ಸಹ ವಹಿವಾಟಿನ ಮೇಲೆ ಪ್ರಭಾವ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ.

ಕಳೆದ ವಾರ ಮುಂಬೈ ಷೇರುಪೇಟೆ ಸೂಚ್ಯಂಕ 245 ಅಂಶ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 47 ಅಂಶ ಇಳಿಕೆ ಕಂಡಿವೆ.
6 ಕಂಪೆನಿಗಳಿಗೆ ನಷ್ಟ: ಷೇರುಪೇಟೆಯಲ್ಲಿ ನೋಂದಾಯಿತ ಪ್ರಮುಖ 10 ಕಂಪೆನಿಗಳಲ್ಲಿ 6 ಕಂಪೆನಿಗಳ ಮಾರುಕಟ್ಟೆ ಮೌಲ್ಯವು ಕಳೆದ ವಾರದ ವಹಿವಾಟಿನಲ್ಲಿ ₹47,563 ಕೋಟಿಗಳಷ್ಟು ಇಳಿಕೆಯಾಗಿದೆ.

ಟಿಸಿಎಸ್‌ ಮತ್ತು ರಿಲಯನ್ಸ್‌ ಕಂಪೆನಿಗಳಿಗೆ ಭಾರಿ ನಷ್ಟವಾಗಿದೆ.ಐ.ಟಿ. ದಿಗ್ಗಜ ಕಂಪೆನಿ ಟಿಸಿಎಸ್‌ ಮಾರುಕಟ್ಟೆ ಮೌಲ್ಯ ₹19,556 ಕೋಟಿಗಳಷ್ಟು ಕರಗಿ, ₹4.59 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಮಾರುಕಟ್ಟೆ ಮೌಲ್ಯ ₹13,388 ಕೋಟಿಗಳಷ್ಟು ಕರಗಿ, ₹4.43 ಲಕ್ಷ ಕೋಟಿಗಳಿಗೆ ಇಳಿಕೆ ಕಂಡಿದೆ.

Comments