antalya otogar rent a car ordu haberleri likit satın al - instagram türk takipçi al instagram yavaş beğeni satın al ko cuce

ಹೊಸ ದರ ತಕ್ಷಣ ಜಾರಿಗೆ ಗೃಹ ಸಾಲ ಬಡ್ಡಿದರ ಇಳಿಕೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಹೊಸ ದರ ತಕ್ಷಣ ಜಾರಿಗೆ ಗೃಹ ಸಾಲ ಬಡ್ಡಿದರ ಇಳಿಕೆ

Tuesday, May 16 2017
img

ನವದೆಹಲಿ (www.asiavisionnews.com) : ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಲಿಮಿಟೆಡ್‌, ಗೃಹ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಶೇ 0.30ರಷ್ಟು ಇಳಿಸಿವೆ.

ಕೈಗೆಟುಕುವ ಮನೆಗಳ ಮಾರಾಟ ಉತ್ತೇಜಿಸಲು ₹ 30 ಲಕ್ಷವರೆಗಿನ ಸಾಲದ ಮೇಲಿನ ಬಡ್ಡಿ ದರ ಇಳಿಸಲಾಗಿದೆ. ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ, ಮಹಿಳೆಯರಿಗೆ ಶೇ 8.35 ಮತ್ತು ಪುರುಷರಿಗೆ ಶೇ 8.40 ಬಡ್ಡಿ ದರದಲ್ಲಿ ಸಾಲ ವಿತರಿಸಿವೆ.

₹ 30 ರಿಂದ ₹ 75 ಲಕ್ಷವರೆಗಿನ ಗೃಹ ಸಾಲದ ಶೇ 8.50ರಷ್ಟು ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ₹ 75 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಬಡ್ಡಿ ದರ ಶೇ 8.75ದಿಂದ ಶೇ 8.55ಕ್ಕೆ ಇಳಿಯಲಿದೆ. ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಎಚ್‌ಡಿಎಫ್‌ಸಿ ತಿಳಿಸಿದೆ.

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕಳೆದ ವಾರವೇ ಬಡ್ಡಿ ದರ ಕಡಿತ ಘೋಷಿಸಿತ್ತು. ಗೃಹ ಸಾಲ ಮಾರುಕಟ್ಟೆಯಲ್ಲಿ ಎಸ್‌ಬಿಐ ಶೇ 26ರಷ್ಟು ಪಾಲು ಹೊಂದಿದೆ.

Comments