Monday, December 16, 2019
ನವದೆಹಲಿ (www.asiavisionnews.com) : ಶೀಘ್ರದಲ್ಲೇ ₹50ರ ಹೊಸ ನೋಟು ಚಲಾವಣೆಗೆ ಬರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಈ ಹೊಸ ನೋಟಿನಲ್ಲಿ ಹಂಪಿ ಕಲ್ಲಿನ ರಥದ ಚಿತ್ರವಿರಲಿದೆ.
ಆದಾಗ್ಯೂ, ಈಗಾಗಲೇ ಚಲಾವಣೆಯಲ್ಲಿರುವ ₹50ರ ನೋಟು ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಹೊಸ ₹20ರ ನೋಟು ಮತ್ತು ₹50ರ ನೋಟುಗಳನ್ನು ಚಲಾವಣೆಗೆ ತರಲಾಗುವುದು ಎಂದು ಡಿಸೆಂಬರ್ 4, 2016ರಂದು ಸರ್ಕಾರ ಘೋಷಿಸಿತ್ತು.