antalya otogar rent a car ordu haberleri fatsa haberleri - instagram türk takipçi al sesli chat yemek tarifleri

29 ಸಾವಿರ ಗಡಿ ದಾಟಿದ ಷೇರುಪೇಟೆ ಸೂಚ್ಯಂಕ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

29 ಸಾವಿರ ಗಡಿ ದಾಟಿದ ಷೇರುಪೇಟೆ ಸೂಚ್ಯಂಕ

Tuesday, March 07 2017
img

ಮುಂಬೈ (www.asiavisionnews.com) : ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಪೂರಕ ಮಸೂದೆಗಳಿಗೆ (ಸಿ–ಜಿಎಸ್‌ಟಿ ಮತ್ತು ಐಜಿಎಸ್‌ಟಿ) ಜಿಎಸ್‌ಟಿ ಮಂಡಳಿ ಒಪ್ಪಿಗೆ ನೀಡಿದೆ. ಈ ಬೆಳವಣಿಗೆಯು ಸೋಮವಾರ ಷೇರುಪೇಟೆಗಳಲ್ಲಿ ಉತ್ತಮ ಚಟುವಟಿಕೆ ನಡೆಯುವಂತೆ ಮಾಡಿತು.

ಮಾರ್ಚ್ 16 ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ರಾಜ್ಯ ಜಿಎಸ್‌ಟಿ ಮತ್ತು ಕೇಂದ್ರ ಜಿಎಸ್‌ಟಿ ಕರಡು ಮಸೂದೆಗಳಿಗೆ ಒಪ್ಪಿಗೆ ಸಿಗುವ ವಿಶ್ವಾಸ ವ್ಯಕ್ತವಾಗಿದೆ. ಇದು ಹೆಚ್ಚಿನ ಬಂಡವಾಳ ತೊಡಗಿಸಲು ಹೂಡಿಕೆದಾರರನ್ನು ಉತ್ತೇಜಿಸಲಿದೆ ಎಂದು ತಜ್ಞರು ಹೇಳಿದ್ದಾರೆ.

ಕಳೆದ ವಾರ ಇಳಿಮುಖ ವಹಿವಾಟು ಕಂಡಿದ್ದ ಷೇರುಪೇಟೆಗಳು ವಾರದ ವಹಿವಾಟಿನ ಮೊದಲ ದಿನ ಚೇತರಿಕೆ ಹಾದಿಗೆ ಮರಳಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 216 ಅಂಶ ಜಿಗಿತ ಕಂಡು, ಎರಡು ವರ್ಷಗಳ ಗರಿಷ್ಠ ಮಟ್ಟವಾದ 29,070 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ಈ ಹಿಂದೆ 2015ರ ಮಾರ್ಚ್‌ 5 ರಂದು 29,449 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 66 ಅಂಶ ಏರಿಕೆಯಾಗಿ, ಎರಡು ವರ್ಷಗಳ ಗರಿಷ್ಠ ಮಟ್ಟವಾದ 8,963 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಈ ಹಿಂದೆ 2015ರ ಮಾರ್ಚ್‌ 3 ರಂದು 8,996 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.

ಉತ್ತಮ ಹೂಡಿಕೆ: ಬಂಡವಾಳ ಒಳಹರಿವು ನಿರಂತರವಾಗಿದೆ. ಹೀಗಾಗಿ ಸೂಚ್ಯಂಕಗಳು ಏರಿಕೆ ಕಂಡುಕೊಳ್ಳುತ್ತಿವೆ ಎಂದು ತಜ್ಞರು ಹೇಳಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರದ ವಹಿವಾಟಿನಲ್ಲಿ ₹1,528 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದರು.

**

ರಿಲಯನ್ಸ್‌ ಕಂಪೆನಿಗೆ ಗರಿಷ್ಠ ಲಾಭ

ದಿನದ ವಹಿವಾಟಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪೆನಿ ಗರಿಷ್ಠ ಗಳಿಕೆ ಕಂಡಿತು. ಕಂಪೆನಿ ಷೇರುಗಳು ಶೇ 3.69 ರಷ್ಟು ಏರಿಕೆ ಕಂಡು, ಪ್ರತಿ ಷೇರಿನ ಬೆಲೆ ₹1,305ಕ್ಕೆ ತಲುಪಿತು. ಇದು ಒಂಬತ್ತು ವರ್ಷಗಳ ಗರಿಷ್ಠ ಮಟ್ಟವಾಗಿದೆ.

ಸದ್ಯಕ್ಕೆ ಕಂಪೆನಿ ಮಾರುಕಟ್ಟೆ ಮೌಲ್ಯ ₹23,291 ಕೋಟಿಗಳಷ್ಟು ಏರಿಕೆಯಾಗಿದೆ. ಇದರಿಂದ ಒಟ್ಟಾರೆ ಮಾರುಕಟ್ಟೆ ಮೌಲ್ಯವು ₹4.23 ಲಕ್ಷ ಕೋಟಿಗಳಿಗೆ ತಲುಪಿದೆ.

ಪ್ರವರ್ತಕರು ತಮ್ಮ ಪಾಲುದಾರಿಕೆಯನ್ನು ಮರು ಹೊಂದಾಣಿಕೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಈ ಸುದ್ದಿಯು ಕಂಪೆನಿ ಷೇರುಗಳ ಬೆಲೆ ಹೆಚ್ಚಳಗೊಳ್ಳಲು ಕಾರಣವಾಯಿತು.

Comments