Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಜೆಎನ್ ಯು ವಿದ್ಯಾರ್ಥಿ ನಾಪತ್ತೆ: ಗೆಳೆಯರ ಸುಳ್ಳುಪತ್ತೆ ಪರೀಕ್ಷೆಗೆ ಮುಂದಾದ ಅಧಿಕಾರಿಗಳು

Wednesday, December 21 2016
img

ನವದೆಹಲಿ(www.asiavisionnews.com) : ನಾಪತ್ತೆಯಾಗಿರುವ ಜೆಎನ್ ಯು ವಿದ್ಯಾರ್ಥಿ ಪ್ರಕರಣ ದೆಹಲಿ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ವಿದ್ಯಾರ್ಥಿ ಪತ್ತೆಗಾಗಿ ಪೊಲೀಸರು ಇದೀಗ ನಜೀಬ್ ಗೆಳೆಯರನ್ನು ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.


ನಿನ್ನೆಯಷ್ಟೇ ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ ಆವರಣ ಸುತ್ತಲೂ ಪೊಲೀಸರು ತಪಾಸಣೆ ನಡೆಸಿದ್ದರು. 12 ಹಿರಿಯ ಪೊಲೀಸರು ಸೇರಿದಂತೆ 600 ಹೆಚ್ಚು ಪೊಲೀಸರು ವಿವಿಯ ಆವರಣದ ಸುತ್ತಲೂ ಹುಡುಕಾಟ ನಡೆಸಿದ್ದರು.

ವಿದ್ಯಾರ್ಥಿ ಹುಡುಕವಲ್ಲಿ ಪೊಲೀಸರು ತಡ ಹಾಗೂ ವಿಫಲವಾಗುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ದೆಹಲಿ ಪೊಲೀಸರ ವಿರುದ್ಧ ಕಿಡಿ ಕಾರಿದ್ದರು.

ನಜೀಬ್ ನಾಪತ್ತೆ ಕುರಿತಂತೆ ಮಾತನಾಡಿರುವ ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಮೋಹಿತ್ ಪಾಂಡೆ ಅವರು, ನಜೀಬ್ ಹುಡುಕುವಲ್ಲಿ ಪೊಲೀಸರು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಯಾವುದೇ ನಿಯಮ ಹಾಗೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ. ನಜೀಬ್ ಗೆ ಹೊಡೆದವರನ್ನು ವಿಚಾರಣೆಗೊಳಪಡಿಸುತ್ತಿಲ್ಲ ಎಂದು ಹೇಳಿದ್ದಾರೆ.

27 ವರ್ಷದ ನಜೀಬ್ ಉತ್ತರ ಪ್ರದೇಶದ ಮೂಲದವನಾಗಿದ್ದು, ಜೆಎನ್ ಯುವಿನಲ್ಲಿ ಬಯೋಟೆಕ್ನಾಲಜಿ ವ್ಯಾಸಾಂಗ ಮಾಡುತ್ತಿದ್ದ. ಅ.14 ರ ರಾತ್ರಿ ವಿಶ್ವವಿದ್ಯಾಲಯದ ಆವರಣದಲ್ಲಿ ಎಬಿವಿಪಿ ಹಾಗೂ ನಜೀಬ್ ಗುಂಪಿನ ನಡುವೆ ಗಲಾಟೆ ನಡೆದಿತ್ತು. ಈ ಘರ್ಷಣೆ ಬಳಿಕ ಮರುದಿನ ಅ.15ರ ರಾತ್ರಿಯಿಂದ ನಜೀಬ್ ಕಾಣೆಯಾಗಿದ್ದ. ಅಂದಿನಿಂದಲೂ ದೆಹಲಿ ಪೊಲೀಸರು ವಿದ್ಯಾರ್ಥಿಗಾಗಿ ತೀವ್ರ ಶೋಧ ನಡೆಸುತ್ತಲೇ ಇದ್ದಾರೆ. ಆದರೆ, ಈ ವರೆಗೂ ವಿದ್ಯಾರ್ಥಿ ಕುರಿತು ಯಾವುದೇ ಸುಳಿವು ದೊರಕಿಲ್ಲ.

Comments