Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಉಚ್ಛಾಟಿತ ತ.ನಾ ಮುಖ್ಯಕಾರ್ಯದರ್ಶಿ ರಾಮ್ ಮೋಹನ್ ರಾವ್ ಆಸ್ಪತ್ರೆಗೆ ದಾಖಲು : ಕೆಲ ದಿನಗಳ ಹಿಂದೆ ಇವರ ನಿವಾಸಕ್ಕೆಾಯ ತೆರೆಗೆ ಇಲಾಖೆ ದಾಳಿ ನಡೆಸಿ ಅಪಾರ ಚಿನ್ನ ಹಾಗೂ ನಗದನ್ನು ವಶಕ್ಕೆ ತೆಗೆದಿದೆ.

Saturday, December 24 2016
img

ಚೆನ್ನೈ(www.asiavisionnews.com) : ಆದಾಯ ತೆರಿಗೆ ಇಲಾಖೆ ದಾಳಿ ನಂತರ ತಮಿಳುನಾಡು ಮುಖ್ಯ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿದಿದ್ದ ರಾಮ ಮೋಹನ್ ರಾವ್ ಅವರು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಶನಿವಾರ ತಿಳಿದುಬಂದಿದೆ.

ಇಂದು ಬೆಳಿಗ್ಗೆ ರಾಮ ಮೋಹನ್ ರಾವ್ ಅವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಮ ರಾವ್ ಅವರು ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಕೆಲ ದಿನಗಳ ಹಿಂದಷ್ಟೇ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ರಾಮ ಮೋಹನ್ ರಾವ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಚಿನ್ನ ಹಾಗೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. ಇದಾದ ಒಂದು ದಿನದ ಬಳಿಕ ಮುಖ್ಯ ಕಾರ್ಯದರ್ಶಿ ಸ್ಥಾನದಿಂದ ರಾಮ ರಾವ್ ಅವರನ್ನು ತಮಿಳುನಾಡು ಸರ್ಕಾರ ಕಿತ್ತುಹಾಕಿತ್ತು. ಅಲ್ಲದೆ, ಆ ಸ್ಥಾನಕ್ಕೆ ಗಿರಿಜಾ ವಿದ್ಯಾನಾಥನ್ ಅವರನ್ನು ನೇಮಕ ಮಾಡಿತ್ತು

Comments