Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಎಸ್ ಪಿ ಬಿಕ್ಕಟ್ಟು: ಮುಲಾಯಂ ಸಿಂಗ್ ಭೇಟಿ ಮಾಡಿದ ಅಖಿಲೇಶ್ ಯಾದವ್, ಅಜಂ ಖಾನ್ :ಇತ್ತೀಚಿನ ವರದಿಗಳ ಪ್ರಕಾರ ಅಖಿಲೇಶ್ ಯಾದವ್ ಆಜಂ ಖಾನ್ ಮುಲಾಯಂ ಸಿಂಗ್ ಯಾದವ್ ನಿವಾಸಕ್ಕೆ ತೆರಳಿದ್ದು ಮಹತ್ವದ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Saturday, December 31 2016

ಲಖನೌ (www.asiavisionnews.com): ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ತಮ್ಮನ್ನು ಪಕ್ಷದಿಂದ ಉಚ್ಛಾಟನೆಗೊಳಿಸಿದ ನಂತರ ಅಖಿಲೇಶ್ ಯಾದವ್ ಡಿ.31 ರಂದು ಬೆಳಿಗ್ಗೆ ಬೆಂಬಲಿಗರ ಸಭೆ ನಡೆಸಿದ್ದು, ಸಭೆಯಲ್ಲಿ ಒಟ್ಟು 207 ಶಾಸಕರು, 53 ಅಭ್ಯರ್ಥಿಗಳು(ವಿಧಾಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು) 37 ಎಂಎಲ್ ಸಿಗಳು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಅಖಿಲೇಶ್ ಯಾದವ್ ಅವರನ್ನು ಮುಲಾಯಂ ಸಿಂಗ್ ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕ ಉತ್ತರ ಪ್ರದೇಶದಲ್ಲಿ ಹಲವು ಅಚ್ಚರಿಯ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಅಖಿಲೇಶ್ ಯಾದವ್ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಚಿಂತನೆಯಲ್ಲಿದ್ದಾರೆ ಎಂಬ ವರದಿಗಳೂ ಪ್ರಕಟವಾಗಿವೆ.
ಈ ನಡುವೆ ಸಮಾಜವಾದಿ ಪಕ್ಷದ ಹಿರಿಯ ನಾಯಕನಾಗಿರುವ ಆಜಂ ಖಾನ್ ಮುಲಾಯಂ ಸಿಂಗ್ ಯಾದವ್ ಜೊತೆ ಸುಮಾರು ಒಂದು ಗಂಟೆ ಚರ್ಚೆ ನಡೆಸಿದ್ದು, ಬಳಿಕ ಅಖಿಲೇಶ್ ಯಾದವ್ ಅವರ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ ಅಖಿಲೇಶ್ ಯಾದವ್ ಆಜಂ ಖಾನ್ ಮುಲಾಯಂ ಸಿಂಗ್ ಯಾದವ್ ನಿವಾಸಕ್ಕೆ ತೆರಳಿದ್ದು ಮಹತ್ವದ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Comments