Flash News
വാർത്തകൾക്കും,പരസ്യങ്ങൾക്കും ബന്ധപെടുക:9895854501,9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಪಾಕಿಸ್ತಾನದ ಬಾಲಕಿಗೆ ವೀಸಾ ನೀಡಲು ಸುಷ್ಮಾ ಸ್ವರಾಜ್ ಸೂಚನೆ : ಕಣ್ಣಿನ ಕ್ಯಾನ್ಸರ್‌ ಚಿಕಿತ್ಸೆಗಾಗಿ ಕ್ರಮ

Tuesday, October 17 2017
img

ನವದೆಹಲಿ(www.asiavisionnews.com) : ಕಣ್ಣಿನ ಕ್ಯಾನ್ಸರ್‌ಗೆ ತುತ್ತಾಗಿರುವ ಐದು ವರ್ಷ ವಯಸ್ಸಿನ, ಪಾಕಿಸ್ತಾನದ ಬಾಲಕಿಗೆ ಚಿಕಿತ್ಸೆಗಾಗಿ ಭಾರತಕ್ಕೆ ಬರಲು ವೀಸಾ ನೀಡುವಂತೆ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆ. ಬಾಲಕಿಯ ಪಾಲಕರು ಸುಷ್ಮಾ ಅವರ ಬಳಿ ನೆರವು ಕೋರಿದ್ದರು.

‘ಕಣ್ಣಿನ ಕ್ಯಾನ್ಸರ್‌ನಿಂದ ಬಳಲುತ್ತಿರುವ 5 ವರ್ಷದ ಬಾಲಕಿ ಅನಮ್ತಾ ಫಾರುಕ್‌ಗೆ ವೀಸಾ ನೀಡಬೇಕೆಂಬ ಮನವಿ ಮಾಡಲಾಗಿತ್ತು. ತಕ್ಷಣವೇ ವೀಸಾ ನೀಡುವಂತೆ ಸೂಚಿಸಿದ್ದೇನೆ’ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

Comments