antalya otogar rent a car ordu haberleri likit satın al - instagram türk takipçi al instagram yavaş beğeni satın al ko cuce

ಉತ್ತರಾಖಂಡದ ಕಾರ್ಬೆಟ್‌ ಅರಣ್ಯದಲ್ಲಿ ನಮೋ ಸುತ್ತಾಡಿದ ಸ್ಥಳಗಳೀಗ ‘ಮೋದಿ ಕಾಲುದಾರಿ‘ಯಾಗಿ ಮಾರ್ಪಾಡು | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಉತ್ತರಾಖಂಡದ ಕಾರ್ಬೆಟ್‌ ಅರಣ್ಯದಲ್ಲಿ ನಮೋ ಸುತ್ತಾಡಿದ ಸ್ಥಳಗಳೀಗ ‘ಮೋದಿ ಕಾಲುದಾರಿ‘ಯಾಗಿ ಮಾರ್ಪಾಡು

Thursday, August 15 2019
img

ಮುಂಬೈ (www.asiavisionnews.com): ಡಿಸ್ಕವರಿ ಚಾನಲ್‌ನಲ್ಲಿ ಪ್ರಸಾರವಾದ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಖ್ಯಾತ ಸಾಹಸಿಗ ಬೆಯರ್‌ ಗ್ರಿಲ್ಸ್‌ ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ಅರಣ್ಯದಲ್ಲಿ ಸುತ್ತಾಡಿದ ಸ್ಥಳಗಳು ‘ಮೋದಿ ಕಾಲುದಾರಿ‘ ಮಾರ್ಗವನ್ನಾಗಿ ಅಭಿವೃದ್ಧಿಪಡಿಸಲು ಉತ್ತರಾಖಂಡ ಸರ್ಕಾರ ಉದ್ದೇಶಿಸಿದೆ.

ಪ್ರವಾಸೋದ್ಯಮ ಉತ್ತೇಜನದ ನಿಟ್ಟಿನಿಂದ ರಾಷ್ಟ್ರೀಯ ಉದ್ಯಾನವನದಲ್ಲಿ ಮೋದಿ ಕಾಲುದಾರಿಯನ್ನು ಅಭಿವೃದ್ಧಿಪಡಿಸಲಾಗುವುದು. ಈ ಮಾರ್ಗಕ್ಕೆ ಪ್ರತ್ಯೇಕವಾದ ಗುರುತು ನೀಡಲಾಗುವುದು. ಜಿಮ್‌ ಕಾರ್ಬೆಟ್‌ ಅರಣ್ಯಕ್ಕೆ ಭೇಟಿ ನೀಡುವ ಪ್ರವಾಸಿಗರು ಮೋದಿ ಹೋದ ಕಾಲುದಾರಿಯಲ್ಲಿ ಸುತ್ತಾಡಬಹುದಾಗಿದೆ ಎಂದು ಉತ್ತರಾಖಂಡ ಪ್ರವಾಸೋದ್ಯಮ ಸಚಿವ ಸತ್ಪಾಲ್‌ ಮಹಾರಾಜ್‌ ಹೇಳಿದ್ದಾರೆ.

ಡಿಸ್ಕವರಿ ಚಾನಲ್‌ನಲ್ಲಿ ಆ.12ರಂದು ರಾತ್ರಿ 9 ಗಂಟೆಗೆ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ಕಾರ್ಯಕ್ರಮವನ್ನು ವಿಶ್ವದ 180 ದೇಶಗಳಲ್ಲಿ ಪ್ರಸಾರ ಮಾಡಲಾಗಿತ್ತು.

... ಏಷ್ಯವಿಶನ್ ನ್ಯೂಸ್ ವಾಟ್ಸ್ ಆಪ್ಪ್ ವಜ್ಹಿ ಲಭಿಕ್ಕನ್ 9895854501 ಎನ್ನ ನಾಂಪರಿಲಿಕ್ ಮೆಸೇಜ್ ಆಯಕ್ಕುಕ...

Comments