ವ್ಯಾಪಕವಾಗುತ್ತಿರುವ ಮಕ್ಕಳ ಮಾರಾಟ ಜಾಲ : ಪೋಷಕರು ಎಚ್ಚರ ಪಾಲಿಸುವಂತೆ ನಿರ್ಧೇಶ

Saturday, November 05 2016
img

ಮೈಸೂರು: ಮಕ್ಕಳ ಮಾರಾಟ ಜಾಲ ವ್ಯಪಕವಾಗುತಿದ್ದು, ಈ ಬಗ್ಗೆ ಪೋಷಕರು ಹೆಚ್ಚೆನ ನಿಗಾ ವಹಿಸುವಂತೆ ಪೊಲೀಸರು ಕೇಳಿ ಕೊಂಡಿದ್ದಾರೆ. ಅಲೆಮಾರಿ ಜನಾಂಗ ಇದರ ಮುಖ್ಯ ಸೂತ್ರಧಾರರಾಗಿದ್ದು, ಶಂಕೆಕಂಡ ಯಾರಾದರೂ ಮನೆ ಪರಿಸರದಲ್ಲಿ ಕಂಡರೆ ಸಮೀಪದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಚಾಕ್ಲೇಟ್ ಅಥವಾ ಬಿಸ್ಕೆಟ್ ಮೋದಲಾದ ಮಕ್ಕಳಿಗೆ ಪ್ರಿಯವಾದ ವಸ್ತುಗಳನ್ನು ತೋರಿಸಿ ಅಲೆಮಾರಿ ಸ್ತ್ರೀಗಳು ಮಕ್ಕಳನ್ನು ಅಪಹರಿಸುತ್ತಿರುವುದಾಗಿ ಕೇಳಿ ಬರುತ್ತಿದೆ.

ನಂಜನಗೂಡು ಮತ್ತು ಮೈಸೂರಿನಲ್ಲಿ ಪತ್ತೆಯಾದ ಮಕ್ಕಳ ಮಾರಾಟ ಜಾಲ ಮೈಸೂರಿನಿಂದ ಹೊರಗೂ ವ್ಯಾಪಿಸಿದೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.

ಆರೋಪಿಗಳು ಕನಿಷ್ಠ 15 ಮಕ್ಕಳನ್ನು ಅಪಹರಿಸಿ ಮಾರಾಟ ಮಾಡಿದ್ದಾರೆ, ಇದರಲ್ಲಿ ಆರು ಮಂದಿ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಬಂಧಿಸಿರುವುದಾಗಿ ಮೈಸೂರು ಜಿಲ್ಲಾ ಎಸ್ ಪಿ ರವಿ.ಡಿ ಚನ್ನಣ್ಣನವರ್ ತಿಳಿಸಿದ್ದಾರೆ. ಈ ಆರು ಮಂದಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ,

ಸುಮಾರು 10 ರಿಂದ 15 ಮಕ್ಕಳನ್ನು ಅಪಹರಿಸಿ ಮಾರಾಟ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಅಪಹರಿಸಿರುವ ಬಹುತೇಕ ಮಕ್ಕಳು ಭಿಕ್ಷುಕರೇ ಆಗಿದ್ದಾರೆ. ಬಿಕ್ಷೆ ಬೇಡುವ ಮಕ್ಕಳು ಹಾಗೂ ಮನೆ ಬಿಟ್ಟು ಬಂದ ಮಕ್ಕಳೇ ಇವರ ಪ್ರಮುಖ ಟಾರ್ಗೆಟ್ ಆಗಿದ್ದಾರೆ.
ವಿವಿಧ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಲ್ಲಿ ಕೆಲಸ ಮಾಡುವ ಹಲವು ಮಂದಿ ಈ ಜಾಲದಲ್ಲಿ ಭಾಗಿಯಾಗಿದ್ದಾರೆ.

ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ತಾತ್ಕಾಲಿಕ ಸಿಬ್ಬಂದಿ ಕೂಡ ಇದರಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಮೈಸೂರಿನಲ್ಲಿ ನಾಪತ್ತೆಯಾಗಿರುವ ಮಕ್ಕಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Comments