antalya otogar rent a car Elektronik Sigara al ordu haberleri fatsa haberleri ordu haberleri sesli chat sesli chat yemek tarifleri

ಹುಬ್ಬಳ್ಳಿ : ಮಾನನಷ್ಟ ಮೊಕದ್ದಮೆ: ಗೌರಿ ಲಂಕೇಶ್ ಗೆ 6 ತಿಂಗಳು ಜೈಲು ಶಿಕ್ಷೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಹುಬ್ಬಳ್ಳಿ : ಮಾನನಷ್ಟ ಮೊಕದ್ದಮೆ: ಗೌರಿ ಲಂಕೇಶ್ ಗೆ 6 ತಿಂಗಳು ಜೈಲು ಶಿಕ್ಷೆ

Tuesday, November 29 2016
img

ಹುಬ್ಬಳ್ಳಿ(www.asiavisionnews.com) : ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ತಪ್ಪಿತಸ್ಥೆ ಎಂದು ಸೋಮವಾರ ಕೋರ್ಟ್ ತೀರ್ಪು ನೀಡಿದೆ.

ಧಾರವಾಡ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ನಡೆಸಿದ 2ನೇ ಜೆಎಂಎಫ್ಸಿ ಕೋರ್ಟ್, ಗೌರಿ ಲಂಕೇಶ ಅವರಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರುಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಗೌರಿ ಲಂಕೇಶ್ ಅವರು 2008, ಜನವರಿ 23ರಂದು ತಮ್ಮ ಪತ್ರಿಕೆಯಲ್ಲಿ ಸಂಸದ ಪ್ರಹ್ಲಾದ್ ಜೋಶಿ ಹಾಗೂ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಉಮೇಶ್ ದುಷಿ ಅವರ ವಿರುದ್ಧ ಅವಹೇಳನಕಾರಿಯಾಗಿ ಲೇಖನ ಪ್ರಕಟಿಸಿದ್ದರು. ಈ ಸಂಬಂಧ ಇಬ್ಬರೂ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು.

ಪ್ರಕರಣದ ಸುದೀರ್ಘ 8 ವರ್ಷಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಅಮರ್ ಅವರು ಅವರು ದೂರುದಾರರಾದ ಪ್ರಹ್ಲಾದ್ ಜೋಶಿ ಹಾಗೂ ಉಮೇಶಗೆ ತಲಾ 5 ಸಾವಿರ ರುಪಾಯಿ ದಂಡ ನೀಡಬೇಕು ಎಂದು ಆದೇಶ ನೀಡಿದ್ದಾರೆ. ಒಂದು ವೇಳೆ ದಂಡ ಕಟ್ಟದಿದ್ರೆ ಹೆಚ್ಚುವರಿಯಾಗಿ ಒಂದು ತಿಂಗಳು ಶಿಕ್ಷೆ ಅನುಭವಿಸಬೇಕು ಎಂದು ಹೇಳಿದ್ದಾರೆ.

ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಗೌರಿ ಲಂಕೇಶ್ ಅವರು ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ನನಗೆ ಇದೊಂದು ತಾತ್ಕಾಲಿಕ ಹಿನ್ನೆಡೆಯಾಗಿದೆ. ಪತ್ರಿಕೋದ್ಯಮದಲ್ಲಿ ಇದೆಲ್ಲ ಸಹಜ. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಕೆಲವರು ನಾನು ಜೈಲಿಗೆ ಹೋಗುತ್ತೇನೆ ಎಂದು ಆಶಿಸಿದ್ದರು. ಆದ್ರೆ ನನಗೆ ಜಾಮೀನು ಸಿಕ್ಕಿದೆ ಎಂದು ಹೇಳಿದ್ದಾರೆ.

Comments