Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಬ್ಯಾಂಕ್ ಲಾಕರ್ ಹಣದ ಮೇಲೂ ಐ. ಟಿ ಕಣ್ಣು: ನೋಟುಗಳು ರದ್ದಾಗಿರುವುದು ಬ್ಯಾಂಕ್ ಲಾಕರ್ಗಳಲ್ಲಿ ಹೆಚ್ಚು ನಗದು ಇಡಲಾಗಿದೆ ಎನ್ನುವ ಅನುಮಾನಕ್ಕೂ ಅವಕಾಶ ಮಾಡಿಕೊಟ್ಟಿದೆ. ಇದೇ ಕಾರಣಕ್ಕೆ ಬ್ಯಾಂಕ್ ಗಳು ಆದಾಯ ತೆರಿಗೆ ಇಲಾಖೆಗೆ ಲಾಕರ್ಗಳ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿವೆ.

Wednesday, December 07 2016
img

ಬೆಂಗಳೂರು(www.asiavisionnews.com) : ಬ್ಯಾಂಕ್ ಲಾಕರ್ನಲ್ಲಿ ಇಟ್ಟಿರುವ ಹಣದ ಮೇಲೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ. ಆರ್ಬಿಐ ನಿಯಮದಂತೆ ಬ್ಯಾಂಕ್ ಲಾಕರ್ನಲ್ಲಿ ನಗದು ಇಡುವಂತಿಲ್ಲ. ಒಂದೊಮ್ಮೆ ನಗದು ಇಟ್ಟಿರುವುದು ಬ್ಯಾಂಕ್ ಗಮನಕ್ಕೆ ಬಂದರೆ ಆದಾಯ ತೆರಿಗೆ ಇಲಾಖೆಗೆ ಸೂಚನೆ ನೀಡಬಹುದು. ಆಗ ಆದಾಯ ತೆರಿಗೆ ಇಲಾಖೆ ಸಿಬ್ಬಂದಿ ಅದನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.

ನೋಟುಗಳು ರದ್ದಾಗಿರುವುದು ಬ್ಯಾಂಕ್ ಲಾಕರ್ಗಳಲ್ಲಿ ಹೆಚ್ಚು ನಗದು ಇಡಲಾಗಿದೆ ಎನ್ನುವ ಅನುಮಾನಕ್ಕೂ ಅವಕಾಶ ಮಾಡಿಕೊಟ್ಟಿದೆ. ಇದೇ ಕಾರಣಕ್ಕೆ ಬ್ಯಾಂಕ್ಗಳು ಆದಾಯ ತೆರಿಗೆ ಇಲಾಖೆಗೆ ಲಾಕರ್ಗಳ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿವೆ. ಹೀಗಾಗಿ ಆದಾಯ ತೆರಿಗೆ ಇಲಾಖೆಯು ಕೆಲವು ಲಾಕರ್ಗಳ ಪರಿಶೀಲನೆ ನಡೆಸುವುದಾಗಿ ಈಚೆಗಷ್ಟೇ ನೊಟೀಸ್ ಜಾರಿ ಮಾಡಿದ್ದು, ಕೆಲ ಲಾಕರ್ಗಳಿಗೆ ನೋಟಿಸ್ ಅಂಟಿಸಿದ ನಿದರ್ಶನಗಳೂ ಇವೆ.

ಬ್ಯಾಂಕ್ನಲ್ಲಿ ಖಾತೆ ಹೊಂದಿರುವವರು ಯಾರು ಬೇಕಾದರೂ ಲಾಕರ್ ಸೌಲಭ್ಯ ಪಡೆಯಬಹುದು. ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದ ಲಾಕರ್ ಸೌಲಭ್ಯಗಳಿವೆ. ಲಾಕರ್ನ ಗಾತ್ರದ ಆಧಾರದ ಮೇಲೆ ವರ್ಷಕ್ಕೆ ₹1,500 ರಿಂದ ₹2 ಸಾವಿರದವರೆಗೆ ಬಾಡಿಗೆ ನೀಡಬೇಕಾಗುತ್ತದೆ.

ಗ್ರಾಹಕರು ಲಾಕರ್ನಲ್ಲಿ ಏನು ಇಡಲಿದ್ದಾರೆ ಎನ್ನುವುದನ್ನು ಪರಿಶೀಲಿಸುವ ಅಧಿಕಾರ ಬ್ಯಾಂಕ್ ಅಧಿಕಾರಿಗಳಿಗೆ ಇಲ್ಲ. ಗ್ರಾಹಕರಿಗೆ ಮಾತ್ರ ಗೊತ್ತಿರುವ ಸಂಗತಿ ಅದಾಗಿರುತ್ತದೆ. ಈ ನಿಯಮಗಳನ್ನೇ ಕೆಲ ಗ್ರಾಹಕರು ದುರ್ಬಳಕೆ ಮಾಡಿಕೊಂಡು ಅಪಾರ ಪ್ರಮಾಣದ ನಗದನ್ನೂ ಲಾಕರ್ಗಳಲ್ಲಿ ಅಕ್ರಮವಾಗಿ ಇಡುವ ಸಾಧ್ಯತೆ ಇರುತ್ತದೆ. ನೋಟು ರದ್ದತಿ ಕಾರಣದಿಂದಾಗಿ ಲಾಕರ್ಗಳಲ್ಲಿ ಹೊಸ ನೋಟುಗಳನ್ನು ಇಡುವ ಪ್ರವೃತ್ತಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕೆಲ ಗ್ರಾಹಕರ ಲಾಕರ್ ಪರಿಶೀಲಿಸುವ ಸಂಬಂಧ ಐ.ಟಿ ಇಲಾಖೆ ನೋಟಿಸ್ ಜಾರಿ ಮಾಡಲು ಮುಂದಾಗಿದೆ.

ಲಾಕರ್ಗೆ ಎರಡು ಕೀಗಳು ಇರುತ್ತವೆ. ಒಂದು ಗ್ರಾಹಕರ ಬಳಿ ಇನ್ನೊಂದು ಬ್ಯಾಂಕ್ನಲ್ಲಿ ಇರುತ್ತದೆ. ಎರಡೂ ಕೀಗಳಿಲ್ಲದೆ ಲಾಕರ್ ತೆರೆಯಲು ಆಗದು. ಆದರೆ, ಗ್ರಾಹಕ ಇಂತಹ ದಿನ ಲಾಕರ್ ಬಳಸಿದ್ದಾರೆ ಎಂದು ದಾಖಲೆ

ಪುಸ್ತಕದಲ್ಲಿ ನಮೂದಿಸಲಾಗಿರುತ್ತದೆ. ಲಾಕರ್ನಲ್ಲಿ ಇಟ್ಟಿರುವ ಚಿನ್ನ, ದಾಖಲೆಪತ್ರಗಳ ಬಗ್ಗೆ ಗೋಪ್ಯತೆ ಕಾಯ್ದುಕೊಳ್ಳುವುದರಿಂದ ವಿಮೆ ಸೌಲಭ್ಯವೂ ಇರುವುದಿಲ್ಲ.


Comments