ಬೆಂಗಳೂರು: ಈದ್ ಮಿಲಾದ್ : ಡಿಸೆಂಬರ್ 13ರಂದು ಸರಕಾರಿ ರಜಾ

Saturday, December 10 2016
img

ಬೆಂಗಳೂರು ((www.asiavisionnews.com): ಮುಸ್ಲಿಂರ ಪವಿತ್ರ ಹಬ್ಬ ಈದ್-ಮಿಲಾದ್ (ಪ್ರಾಫೆಟ್ ಮೊಹಮ್ಮದನ ಜನುಮದಿನ) ಪ್ರಯುಕ್ತ ಸಾರ್ವತ್ರಿಕ ರಜಾವನ್ನು ಸೋಮವಾರದ ಬದಲು ಮಂಗಳವಾರ ಡಿಸೆಂಬರ್ 13ಕ್ಕೆ ನೀಡಲಾಗಿದೆ. ಈ ಮೊದಲು ಸೋಮವಾರ ರಜಾ ಎಂದು ಘೋಷಿಸಲಾಗಿತ್ತು.

ಸೆಂಟ್ರಲ್ ಮೂನ್ ಕಮಿಟಿಯ ಅಭಿಪ್ರಾಯದಂತೆ 2016ನೇ ಸಾಲಿನ ಈದ್-ಮಿಲಾದ್ ಹಬ್ಬದ ಆಚರಣೆಗೆ ಡಿಸೆಂಬರ್ 12ರಂದು ಘೋಷಿಸಿದ ರಜಾವನ್ನು ರದ್ದುಗೊಳಿಸಿ, ಡಿಸೆಂಬರ್ 13ರ ಮಂಗಳವಾರದಂದು ಸಾರ್ವತ್ರಿಕ ರಜಾ ಘೋಷಿಸಿ ರಾಜ್ಯ ಸಕಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಕೋರ್ಟ್ ಸೋಮವಾರ ರಜಾ : ಸರಕಾರ ಮೊದಲು ಸೋಮವಾರ ರಜಾ ಘೋಶಿಸಿದ್ದರಿಂದ ಕರ್ನಾಟಕ ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳಿಗೆ ಸೋಮವಾರವೇ ರಜಾ ಪ್ರಕಟಿಸಲಾಗಿತ್ತು. ಆದರೆ, ಕಕ್ಷಿದಾರರಿಗೆ, ನ್ಯಾಯವಾದಿಗಳಿಗೆ, ನ್ಯಾಯಮೂರ್ತಿಗಳಿಗೆ ಅನನುಕೂಲವಾಗುತ್ತದೆಂದು ಮಂಗಳವಾರದ ಬದಲು ಸೋಮವಾರವೇ ನ್ಯಾಯಾಲಯಗಳಿಗೆ ರಜಾ ನೀಡಲಾಗಿದೆ.

Comments