antalya otogar rent a car Elektronik Sigara al ordu haberleri fatsa haberleri ordu haberleri sesli chat

ಮಂಗಳೂರು: ಫೋರಂ ಫೀಜಾ ಮಾಲ್ ನಿಂದ 'ರೋಕ್ ಆನ್ ಮಂಗಳೂರು' ಸ್ಪರ್ಧೆ ಡಿ. 17 .ರಂದು 'ರೋಕ್ ಆನ್ ಮಂಗಳೂರು' ಸಂಗೀತ ಸ್ಪರ್ಧೆಯು ನಗರದ ಪಾಂಡೇಶ್ವರ ಫೋರಂನ ಫೀಜಾ ಮಾಲ್ ನಲ್ಲಿ ಆಯೋಜಿಸಲಾಗಿದೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮಂಗಳೂರು: ಫೋರಂ ಫೀಜಾ ಮಾಲ್ ನಿಂದ 'ರೋಕ್ ಆನ್ ಮಂಗಳೂರು' ಸ್ಪರ್ಧೆ ಡಿ. 17 .ರಂದು 'ರೋಕ್ ಆನ್ ಮಂಗಳೂರು' ಸಂಗೀತ ಸ್ಪರ್ಧೆಯು ನಗರದ ಪಾಂಡೇಶ್ವರ ಫೋರಂನ ಫೀಜಾ ಮಾಲ್ ನಲ್ಲಿ ಆಯೋಜಿಸಲಾಗಿದೆ

Saturday, December 10 2016
img

ಮಂಗಳೂರು(www.asiavisionnews.com) : ಸಂಗೀತಗಾರರ ಪ್ರತಿಭೆಯನ್ನು ಅನಾವರಣಗೊಳಿಸಲು ಮಂಗಳೂರಿನ ಫೋರಂ ಫೀಜಾ ಮಾಲ್ ಮುಂದಾಗಿದೆ. ಪ್ರತಿಭಾವಂತ ಸಂಗೀತಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಫೋರಂ ಫೀಜಾ ಮಾಲ್ ಇದೇ ಡಿಸೆಂಬರ್ 17ರಂದು ರೋಕ್ ಆನ್ ಮಂಗಳೂರು' ಮೂಲಕ ಉತ್ತಮ ವೇದಿಕೆ ಕಲ್ಪಿಸಿ ಕೊಡುತ್ತಿದೆ.

ಹೌದು ನಗರದ ಪ್ರತಿಭಾನ್ವಿತ ಸಂಗೀತಗಾರರಿಗಂತೂ ಸಂತಸ ವಿಷಯ ಇದೇ ಬರುವ ಡಿ. 17 .ರಂದು 'ರೋಕ್ ಆನ್ ಮಂಗಳೂರು' ಸಂಗೀತ ಸ್ಪರ್ಧೆಯು ನಗರದ ಪಾಂಡೇಶ್ವರ ಫೋರಂನ ಫೀಜಾ ಮಾಲ್ ನಲ್ಲಿ ಆಯೋಜಿಸಲಾಗಿದ್ದು, ಸಂಗೀತಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಇನ್ನು ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ಉದಯೋನ್ಮುಖ ಸಂಗೀತಗಾರರು ಜನಪ್ರಿಯ ಸೂಫಿ ಕಲಾವಿದರ ಮುಂದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.


ಆಭಾ ಹಂಜೂರ(ಗಿಟಾರಿಸ್ಟ್ ) ಭಾರತದ ಅತ್ಯಂತ ಪ್ರಸಿದ್ಧ ಫ್ಯೂಷನ್ ಬ್ಯಾಂಡ್, ಸುಸ್ಮಿತ್ ಸೇನ್ ಮತ್ತು ಸುಪ್ರತಿಕ್ ಘೋಷ್ ಮಾತ್ರವಲ್ಲದೆ ಸಂಸ್ಥಾಪಕ ಹಾಗೂ ಸಂಯೋಜಕರಾಗಿರುವ ಹಿಂದಿ ಜಾನಪದ ಬ್ಯಾಂಡ್ ಔರ್ಕೊ ಲೈವ್ ಅವರು ಈ ಸಂಗೀತ ಸ್ಪರ್ಧೆಯ ನಿರ್ಣಾಯಕರಾಗಿದ್ದಾರೆ.

ಈ ಕುರಿತು ಫೋರಂ ಫೀಜಾ ಮಾಲ್ ನ ಮಾರ್ಕೆಟಿಂಗ್ ಮುಖ್ಯಸ್ಥ ಸುನೀಲ್ ಏಶ್ಯಾ ವಿಷನ್ ನ್ಯೂಸ್ ನೊಂದಿಗೆ ಮಾತನಾಡಿ , '' ಕೇವಲ ಶೈಕ್ಷಣಿಕಕ್ಕೆ ಮಾತ್ರ ಸೀಮೆತವಾಗಿರದೆ ಮಂಗಳೂರಿನಲ್ಲಿ ಬಹಳಷ್ಟು ಪ್ರತಿಭಾವಂತ ಯುವಜನರಿದ್ದಾರೆ. ಮಾತ್ರವಲ್ಲದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ಸುಕರಾಗಿದ್ದಾರೆ, ಈ ಸ್ಪರ್ಧೆ ಎಲ್ಲಾ ಪ್ರತಿಭಾನ್ವಿತರಿಗೆ ಒಂದು ಉತ್ತಮ ವೇದಿಕೆಯಾಗಿದೆ'' ಎಂದರು.


Comments