ಮಂಗಳೂರು: ಡಿಸೆಂಬರ್ 24ರಿಂದ ನಿತ್ಯವೂ ಮಂಗಳೂರಿನಿಂದ ಹೈದರಾಬಾದ್‌ ಗೆ ವಿಮಾನ

Monday, December 12 2016
img

ಮಂಗಳೂರು (www.asiavisionnews.com) : ಡಿಸೆಂಬರ್ 24ರಿಂದ ಮಂಗಳೂರಿನಿಂದ ಹೈದರಾಬಾದ್ ಗೆ ಸ್ಪೈಸ್ ಜೆಟ್ ಪ್ರತಿ ದಿನ ವಿಮಾನಯಾನ ಸೇವೆ ಆರಂಭಿಸಲಿದೆ. ಪ್ರತಿ ದಿನ ಮಧ್ಯಾಹ್ನ ಹೈದರಾಬಾದ್ ನಿಂದ 1 ಗಂಟೆಗೆ ಹೊರಡುವ ವಿಮಾನ 2.30ಕ್ಕೆ ಮಂಗಳೂರು ತಲುಪಲಿದ್ದು, ಮಂಗಳೂರಿನಿಂದ ಮಧ್ಯಾಹ್ನ 2.50ಕ್ಕೆ ಹೊರಡುವ ವಿಮಾನವು ಸಂಜೆ 4.20ಕ್ಕೆ ಹೈದರಾಬಾದ್ ತಲುಪಲಿದೆ.

ಇನ್ನು ಮಂಗಳೂರಿನಲ್ಲಿ ಇರುವ ಹೈದರಾಬಾದ್ ನ ವಿದ್ಯಾರ್ಥಿಗಳಿಗಂತೂ ಇದು ಬಹಳ ಸಂತಸದ ವಿಷಯ, ಬಹಳಷ್ಟು ವಿದ್ಯಾರ್ಥಿಗಳು ಮಂಗಳೂರಿನ ಸುರತ್ಕಲ್ ಬಳಿ ಇರುವ ಎನ್ ಐಟಿಕೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ರಜೆ ಇರುವ ಸಂದರ್ಭದಲ್ಲಿ ತಮ್ಮ ಊರಿಗೆ ಹೋಗಲು ಪರದಾಡುತ್ತಿದ್ದರು



Comments