Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ವಿಟ್ಲ :ಎಸ್.ಎಂ.ಎ ರಾಜ್ಯಾಧ್ಯಕ್ಷರಾಗಿ ಸಯ್ಯದ್ ಜಲಾಲುದ್ದೀನ್ ತಂಙಳ್

Thursday, October 19 2017
img

ವಿಟ್ಲ(www.asiavisionnews.com) : ರಾಜ್ಯ ಸುನ್ನೀ ಮದರಸ ಮ್ಯಾನೇಜ್‌ಮೆಂಟ್‌ ಅಸೋಸಿಯೇಷನ್ (ಎಸ್ಎಂಎ) ಅಧ್ಯಕ್ಷರಾಗಿ ಸಯ್ಯದ್ ಜಲಾಲುದ್ದೀನ್ ತಂಙಳ್ ಮಲ್ಜಹ್ ಆಯ್ಕೆಯಾಗಿದ್ದಾರೆ.

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಎಸ್.ಎಂ.ಎ ನ್ಯಾಷನಲ್ ಉಪಾಧ್ಯಕ್ಷ ಸಯ್ಯದ್ ಜಮಲುಲ್ಲೈಲಿ ತಂಙಳ್ ನೇತೃತ್ವದಲ್ಲಿ 20 ಜಿಲ್ಲೆಗಳ ಪ್ರತಿನಿಧಿಗಳ ರಾಜ್ಯ ನೂತನ ಸಮಿತಿ ಅಸ್ತಿತ್ವಕ್ಕೆ ಬಂತು.

ಗೌರವಾಧ್ಯಕ್ಷರಾಗಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರ, ಉಪಾಧ್ಯಕ್ಷರಾಗಿ ಸಅದ್ ಮುಸ್ಲಿಯಾರ್ ಆತೂರು, ಅಬ್ದುಲ್ ಖಾದರ್ ಹಾಜಿ, ಇಸ್ಮಾಯಿಲ್ ಮುಸ್ಲಿಯಾರ್, ನಾಸೀರ್ ಬಾಳೆಹೊನ್ನೂರು ಶಿವಮೊಗ್ಗ, ಮುಹಿಯುದ್ದೀನ್ ಹಾಜಿ ಉಡುಪಿ, ಒ.ಕೆ ಸಹಿದ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಎ.ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಕಾರ್ಯದರ್ಶಿಯಾಗಿ ಕತರ್ ಬಾವ ಹಾಜಿ ಮಂಗಳೂರು, ಹಾಜಿ ಕೆ.ಎ ಹಮೀದ್ ಕೊಡಂಗಾಯಿ, ಅಶ್ರಫ್ ಸಖಾಫಿ ಮೂಡಡ್ಕ, ಇಬ್ರಾಹಿಂ ಕೊಡತ್ತೂರು, ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ಕೆ.ಎಂ ಕಾಮಿಲ್ ಸಖಾಫಿ, ಸ್ವಾದಿಕ್ ಮಾಸ್ಟರ್, ಕೋಶಾಧಿಕಾರಿಯಾಗಿ ಯೂಸುಫ್ ಹಾಜಿ ಚಿಕ್ಕಮಗಳೂರು, ಹಾಗೂ 41 ಮಂದಿ ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಯಿತು.

ಕಾರ್ಯಕ್ರಮದ ವೀಕ್ಷಕರಾಗಿ ನ್ಯಾಷನಲ್ ಕಾರ್ಯದರ್ಶಿ ರಹೀಂ ಸಾಹಿಬ್, ಮುಸ್ತಾಫ ಫೈಝಿ, ಚುನಾವಣಾ ಸಂಚಾಲಕ ಸಅದ್ ಮುಸ್ಲಿಯಾರ್ ಆತೂರು ಭಾಗವಹಿಸಿದ್ದರು.

Comments