Monday, December 16, 2019
ತಲಪಾಡಿ: (asiavisionnews.com )ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದ ಯು.ಟಿ.ಖಾದರ್ ಭರ್ಜರಿ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆಂದು ಕಾಸರಗೋಡು ಜಿ.ಪಂ.ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಹೇಳಿದರು.
ತಲಪಾಡಿ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಯು.ಟಿ.ಖಾದರ್ ಪರ ಚುನಾವಣಾ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಂಗಳೂರು ಕ್ಷೇತ್ರದಲ್ಲಿ 900 ಕೋ.ರೂ.ಗೂ ಮಿಕ್ಕಿದ ಅಭಿವೃದ್ಧಿ ಯೋಜನೆಗಳನ್ನು ಜ್ಯಾರಿಗೊಳಿಸುವ ಮೂಲಕ ಉಳ್ಳಾಲ ಪ್ರದೇಶದಲ್ಲಿ ಹಿಂದೆಂದೂ ಕಂಡಿರದ ಅಭಿವೃದ್ದಿ ಕ್ರಾಂತಿಯನ್ನು ಮಾಡಿದ ಯು.ಟಿ.ಖಾದರ್ ಜನರ ನಡುವೆ ಬೆರೆತು ಓಡಾಡಿ,ಸಾಮಾನ್ಯ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದ ಜನನಾಯಕರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ತಲಪಾಡಿ,ಕೆ.ಸಿ.ರೋಡ್, ಕೆ.ಸಿ.ನಗರ, ಪಂಜಾಳ ಪ್ರದೇಶಗಳಲ್ಲಿ ನೂರಾರು ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸಿದರು. ತಾಲೂಕು ಪಂಚಾಯತು ಸದಸ್ಯ ಸಿದ್ದೀಕ್ ತಲಪಾಡಿ, ಚುನಾವಣಾ ಉಸ್ತುವಾರಿಗಳಾದ ಶ್ರೀನಿವಾಸ ಶೆಟ್ಟಿ, ಇಕ್ಬಾಲ್,ಮಂಜೇಶ್ವರದ ಕಾಂಗ್ರೆಸ್ ಮುಖಂಡರಾದ ಸಂಕಬೈಲು ಸತೀಶ ಅಡಪ್ಪ, ಓಂಕೃಷ್ಣ ಮುಂತಾದವರು ಉಪಸ್ಥಿತರಿದ್ದರು.