Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಸಂಖ್ಯಾಬಲದ ಹೊಡೆತಕ್ಕೆ 55 ಗಂಟೆಗಳಲ್ಲಿ ಉರುಳಿದ ಕರ್ನಾಟಕದ ಬಿಜೆಪಿ ಸರಕಾರ: ವಿಶ್ವಾಸ ಮತವಿಲ್ಲದೆ ಶಿಕಾರಿಯಾದ ಯಡಿಯೂರಪ್ಪ: ಆಪರೇಶನ್ ಸಕ್ಸಸ್ ಕೂಡಾ ಇಲ್ಲ: ಕಮಲ ಅರಳಲೂ ಇಲ್ಲ

Saturday, May 19 2018
img

ಬೆಂಗಳೂರು(www.asiavisionnews.com):ಬಹಳ ಕುತೂಹಲ ಕೆರಳಿಸಿದ ಕರ್ನಾಟಕ ಚುನಾವಣೆ ಯಲ್ಲಿ ಮುಖ್ಯಮಂತ್ರಿಯಗಿ ಅಧಿಕ್ಕಾರವೇರಿದ ಬಿ ಎಸ್ ಯಡಿಯೂರಪ್ಪ ರವರು ಕೇವಲ 55 ಗಂಟೆಗಳಲ್ಲಿ ನಿರ್ಗಮಿಸಬೇಕಾದ ಪರಿಸ್ಥಿತಿಗೆ ವಿಧಾನ ಸಭೆ ಶನಿವಾರದಂದು ಸಾಕ್ಷಿಯಾಯಿತು.

ಶನಿವಾರ ಬೆಳಗ್ಗಿನಿಂದ ನಾವೇ ಸರಕಾರದಲ್ಲಿ ಮುಂದುವರಿಯುತ್ತೇವೆಂದು ಹೇಳುತಿದ್ದ ಬಿಜೆಪಿ ನಾಯಕ ಯಡಿಯೂರಪ್ಪರವರು ಕೊನೆಗೆ ವಿಶ್ವಾಸಮತ ಯಾಚನೆ ಮಾಡದೆ ನೇರವಾಗಿ ರಾಜಭವಣಕ್ಕೆ ತೆರಳಿ ತನ್ನ ರಾಜೀನಾಮೆಯನ್ನು ನೀಡಬೇಕಾದ ದುಸ್ಥಿತಿ ಬಂದೊದಗಿದೆ.

ಈ ನಿಟ್ಟಿನಲ್ಲಿ ಮೂರನೇ ಸರ್ತಿ ಕೂಡಾ ಯಡಿಯೂರಪ್ಪರವರಿಗೆ ಮುಖ್ಯ ಮಂತ್ರಿಯಾಗಿ ಮುಂದುವರಿಯುವ ಭಾಗ್ಯ ಒದಗಿ ಬಂದಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರುಗಳು ಹೆಗಲಿಗೆ ಹೆಗಲು ಕೊಟ್ಟು 2019 ರ ಲೋಕ ಸಭಾ ಚುನಾವಣೆಯಲ್ಲೂ ಕೋಮುವಾದಿ ಶಕ್ತಿಗಳನ್ನು ಉರುಳಿಸುವುದಾಗಿ ನಾಯಕರುಗಳು ಘೋಷಣೆಯನ್ನು ಮಾಡಿದ್ದಾರೆ. ಇದೀಗ ಜೆ ಡಿ ಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರದ ರೂಪೀಕರಣಕ್ಕೆ ತಯಾರಿ ನಡೆಯುತ್ತಿದೆ.


Comments