Flash News
വാർത്തകൾക്കും,പരസ്യങ്ങൾക്കും ബന്ധപെടുക:9895854501,9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಕಾಸರಗೋಡು ಜಿಲ್ಲೆಯಲ್ಲಿ ಬಿಜೆಪಿ ಆಹ್ವಾನ ನೀಡಿದ ಹರತಾಳ ಪೂರ್ಣ ಅಲ್ಲಲ್ಲಿ ಸಣ್ಣ ಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಎಲ್ಲಿಯೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ

Tuesday, January 03 2017
img

ಮಂಜೇಶ್ವರ(www.asiavisionnews.com): :ಸಿಪಿಎಂ ಅಕ್ರಮಣಕ್ಕೆ ಹಾಗು ಅಸಹಿಷ್ಣುತೆಯ ವಿರುದ್ದ ಬಿಜೆಪಿ ತೃಕ್ಕರಿಪ್ಪುರ ವಿಧಾನ ಸಭಾ ಕ್ಷೇತ್ರದ ಸಮಿತಿಯ ನೇತೃತ್ವದಲ್ಲಿ ಚೆರ್ವತ್ತೂರಿನಿಂದ ಆರಂಭಿಸಿದ ಮೆರವಣಿಗೆ ನಡೆದ ಕಲ್ಲೆಸೆತಕ್ಕೆ ಸಂಬಂಧಿಸಿ ಪೊಲೀಸರು ಹಿಂಸಾಚಾರಕ್ಕೆ ಬೆಂಬಲವನ್ನು ನೀಡುವುದಾಗಿ ಆರೋಪಿಸಿ ಬಿಜೆಪಿ ಜಿಲ್ಲಾ ಸಮೀತಿ ಕಾಸರಗೋಡು ಜಿಲ್ಲೆಯಲ್ಲಿ ಆಹ್ವಾನ ನೀಡಿದ ಹರತಾಳ ಪೂರ್ಣ ಗೊಂಡಿದೆ.

. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಹರತಾಳ ನಡೆಯಲಿದೆ. ಕಾಸರಗೋಡು, ಕುಂಬಳೆ, ಉಪ್ಪಳ, ಮಂಜೇಶ್ವರ ಪ್ರದೇಶಗಳಲ್ಲಿ ಹರತಾಳ ಬಹುತೇಕ ಪೂರ್ಣಗೊಂಡಿದೆ. ಕೆಲವೊಂದು ಬೆರಳೆಣಿಕೆಯ ಬಸ್ಸುಗಳ ಓಡಾಟ ಹೊರತು ಬಹುತೇಕ ಬಸ್ಸುಗಳು ರಸ್ತೆಗಿಳಿಯಲಿಲ್ಲ. ವಾಹನಗಳ ಸೌಕರ್ಯ ಇಲ್ಲವಾದ ಕಾರಣ ಜಿಲ್ಲೆಯ ಶಾಲಾ ಕಾಲೇಜುಗಳು ಮುಚ್ಚಿಕೊಂಡಿತ್ತು. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್ ಗಳಿಲ್ಲದೆ ಪರದಾಡುತ್ತಿರುವ ದೃಶ್ಯ ಕಂಡು ಬಂತು. ಈ ತನಕ ಎಲ್ಲಿಯೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಕಾಸರಗೋಡು ಸೇರಿದಂತೆ ಕೆಲವೊಂದು ನಗರಗಳಲ್ಲಿ ಬಿಜೆಪಿ ಕಾರ್ಯಕರ್ತರು ವಾಹನ ಸಂಚಾರಕ್ಕೆ ತಡೆಯೊಡ್ಡುತ್ತಿರುವ ದೃಶ್ಯ ಕಂಡು ಬಂತು. ಎಲ್ಲಾ ಕಡೆಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪತ್ರಿಕಾ ವಾಹನ, ಶಬರಿಮಲೆ ವಾಹನ, ಆಸ್ಪತ್ರೆ ಸಾಗುವ ವಾಹನ, ಎಂಬಿವುಗಳಿಗೆ ಹರತಾಳದಿಂದ ವಿನಾಯಿತಿ ನೀಡಲಾಗಿದೆ.

Comments