ಉಪ್ಪಳ ನಯಾಬಜಾರ್: ಭೀಕರ ರಸ್ತೆ ಅಪಘಾತ ನಾಲ್ವರ ದುರ್ಮರಣ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ಸ್ಪಾಟ್ ಡೆತ್ ತ್ರಿಶೂರು ಚೇಲಕ್ಕರ ನಿವಾಸಿಗಳಾದ ರಾಮನಾರಾಯಣ, ಪತ್ನಿ ವಲ್ಸಲ, ಪುತ್ರ ರತ್ನಜಿತ್ ಹಾಗು ಪುತ್ರನ ಸ್ನೇಹಿತ ನಿಥಿನ್ ಮೃತ ದುರ್ದೈವಿಗಳು

Wednesday, January 04 2017
img

ಮಂಜೇಶ್ವರ (www.asiavisionnews.com): ಡಿಸೈರ್ ಸ್ವಿಫ್ಟ್ ಕಾರು ಹಾಗು ಟ್ರಕ್ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ತಂದೆ ತಾಯಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಘಟನಾ ಸ್ಥಳದಲ್ಲೇ ದಾರುಣವಾಗಿ ಮೃತ ಪಟ್ಟ ಘಟನೆ ಉಪ್ಪಳ ಸಮೀಪದ ನಯಾ ಬಜಾರ್ ಎ ಜೆ ಆಂಗ್ಲ ಮಾಧ್ಯಮ ಶಾಲಾ ಮುಂಬಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ 4 ಗಂಟೆಯ ಸುಮಾರಿಗೆ ಸಂಭವಿಸಿದೆ.

ಅಪಘಾತ್ದಲ್ಲಿ ಕಾರಿನಲ್ಲಿದ್ದ ಕೇರಳ ತ್ರಿಶೂರು ನಿವಾಸಿಗಳಾದ ಒಂದೇ ಕುಟುಂಬದ ತಂದೆ ತಾಯಿ ಹಾಗು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ತ್ರಿಶೂರಿನಿಂದ ಮಂಗಳೂರು ಕಡೆ ಸಾಗುತಿದ್ದ ಕಾರು ಹಾಗು ಎದುರಿನಿಂದ ಆಗಮಿಸಿದ ಟ್ರಕ್ ಪರಸ್ಪರ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

Comments