Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮೀಂಜ: ಮಜಿಬೈಲ್ ವಾರ್ಡ್ ಉಪಚುನಾವಣೆ ಬಿಜೆಪಿ ದೂಳಿಪಟ ಎಲ್ ಡಿ ಎಫ್ 133 ಮತಗಳ ಅಂತರದಲ್ಲಿ ಗೆಲುವು ಮೀಂಜ ಪಂ. ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಎಲ್ ಡಿ ಎಫ್ ಅಭ್ಯರ್ಥಿ ಶಾಂತರಾಂ ಶೆಟ್ಟಿ ಪ್ರತಿ ಸ್ಪರ್ಧಿ ಬಿಜೆಪಿ ಯ ಚಂದ್ರಹಾಸರನ್ನು ಭಾರೀ ಅಂತರದಿಂದ ಸೋಲಿಸಿದ್ದಾರೆ

Thursday, January 05 2017
img

ಮಂಜೇಶ್ವರ(www.asiavisionnews.com): ಮೀಂಜ ಪಂ. ನ 11 ನೇ ವಾರ್ಡು ಮಜಿಬೈಲ್ ಉಪಚುನಾವಣೆಯ ಲ್ಲಿ ಬಿಜೆಪಿ ದೂಳಿಪಟವಾಗಿದೆ.

ಎಲ್ ಡಿ ಎಫ್ ಅಭ್ಯರ್ಥಿ ಶಾಂತರಾಂ ಶೆಟ್ಟಿಯವರು ಪ್ರತಿ ಸ್ಪರ್ಧಿ ಬಿಜೆಪಿಯ ಚಂದ್ರಹಾಸರನ್ನು 133 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

ನಾಲ್ಕು ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿಸ್ಪರ್ಧಿಸಿ ಗೆಲುವು ಸಾಧಿಸಿದ ಯಶೋಧ ಎಂಬವರು ನಿಧನರಾದ ಹಿನ್ನೆಲೆಯಲ್ಲಿ ಮಜಿಬೈಲು ವಾರ್ಡಿನಲ್ಲಿ ಉಪಚುನಾವಣೆ ನಡೆದಿದೆ. ಇಂದು ಬೆಳಿಗ್ಗೆ 10 ಗಂಟೆಗೆ ಪಂಚಾಯತು ಹಾಲ್ ನಲ್ಲಿ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸಲಾಗಿತ್ತು.

ಚುನಾವಣಾ ಕಣದಲ್ಲಿ ಬಿಜೆಪಿ, ಐಕ್ಯರಂಗ ಹಾಗು ಎಡರಂಗ ಹಾಗು ಒಬ್ಬ ಸ್ವತಂತ್ರ ಅಭ್ಯರ್ಥಿ ಇದ್ದರು.
ಈ ಸಲದ ಚುನಾವಣೆಯಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಬಿಜೆಪಿ ನೇತಾರರ ದಂಡು ಮಜಿಬೈಲ್ ಗೆ ಆಗಮಿಸಿ ಪ್ರಚಾರ ನಡೆಸಿದ್ದರೂ ಫಪ್ರದವಾಗಲಿಲ್ಲ. ಬಿಜೆಪಿ ಸರಕಾರ ಇಕ್ಕಟ್ಟಿನಲಿ ಸಿಲುಕಿಸಿದ ನೋಟಿನ ಸಮಸ್ಯೆ ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟೊಂದು ಗಾಢವಾಗಿ ಪರಿಣಾಮ ಭೀರಿದೆ ಎಂಬುದಕ್ಕೆ ಈ ಚುನಾವಣೆಯೇ ಸಾಕ್ಷಿ ಎಂಬುದಾಗಿ ಎಲ್ ಡಿ ಎಫ್ ಮಂಜೇಶ್ವರ ಮಂಡಲ ಕನ್ವೀನರ್ ಬಿ ವಿ ರಾಜನ್ ತಿಳಿಸಿದ್ದಾರೆ.

Comments

haberler antalya haberleri