antalya otogar rent a car Elektronik Sigara al ordu haberleri fatsa haberleri ordu haberleri sesli chat

ಶ್ರೀ ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲೆ ಮೀಯ ಪದವು ಸುವರ್ಣ ಮಹೋತ್ಸವ ಶುಕ್ರವಾರ ಹಾಗು ಶನಿವಾರ ಗಳಲ್ಲಿ ನಾರಾಯಣೀಯಂ ಸಭಾ ಮಂಟಪ ಮೀಯಪದವಿನಲ್ಲಿ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಶ್ರೀ ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲೆ ಮೀಯ ಪದವು ಸುವರ್ಣ ಮಹೋತ್ಸವ ಶುಕ್ರವಾರ ಹಾಗು ಶನಿವಾರ ಗಳಲ್ಲಿ ನಾರಾಯಣೀಯಂ ಸಭಾ ಮಂಟಪ ಮೀಯಪದವಿನಲ್ಲಿ

Thursday, January 05 2017
img

ಮಂಜೇಶ್ವರ (www.asiavisionnews.com): ಶ್ರೀ ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲಾ ಸುವರನ ಮಹೋತ್ಸವ ಇದೇ ಬರುವ ಶುಕ್ರವಾರ ಹಾಗು ಶನಿವಾರಗಳಂದು ವೈವಿಧ್ಯಪೂರ್ಣ ಸಭೆ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದಾಗಿ ಸಂಬಂಧಪಟ್ಟವರು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಜ.6 ರಂದು ಶುಕ್ರವಾರ ಬೆಳಿಗ್ಗೆ 9.30 ಕ್ಕೆ ಶ್ರೀಮದ್ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಗಳು ದೀಪ ಪ್ರಜ್ವಲನಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡುವರು.ಕುಳಬೈಲು ಮಸೀದಿ ಖತೀಬ್ ಸೈಫುಲ್ಲಾ ಮುಸ್ಲಿಯಾರ್ ಕುಳಬೈಲು ಮತ್ತು ಮೀಯಪದವು ಫಾತಿಮಾ ಚರ್ಚ್ ಧರ್ಮಗುರು ಅನಿಲ್ ಜೋಯೆಲ್ ಡಿಸೋಜಾ ಉಪಸ್ಥಿತರಿರುವರು.ಬಳಿಕ 10 ರಿಂದ 11 ಗಂಟೆಯವರೆಗೆ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

11 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ನೂತನ ಸಭಾ ಭವನವನ್ನು ಶಾಸಕ ಪಿ.ಬಿ ಅಬ್ದುಲ್ ರಝಾಕ್ ಲೋಕಾರ್ಪಣೆಗೊಳಿಸುವರು.ಪ್ರಸಿದ್ದ ಸಾಹಿತಿ ವೈದೇಹಿ ಅಧ್ಯಕ್ಷತೆ ವಹಿಸುವರು.ಸುವರ್ಣ ಮಹೋತ್ಸವ ಸಮಾರಂಭವನ್ನು ಪ್ರಸಿದ್ದ ಕವಿ,ಸಿನಿಮಾ ಗೀತ ರಚನೆಕಾರ ಜಯಂತ ಕಾಯ್ಕಿಣಿ ಉದ್ಘಾಟಿಸುವರು.ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಜಿಸಿ ಬಶೀರ್,ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್,ಮೀಂಜ ಗ್ರಾ.ಪಂ.ಅಧ್ಯಕ್ಷೆ ಶಂಶಾದ್ ಶುಕೂರ್,ಹೈಯರ್ ಸೆಕೆಂಡರಿ ವಿಭಾಗೀಯ ಸಹಾಯಕ ನಿರ್ದೇಶಕಿ ಮಾಯಾ ಪಿ.ಎಂ,ಜಿಲ್ಲಾ ವಿದ್ಯಾಭ್ಯಾಸ ನಿರ್ದೇಶಕ ಯು.ಕರುಣಾಕರನ್,ಉದ್ಯಮಿ ಶ್ರೀಧರ ಶೇನವ ದೇರಂಬಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.ಬಳಿಕ ಸಾಹಿತಿ ಡಿ.ಕೆ.ಚೌಟ ರ ಅಧ್ಯಕ್ಷತೆಯಲ್ಲಿ ಕರ್ನಾಟಕ ಬ್ಯಾಂಕ್ ನ ಆಡಳಿತ ನಿರ್ವಹಣಾಧಿಕಾರಿ ಪಿ.ಜಯರಾಮ ಭಟ್
ಎಂ.ರಾಮಕೃಷ್ಣ ರಾವ್ ಸ್ಮರಣಾರ್ಥ ರಾಮಕೃಷ್ಣ ಗ್ರಂಥಾಲಯ,ತರಗತಿ ಕೊಠಡಿ ಮತ್ತು ಕೀರ್ತಿಶೇಷ ಸ್ಥಾಪಕ ಸದಸ್ಯರ ಭಾವಚಿತ್ರ ಅನಾವರಣಗೊಳಿಸುವರು.ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ಆಯೋಗದ ಸದಸ್ಯ ಮಾರ್ಸೆಲ್ ಮೊಂತೇರೋ ಅªವನ ಸಂಕಲನ,ಶಾಲಾ É್ಮುನಡ್ಕ ಮತ್ತು ವಿದ್ಯಾವರ್ಧಕ ಎಯುಪಿ ಶಾಲಾ ಸಂಚಾಲಕಿ ರಾಜೇಶ್ವರಿ ಎಸ್ ರಾವ್ ಉಪಸ್ಥಿತರಿರುವರು.12.30 ರಿಂದ 1.30ರ ವರೆಗೆ ಸುಭಾಷ್ ಅರುಕರ ಮತ್ತು ತಂಡದವರಿಂದ ಮಲೆಯಾಳ ಜಾನಪದ ನೃತ್ಯ ವೈಭವ ನಾಡಂಪಾಟ್ಟ್ ಪ್ರದರ್ಶನಗೊಳ್ಳುವುದು.

ಅಪರಾಹ್ನ 2.30 ರಿಂದ ಶಾಲಾ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಬಿಡುಗಡೆಗೊಳಿಸುವರು.

ಮಂಗಳೂರು ಮಂಗಳಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಗಣಪತಿ ಪಿ, ಮುಂಬಯಿಯ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.3. ರಿಂದ ನಡೆಯುವ ವಿಶೇಷ ಸಮಾರಂಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಕೆ.ಎ.ಎಂ ಅನ್ಸಾರಿ ಬರೆದಿರುವ ಕಾದಂಬರಿ ಹಾಗು ಕವನ ಸಂಕಲನ, ಶಾಲಾ ವಿದ್ಯಾರ್ಥಿನಿ ಶ್ರೀವಿದ್ಯಾ ಪೊಳ್ಳಕಜೆ ಬರೆದಿರುವ ಕಥಾ ಸಂಕಲನಗಳನ್ನು ಹಿರಿಯ ಸಾಹಿತಿ ಚಂದ್ರಕಲಾ ನಂದಾವರ ಬಿಡುಗಡೆಗೊಳಿಸುವರು.ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಉಪಸ್ಥಿತರಿರುವರು.ಬಳಿಕ ಶಾಲಾ ವಿದ್ಯಾರ್ಥಿಗಳಿಂದ ನಾಟಕ,ಸಾಧಕ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದ್ದು,ಕರ್ನಾಟಕ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್,ದೇರಳಕಟ್ಟೆ ನಿಟ್ಟೆ ವಿವಿಯ ಉಪಕುಲಪತಿ ಪ್ರೊ.ಎಸ್ ರಮಾನಂದ ಶೆಟ್ಟಿ,ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ,ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ನಂದಿಕೇಶನ್ ಉಪಸ್ಥಿತರಿರುವರು.ಬಳಿಕ ನೃತ್ಯ ವೈವಿಧ್ಯ,ತುಳು ನಾಟಕ ಮೊದಲಾದ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿದೆ.

ಜ.7 ರಂದು ಶನಿವಾರ ಬೆಳಿಗ್ಗೆ 10.30 ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ,ಬಳಿಕ ನಿವೃತ್ತ ಅಧ್ಯಾಪಕರಿಗೆ ಅಭಿನಂದನೆ ನಡೆಯಲಿದ್ದು, ಅಳಿಕೆ ಸತ್ಯಸಾಯಿ ವಿಹಾರದ ಸಂಜೀವ ಶೆಟ್ಟಿ ಆಶಯ ಭಾಷಣಗೈಯ್ಯುವರು.ಉದ್ಯಮಿ ರಘುರಾಮ ಶೆಟ್ಟಿ ಕೂಳೂರು,ವಕೀಲ ಸುಧಾಕರ ಅರಾಟೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.ಪಲ್ಲವಿ ಪ್ರಭು,ಟಿ.ವಿ.ಗಿರಿ ಮತ್ತು ಪ್ರಸಿದ್ದ ಗಾಯಕರಿಂದ ಸಂಗೀತ ರಸಮಂಜರಿ ಅಪರಾಹ್ನ 1.30 ರಿಂದ 3.30ರ ವರೆಗೆ ನಡೆಯಲಿದೆ.ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನೃತ್ಯನ ಬಯಲಾಟ ಪ್ರದರ್ಶನಗೊಳ್ಳುವುದು.ಸಂಜೆ 4.30 ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾದ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್,ಕರ್ನಾಟಕದ ಆಹಾರ,ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್,ಸಂಸದ ಪಿ.ಕರುಣಾಕರನ್,ನಳಿನ್ ಕುಮಾರ್ ಕಟೀಲು,ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಉಪಸ್ಥಿತರಿರುವರು.ಶಿಕ್ಷಣ ತಜ್ಞ,ವೈದ್ಯ ಡಾ.ಬಿ.ಎಂ.ಹೆಗ್ಡೆ ಸಮಾರೋಪ ಭಾಷಣ ಮಾಡುವರು.

ಮಾಜಿ ಶಾಸಕ ವಕೀಲ.ಸಿ.ಎಚ್ ಕುಂಞÂಂಬು,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿರ್ದೇಶಕ ಚಂದ್ರಶೇಖರ ನೆಲ್ಯಾಡಿ,ಮಂಜೇಶ್ವರ ತಹಶೀಲ್ದಾರ್ ಶಶಿಧರ ಶೆಟ್ಟಿ ಉಪಸ್ಥಿತರಿರುವರು.ಬಳಿಕ ನೃತ್ಯ ವಿಲಾಸಿನಿ ಗುರುವಾಯೂರು ಅಪರ್ಣಾ ಕೆ.ಶರ್ಮಾ ರಿಂದ ಭರತನಾಟ್ಯ,ರಾಜೇಶ್ ಮಳಿ ಮತ್ತು ತಂಡದವರಿಂದ ಮೆಗಾ ಮ್ಯಾಜಿಕ್ ಪ್ರದರ್ಶನಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.ಪತ್ರಿಕಾ ಗೋಷ್ಟಿಯಲ್ಲಿ ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಡಾ. ಜಯಪ್ರಕಾಶ ತೊಟ್ಟತ್ತೋಡಿ, ಕಿರಣ್ ಕುದುರೆಕೋತ್, ಯೋಗೀಶ್ ರಾವ್ ಚಿಗುರುಪಾದೆ, ಶ್ರೀಧರ್ ರಾವ್ ಆರ್ ಎಂ, ಗೋಪಾಲ ಕೃಷ್ಣ ಭಟ್ ಎಚ್ ಎಂ, ಹರೀಶ್ ಜೆ ಹಾಗು ಶರತ್ ಕೇಶವ್ ಮೊದಲಾದವರು ಉಪಸ್ಥರಿದ್ದರು.

Comments

haberler antalya haberleri