ಅಭಿಮಾನಿ ಬಳಗ ಜೋಡುಕಲ್ಲು ಅರ್ಪಿಸುವ ರಂಗೋತ್ಸವ – 2017 ದಿನಾಂಕ 08 – 01 – 2017 ಆದಿತ್ಯವಾರ ಸಂಜೆ 6.30 ಕ್ಕೆ ಜೋಡು ಕಲ್ಲು ಜಂಕ್ಷನ್ ನಲ್ಲಿ

Thursday, January 05 2017
img

ಮಂಜೇಶ್ವರ (www.asiavisionnews.com) : ಅಭಿಮಾನಿ ಬಳಗ ಜೋಡುಕಲ್ಲು ಅರ್ಪಿಸುವ ರಂಗೋತ್ಸವ 2017 ಇದೇ ಬರುವ ಜನವರಿ 8 ರಂದು ಆದಿತ್ಯವಾರ ಸಾಕ್ಷಾತ್ಕಾರವಾಗಲಿರುವುದಾಗಿ ಸಂಬಂಧಪಟ್ಟವರು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಹಿರಿಯ ಕಿರಿಯ ಕಲಾವಿದರನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿ ಗೌರವಿಸುವ ಹಾಗು ಕಲಾಭಿಮಾನಿಗಳನು ಒಟ್ಟುಗೂಡಿಸುವ ಮಹತ್ತರ ಉದ್ದೇಶದಿಂದ ಜೋಡು ಕಲ್ಲು ಅಭಿಮಾನಿ ಬಳಗಕ್ಕೆ ರೂಪು ನೀಡಿರುವುದಾಗಿ ಹೇಳಲಾಗಿದೆ. ಈ ಸಂದರ್ಭ ಬಯ್ಯ ಮಲ್ಲಿಗೆ ನಾಟಕ ಮರು ಪ್ರದರ್ಶನ ಕಾಣಲಿರುವುದಾಗಿ ಸಂಬಂಧಪಟ್ಟವರು ತಿಳಿಸಿದರು. ಝಡ್ ಎ ಕಯ್ಯಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಉದ್ಘಾಟಿಸಲಿದ್ದಾರೆ.

ಈ ಸಂದರ್ಭ ಹಲವಾರು ಮಂದಿ ಗಣ್ಯ ವ್ಯಕ್ತಿಗಳು ಮುಖ್ಯ ಅಥಿತಿಗಳಾಗಿರುವರು. ಪತ್ರಿಕಾ ಗೋಷ್ಟಿಯಲ್ಲಿ ಝಡ್ ಎ ಕಯ್ಯಾರ್, ಸುರೇಶ್ ಶೆಟ್ಟಿ, ಗೋಕುಲ್ ದಾಸ್ ಪಟ್ಲ, ಸಿದ್ದೀಖ್ ಜೋಡು ಕಲ್ಲು ಹಾಗು ಮೆಲ್ವಿನ್ ಬಿ ಅಲ್ಮೇಡಾ ಉಪಸ್ಥರಿದ್ದರು.

Comments