antalya otogar rent a car Elektronik Sigara al ordu haberleri fatsa haberleri ordu haberleri sesli chat

ಮೀಯಪದವು: ವಿದ್ಯೆ ಮತ್ತು ವಿನಯಗಳೇ ವಿದ್ಯಾರ್ಥಿಗಳಿಗೆ ಶೋಭೆ- ಎಡನೀರು ಶ್ರೀ ಮೀಯ ಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲಾ ಸ್ವರ್ಣ - ಮಹೋತ್ಸವಕ್ಕೆ ಸಂಭ್ರಮದ ಚಾಲನೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮೀಯಪದವು: ವಿದ್ಯೆ ಮತ್ತು ವಿನಯಗಳೇ ವಿದ್ಯಾರ್ಥಿಗಳಿಗೆ ಶೋಭೆ- ಎಡನೀರು ಶ್ರೀ ಮೀಯ ಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲಾ ಸ್ವರ್ಣ - ಮಹೋತ್ಸವಕ್ಕೆ ಸಂಭ್ರಮದ ಚಾಲನೆ

Friday, January 06 2017
img

ಮಂಜೇಶ್ವರ(www.asiavisionnews.com) : ಭಾರತೀಯ ಸಂಸ್ಕøತಿಯಲ್ಲಿ ಶಿಕ್ಷಣಕ್ಕೆ ನೀಡಿರುವ ಮಹತ್ವ ಅತ್ಯಪೂರ್ವವಾಗಿದ್ದು,ನಲಂದಾ ದಂತಹ ವಿಖ್ಯಾತ ಪ್ರಾಚೀನ ವಿವಿಗಳು ಇದಕ್ಕೆ ಪುರಾವೆಯಾಗಿದೆ.ವಿದ್ಯೆ ಮತ್ತು ವಿನಯಗಳು ವ್ಯಕ್ತಿತ್ವ ವಿಕಾಸ ಮತ್ತು ಮಾನವನಾಗಿ ರೂಪಿಸುವಲ್ಲಿ ಮಹತ್ತರವಾಗಿರುವುದು ಕಲಿಕೆ.ಜ್ಞಾನದ ವಿಸ್ತಾರತೆಯ ಧ್ಯೋತಕಗಳು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನ ಪೂರ್ವಕ ಅನುಗ್ರಹ ಭಾಷಣ ಮಾಡಿದರು.

ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂ¨sಗೊಂಡ ಸುವರ್ಣ ಮಹೋತ್ಸವಕ್ಕೆ ಶುಕ್ರವಾರ ಬೆಳಿಗ್ಗೆ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಅಳಿಸಲಾರದ ಸಂಪತ್ತಾಗಿ ನೆಗಳ್ತೆಪಡೆದಿರುವ ವಿದ್ಯೆಯ ಕಲಿಕೆಗೆ ಇಂದು ಸಾಕಷ್ಟು ಅವಕಾಶಗಳಿದ್ದರೂ ವ್ಯಕ್ತಿತ್ವ ನಿರ್ಮಾಣಗೊಂಡು ಪರಿಪೂರ್ಣ ಮಾನವನಾಗುವಲ್ಲಿ ದ್ವಂದ್ವದ ಹಾದಿಯಲ್ಲಿದ್ದು,ಸಮರ್ಪಕ ಬೋಧಕರು ಮತ್ತು ಕಲಿಕೆಯ ವಾತಾವರಣದ ಮೇಲೆ ಕಲಿಕೆಯ ಮಟ್ಟ ಗುರುತಿಸಲ್ಪಡುತ್ತದೆ ಎಂದು ಶ್ರೀಗಳು ತಿಳಿಸಿದರು. ಕಲಿಕಯ ವಾತಾವರಣ ಸುಧಾರಿಸಲ್ಪಟ್ಟು,ಪ್ರತಿಭಾವಂತ ಶಿಕ್ಷಕರ ನಿರ್ದೇಶಾನುಸಾರ ಕಲಿತ ಕಲಿಕೆ ಬದುಕನ್ನು ಯಶಸ್ವಿಗೊಳಿಸುವುದು.ಈ ಹಿನ್ನೆಲೆಯಲ್ಲಿ ಗಡಿನಾಡು ಕಾಸರಗೋಡಿನ ಹಿರಿಯ ತಲೆಮಾರಿನವರ ಸಾಧನೆ,ಶ್ರಮ ಸ್ತುತ್ಯರ್ಹವೆಂದು ಅವರು ನೆನಪಿಸಿದರು.

ಕುಳಬೈಲು ಮಸೀದಿಯ ಖತೀಬ್ ಜನಾಬ್ ಸೈಫುಲ್ಲಾ ಮುಸ್ಲಿಯಾರ್ ಕುಳಬೈಲು ಗೌರವ ಉಪಸ್ಥಿತರಿದ್ದು ಮಾತನಾಡಿ, ವಿದ್ಯಾರ್ಥಿಗಳು ಇಂದಿನ ಯುವ ವಿದ್ಯಾರ್ಥಿಗಳು ಆದರ್ಶ ಜೀವನ,ಧ್ಯೇಯಗಳನ್ನು ಗುರುಯಾಗಿಸಿ ವಿದ್ಯಾರ್ಜನೆಗೈಯ್ಯುವ ಬಗ್ಗೆ ಇನ್ನಷ್ಟು ಕ್ರಿಯಾತ್ಮಕರಾಗಬೇಕು,ಜೊತೆಗೆ ತಾಯ್ನೆಲ ಮತ್ತು ಸಮಾಜದ ಬಗ್ಗೆ ಕಳಕಳಿಯ ವ್ಯಕ್ತಿಯಾಗಿ ಸೇವೆಯಲ್ಲಿ ತೊಡಗಿಸಬೇಕೆಂದು ತಿಳಿಸಿದರು.ಮತ ಸೌಹಾರ್ಧತೆ ಮಾತ್ರ ಸುಸ್ಥಿರ ಬದುಕಿನ ನೆಮ್ಮದಿಗೆ ಕಾರಣವಾಗುವುದಾಗಿದ್ದು,ವಿದ್ಯೆ ಈ ನಿಟ್ಟಿನಲ್ಲಿ ಪ್ರೇರಕ ಶಕ್ತಿ ಎಂದು ಅವರು ತಿಳಿಸಿದರು.

ಮೀಯಪದವು ಫಾತಿಮಾ ಚರ್ಚಿನ ಧರ್ಮಗುರುಗಳಾದ ರೆ.ಫಾ.ಅನಿಲ್‍ಜೋಯಲ್ ಡಿಸೋಜ ಅವರು ಮಾತನಾಡಿ, ವಿದ್ಯಾವರ್ಧಕ ಸಂಸ್ಥೆ ಉಗ್ರಾಮವಾಗಿದ್ದ ಮೀಯಪದವು ಪರಿಸರದಲ್ಲಿ ಅರಿವಿನ ಜ್ಞಾನ ನೀಡುತ್ತಿರುವುದು ಅನೇಕ ಸಾಧಕರ ನಿರ್ಮಾಣಕಲ್ಕೆ ರಹದಾರಿಯೊದಗಿಸಿದೆ ಎಂದು ಶ್ಲಾಘಿಸಿದರು.

ಶಾಲಾ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ದಯಾ ಸಾಗರ ಚೌಟ ಕಳ್ಳಿಗೆ ಮುಂಬಯಿ, ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್.ಎಸ್, ಪ್ರಾಂಶುಪಾಲ ರಮೇಶ್ ಕೆ.ಎನ್ ಹಾಗೂ ಸುವರ್ಣ ಮಹೋತ್ಸವ ಸಮಿತಿಯ ಸರ್ವ ಸಮಿತಿಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಕಾರ್ಯಾಧ್ಯಕ್ಷ ಡಾ.ಜಯಪ್ರಕಾಶ್ ಶೆಟ್ಟಿ ತೊಟ್ಟೆತ್ತೋಡಿ ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ರಾಜಾರಾಮ್ ರಾವ್ ಕಾರ್ಯಕ್ರಮ ನಿರ್ವಹಿಸಿ ಪ್ರಾಂಶುಪಾಲ ರಮೇಶ್.ಕೆ.ಎನ್ ವಂದಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಸಂಚಾಲಕಿ ಪ್ರೇಮಾ.ಕೆ.ಭಟ್ ತೊಟ್ಟೆತ್ತೋಡಿ ಧ್ವಜಾರೋಹಣ ಗೈದರು.

Comments

haberler antalya haberleri