ಕಾಸರಗೋಡು: ಮೊಬೈಲ್ ಟವರಿಗೇರಿ ಯುವಕನ ಆತ್ಮಹತ್ಯೆ ಬೆದರಿಕೆ ಯುವಕನ್ನು ಸೆರೆಹಿಡಿದು ಪ್ರಾಣ ರಕ್ಷಿಸಿ ಪೊಲೀಸರಿಗೊಪ್ಪಿಸಿದ ಅಗ್ನಿಶಾಮಕ ದಳ

Friday, January 06 2017
img

ಕಾಸರಗೋಡು (www.asiavisionnews.com): ಯುವಕನೊಬ್ಬ ಮೊಬೈಲ್ ಟವರಿಗೇರಿ ಆತ್ಮಹತ್ಯೆಗೈಯುವ ಬೆದರಿಕೆಯೊಡ್ಡಿದ್ದಾನೆ.

ಬಳಿಕ ಸ್ಥಳೀಯರು ನೀಡಿದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳ ನಡೆಸಿದ ಕಾರ್ಯಾಚರಣೆಯಲ್ಲಿ ಯುವಕನ್ನು ಸೆರೆಹಿಡಿದು ಪ್ರಾಣ ರಕ್ಷಿಸಿ ಪೊಲೀಸರಿಗೊಪ್ಪಿಸಲಾಗಿದೆ.

ಕಾಸರಗೋಡು ರೈಲ್ವೇ ನಿಲ್ದಾಣ ಸಮೀಪದ ಖಾಸಗಿ ಕಟ್ಟಡವೊಂದರ ಮೇಲೆ ನಿರ್ಮಿಸಲಾಗಿದ್ದ ಸುಮಾರು 100 ಅಡಿ ಎತ್ತರದ ಮೊಬೈಲ್ ಟವರ್ ಗೆ ಸುಮಾರು 21 ವರ್ಷ ಪ್ರಾಯದ ಯುವಕನೊಬ್ಬ ಶುಕ್ರವಾರ ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಏರಿದ್ದಾನೆ.

ಟವರ್ ನ ಮೇಲೆ ಏರಿದಾಕ್ಷಣ ಕೆಳಗೆ ಜಿಗಿದು ಆತ್ಮಹತ್ಯೆ ಗೈಯುವ ಬೆದರಿಕೆಯೊಡ್ಡಿದ್ದಾನೆ.ಇದನ್ನು ಕಂಡ ಸ್ಥಳೀಯರು ಕೂದಲೇ ಪೊಲೀಸರಿಗೆ ಹಾಗು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಹಾಗು ಊರವರು ಯುವಕನ ಮನವೊಲಿಸಿ ಕೆಲಗಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಬಳಿಕ ಅಗ್ನಿಶಾಮಕದಳ ಆಗಮಿಸಿ ಯುವಕನ್ನು ಹಿಡಿದು ಕೆಲಕ್ಕಿಳಿಸಿ ಪ್ರಾಣ ಉಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಮಾಯಿಪ್ಪಾಡಿ ನಿವಾಸಿ ಯುವಕನೆಂಬುದಾಗಿ ತಿಳಿದು ಬಂದಿದೆ. ಪೊಲೀಸರು ಯುವಕನನ್ನು ವಶಕ್ಕೆ ತೆಗೆದು ವಿಚಾರಿಸುತಿದ್ದಾರೆ

Comments