antalya otogar rent a car Elektronik Sigara al ordu haberleri fatsa haberleri ordu haberleri sesli chat

ಸಮಾಜದ ಅಭ್ಯುದಯಕ್ಕೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ- ಕೇರಳ ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಸಂಭ್ರಮದಲ್ಲಿ ಸಮಾಪ್ತಿಗೊಂಡ ವಿದ್ಯಾವರ್ಧಕ ಶಾಲೆಯ ಸುವರ್ಣ ಮಹೋತ್ಸವ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಸಮಾಜದ ಅಭ್ಯುದಯಕ್ಕೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ- ಕೇರಳ ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಸಂಭ್ರಮದಲ್ಲಿ ಸಮಾಪ್ತಿಗೊಂಡ ವಿದ್ಯಾವರ್ಧಕ ಶಾಲೆಯ ಸುವರ್ಣ ಮಹೋತ್ಸವ

Monday, January 09 2017
img

ಮಂಜೇಶ್ವರ (www.asiavisionnews.com) : ಎರಡು ದಿನಗಳಲ್ಲಾಗಿ ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲೆ ಮೀಯಪದವಿನಲ್ಲಿ ವಿಜೃಂಭಿಸಿದ ಸುವರ್ಣ ಮಹೋತ್ಸವ ಸಮಾಪ್ತಿಗೊಂಡಿತು. ಎರಡು ದಿನಗಳಲ್ಲಾಗಿ ನಡೆದ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಪಾಲ್ಗೊಂಡರು.

ದಯಾಸಾಗರ್ ಚೌಟರವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತ ವ್ಯಕ್ತಿಗಳಾಗಿ ಕೇರಳ ಕಂದಾಯ ಹಾಗು ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವ ಇ ಚಂದ್ರಶೇಖರನ್ ಅದೇ ರೀತಿ ಕರ್ನಾಟಕ ಆಹಾರ ನಾಗರಿಕ ಸರಬರಾಜು ಹಾಗು ಗ್ರಾಹಕ ವ್ಯವಹಾರ ಖಾತೆ ಸಚಿವ ಯು ಟಿ ಖಾದರ್ ಹಾಗು ಮಾಜಿ ಶಾಸಕ ಸಿ ಎಚ್ ಕುಂಞಂಬು ಉಪಸ್ಥರಿದ್ದರು.
ವಿದ್ಯಾಭ್ಯಾಸ ನಾಡಿನ ಪ್ರಗತಿಯ ದ್ಯೋತಕ. ಶಿಕ್ಷಣ ಕ್ರಾಂತಿಯಿಂದ ಸಮುದಾಯ, ಸಮಾಜದ ಅಭ್ಯುದಯ ಸಾಧ್ಯ ಎಂದು ಕಂದಾಯ ಸಚಿವ ಇ. ಚಂದ್ರಶೇಖರನ್ ಅಭಿಪ್ರಾಯಪಟ್ಟರು.

ಮೀಯಪದವು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ವಿಶೇಷ ಅತಿಥಿ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಹಿಂದುಳಿದ ಕೃಷಿ ಕಾರ್ಮಿಕ ವಿಭಾಗದಿಂದ ಬಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಿದ ಸಂಸ್ಥೆ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಎಂದರು.ಸಂಸ್ಥಾಪಕರ ದೂರದೃಷ್ಟಿಯಿಂದ ಸಮುದಾಯ, ಸಮಾಜದ ಏಳಿಗೆಗೆ ಕಾರಣವಾದ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಕಾರಣರಾದ ಪ್ರಬಂಧಕ, ಅಧ್ಯಾಪಕರ ಶ್ರಮವನ್ನು ಶ್ಲಾಘಿಸಿದರು.

ಜಿಲ್ಲೆಯಲ್ಲಿ ವಿವಿಧ ಭಾಷಾ ಸಮುದಾಯಗಳಿದ್ದರೂ ಸಾಮಾಜಿಕ ಧ್ಯೇಯ ಒಂದಾಗಿದೆ.
ಸಂಸ್ಥೆಯಲ್ಲಿ ವರ್ಷಗಳ ಹಿಂದೆ ಹೈಯರ್ ಸೆಕೆಂಡರಿ ಆರಂಭವಾಗಿದ್ದು, ಮಾನವಿಕ ಶಾಸ್ತ್ರ, ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗಗಳನ್ನು ಹೊಂದಿದೆ.ಪ್ರಸ್ತುತ ಅಗತ್ಯತೆಯನ್ನು ಮನಗಂಡು ವಿಜ್ಞಾನ ವಿಭಾಗವನ್ನು ಆರಂಭಿಸಲು ಸರಕಾರದ ವತಿಯಿಂದ ಸಹಾಯವನ್ನು ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.ರಾಜ್ಯದಲ್ಲಿ ಉನ್ನತ ವಿದ್ಯಾಭ್ಯಾಸ ಕೇಂದ್ರಗಳು ಆರಂಭವಾಗಬೇಕು, ಮೀಯಪದವು ಪ್ರದೇಶದಂತಹ ಸ್ಥಳದಲ್ಲಿ ಇಂತಹ ಶಿಕ್ಷಣ ಕ್ರಾಂತಿಗೆ ಅಗತ್ಯವಾದ ಎಲ್ಲ ಸಹಕಾರವನ್ನು ಸರಕಾರದ ವತಿಯಿಂದ ನೀಡಲು ಸಿದ್ಧ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತ ವ್ಯಕ್ತಿಯಾಗಿ ಆಗಮಿಸಿದ ಕರ್ನಾಟಕ ಸಚಿವ ಯು ಟಿ ಖಾದರ್ ಮಾತನಾಡಿ ಈ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಈ ಶಾಲೆಯ ಏಳಿಗೆಗಾಗಿ ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರನ್ನು ಸ್ಮರಿಸಬೇಕಾಗಿದೆ. ಇದೆಲ್ಲಾ ದೇಶಕ್ಕಾಗಿ ಕೊಡುವ ಕೊಡುಗೆಯಾಗಿದೆ. ಭಾರತ ದೇಶ ಜಗತ್ತಿನ ಮುಂದೆ ಒಂದನೇ ಸ್ಥಾನಕ್ಕೆ ಬರಬೇಕಿದ್ದರೆ ಶಾಸಕರು, ಮಂತ್ರಿಗಳು, ವಿಧಾನ ಸಭೆಯಲ್ಲಿ ಕುಳಿತುಕೊಳ್ಳುವವರು ಅದೇ ರೀತಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತಿರುವ ಅಧಿಕಾರಿಗಳ ಮೂಲಕ ಸಾಧ್ಯವಿಲ್ಲ. ಭಾರತ ದೇಶ ಬಲಿಷ್ಟವಾಗಬೇಕಿದ್ದರೆ. ಶಾಲೆಯ ತರಗತಿಗಳ ಕೊಠಡಿಗಳಲ್ಲಿ ಕುಳಿತು ಕೊಳ್ಳುವ ವಿದ್ಯಾರ್ಥಿಗಳು ಬಲಿಷ್ಟವಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಗೌರವಾನ್ವಿತ ವ್ಯಕ್ತಿಯಾಗಿ ಆಗಮಿಸಿದ ಮಾಜಿ ಶಾಸಕ ಸಿ.ಎಚ್ ಕುಞಂಬು ಮಾತನಾಡಿ ಮೀಯಪದವಿನಂತಹ ಕುಗ್ರಾಮದಲ್ಲಿ ಸುಮಾರು 50 ವರ್ಷಗಳ ಹಿಂದೆ ಬೆಳಗಿದ ಜ್ಞಾನ ದೀಪ ಇಂದು ಪ್ರಜ್ವಲಿಸುತ್ತಿದೆ.ಶಾಲೆಯಲ್ಲಿ ವಿದ್ಯಾರ್ಜನೆಗೈದು ಉನ್ನತ ಉದ್ಯೋಗದಲ್ಲಿರುವ ಹಲವು ಮಂದಿಗೆ ಇದು ಅಭಿಮಾನ ಸಂಕೇತವಾಗಿ ನೆನಪಿನಲ್ಲಿರಲಿ ಎಂದು ಆಶಿಸಿದರು.ಶಿಕ್ಷಣ ಪ್ರತಿಯೋರ್ವ ಮಗುವಿನ ಜನ್ಮ ಸಿದ್ದ ಹಕ್ಕು ಎಂದು ರಾಜ್ಯದಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ ಪ್ರಥಮ ಮುಖ್ಯಮಂತ್ರಿ ಇ.ಎಂ.ಎಸ್ ನಂಬೂದಿರಿಪ್ಪಾಡ್ರಂನ್ನು ಈ ಸಂದರ್ಭ ಸ್ಮರಿಸಿದರು.ಶಾಲೆಯ ಪ್ರಗತಿಯಲ್ಲಿ ಸಂಸ್ಥಾಪಕರ ಕುಟುಂಬ ವರ್ಗದ ಕೊಡುಗೆ ಅಪಾರವಾಗಿದ್ದು, ಸಂಸ್ಥೆಯ ಉನ್ನತಿಗೆ ಮತ್ತಷ್ಟು ಶ್ರಮಿಸಲು ಪ್ರಬಂಧಕರಿಗೆ ಮತ್ತಷ್ಟು ಸ್ಪೂರ್ತಿ ಹಾಗೂ ಶಕ್ತಿ ದೊರೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಆಹ್ವಾನಿತರಾಗಿ ಭಾಗವಹಿಸಿದ ಸಚಿವ ಇ. ಚಂದ್ರಶೇಖರನ್ ರವರನ್ನು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಭಾಕರ ಚೌಟರವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಅದೇ ರೀತಿ ಕರ್ನಾಟಕ ಸಚಿವ ಯು ಟಿ ಖಾದರ್ ರವರನ್ನು ಸುವರ್ಣ ಮಹೋತ್ಸವ ಸಮಿತಿ ಕಾರ್ಯಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ ತೊಟ್ಟತ್ತೋಡಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಅದೇ ರೀತಿ ಮಾಜಿ ಶಾಸಕ ಸಿ ಎಚ್ ಕುಂಞಂಬು ಹಾಗು ಕಾಸರಗೋಡು ಜಿಲ್ಲಾ ಸಮಿತಿ ಅಭೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿಯವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಾರೋಪ ಕಾರ್ಯಕ್ರಮದ ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ, ಸಂಸ್ಥೆಯ ಪ್ರಬಂಧಕಿ ಪ್ರೇಮಾ ಕೆ.ಭಟ್, ಮಂಜೇಶ್ವರ ತಹಶಿಲ್ದಾರ ಶಶಿಧರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸದಾಶಿವ ರೈ ಮೊದಲಾದವರು ಉಪಸ್ಥಿತರಿದ್ದರು.

ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಸಭಾ ಕಾರ್ಯಕ್ರಮ ನಿರ್ವಹಣಾ ಸಮಿತಿಯ ಅಧ್ಯಕ್ಷ ಶ್ರೀ. ರಾಮಕೃಷ್ಣ ಕಡಂಬಾರು ನಿರೂಪಿಸಿ ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ. ರಾಜಾರಾಮ್ ರಾವ್ ಚಿಗುರುಪಾದೆ ವಂದಿಸಿದರು.

ಎರಡೂ ದಿನಗಳ ಕಾಲ ಜರಗಿದ ಸುವರ್ಣ ಮಹೋತ್ಸವದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳಲ್ಲಿ ಶಾಲಾ ವಿದ್ಯಾರ್ಥಿಗಳು, ಸುಭಾಷ್ ಅರುಕರ ಮತ್ತು ತಂಡದವರಿಂದ ನಾಂಡಪ್ಪಾಟ್ಟು, ಮಾಸ್ಟರ್ಸ್ ಮೀಯಪದವು ತಂಡದವರಿಂದ ನೃತ್ಯ ವೈವಿಧ್ಯ, ಶಾರದಾ ಆರ್ಟ್ರ್ಸ್ ಕಲಾವಿದರು ಮಂಜೇಶ್ವರ ತಂಡದವರಿಂದ ‘ಆರ್ ಪನ್ಲೆಕ’ ತುಳು ನಾಟಕ, ಶಾಲಾ ಹಳೆ ವಿದ್ಯಾರ್ಥಿ ಲವಾನಂದ ಎಲಿಯಾಣ ಅವರ ಸಂಯೋಜನೆಯಲ್ಲಿ ಪಲ್ಲವಿ ಪ್ರಭು, ಟಿ. ವಿ. ಗಿರಿ ಬಳಗದವರಿಂದ ಸಂಗೀತ ರಸಮಂಜರಿ ಗುರುಯಾಯೂರು ನೃತ್ಯ ವಿಲಾಸಿನಿ ಅಪರ್ಣಾ. ಕೆ ಶರ್ಮ ಮಣಿಪಾಲ ಇವರಿಂದ ಭರತನಾಟ್ಯ, ಶ್ರೀ ರಾಜೇಶ್ ಮಳಿ ಮತ್ತು ತಂಡ, ಮಂಗಳಾ ಮ್ಯಾಜಿಕ್ ವರ್ಲ್ಡ್ ಮಂಗಳೂರು ಇವರಂದ ಮೆಗಾ ಮ್ಯಾಜಿಕ್ ಶೋ ‘ಅಪೂರ್ವ ಜಾದೂ’ ಮೇಳೈಸಿತು.

Comments

haberler antalya haberleri