Flash News
വാർത്തകൾക്കും,പരസ്യങ്ങൾക്കും ബന്ധപെടുക:9895854501,9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮನಸ್ಸನ್ನು ಹೈಟಕ್ ಮಾಡಿದವನಿಗೆ ಮಾತ್ರ ಶಾಲೆಯನ್ನು ಹೈಟಕ್ ಮಾಡಲು ಸಾಧ್ಯ: ಈಶ್ವರ ಮಾಸ್ಟರ್ : ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಭೆ: ಹಲವಾರು ಮಂದಿ ಭಾಗಿ

Monday, January 09 2017
img

ಮಂಜೇಶ್ವರ (www.asiavisionnews.com) : ಮನೋಭಾವ ಬದಲಾಗಿ ಪ್ರಕೃತಿಗನುಸಾರ ಜೀವಿಸಲು ಕಲಿತವನೇ ನಿಜವಾದ ಮಾನವ ಅಂತಹವನ ಮಾನವೀಯತೆ ಯನ್ನು ಯಾರಿಂದಲೂ ಅಳೆಯಲು ಸಾಧ್ಯವಿಲ್ಲ. ನಮ್ಮ ಉದ್ದೇಶ ಎಲ್ಲಾ ಹೈಟೆಕ್ ಎಂದಿರುವಾಗ ಈ ಹೈಟೆಕ್ ಮನಸ್ಸು ನಮ್ಮಲ್ಲಿ ಯಾಕೆ ಸೃಷ್ಟಿ ಮಾಡಬಾರದು? ಸರಕಾರ ಎಲ್ಲಾ ಕೊಡುತ್ತದೆ ಆದರೆ ಯಾವುದೇ ಪಠ್ಯ ಪುಸ್ತಕಗಳನ್ನು ತೆರೆದು ನೋಡಿದರೂ ಹಣ ಗಳಿಸುವ ಬಗ್ಗೆ ಅಲ್ಲದೆ ಯೋಗ್ಯ ರೀತಿಯಲ್ಲಿ ಬದುಕುವ ವಿಚಾರದ ಬಗ್ಗೆ ಉಲ್ಲೇಖಿಸಿಲ್ಲ.

ಈ ಹಿನ್ನೆಲೆಯಲ್ಲಿ ನಾವು ಮನುಷ್ಯರೆಂಬ ಫಲಕವನ್ನು ಹಾಕಬೇಕಾಗುತ್ತದೆ ಯಾಕಂದ್ರೆ ನಾವು ಮನುಷ್ಯರೆಂಬ ಪದಕ್ಕೆ ಅರ್ಹರಲ್ಲ. ಮನುಷ್ಯರೆಂದು ಹೇಳುವಾಗ ಒಳ್ಳೆಯ ವಿದ್ಯಾಭ್ಯಾಸ ಬೇಕು. ಆದರೆ ಶಾಲೆಗೆ ಹೋಗಿ ಕಲಿತು ಹೊರಗೆ ಬರುವುದು ಮಾತ್ರ ವಿದ್ಯಾಭ್ಯಾಸವಾಗಿರುವುದಿಲ್ಲ.

ಶಾಲೆಗೆ ಬಾರದ ಒಬ್ಬ ವ್ಯಕ್ತಿ ಕೂಡಾ ಮನುಷ್ಯನಾಗೆ ಬದುಕುತ್ತಾನೆ.ಶಾಲೆಯ ಮುಖವನ್ನೇ ನೋಡದ ಅದೆಷ್ಟೋ ಮಂದಿ ಕುಟುಂಬವನ್ನು ಚೆನ್ನಾಗಿ ಸಲಹುತ್ತಾರೆ. ಈ ಹಿನ್ನೆಲೆಯಲ್ಲಿ ಜ್ಞಾನ ಅರಿವು ಎಂಬುದು ಕೇವಲ ಶಾಲೆಯಿಂದ ಮಾತ್ರ ಅಲ್ಲ ಪರಿಸರದಿಂದಲೂ ಬರುತ್ತದೆ. ಆ ತರ ಪರಿಸರ ಸೃಷ್ಟಿ ಮಾಡುವ ಕೆಲಸ ಶಾಲೆಯಲ್ಲಿ ಕಲಿತು ಹೊರಗೆ ಹೋದ ಹಳೆ ವಿದ್ಯಾರ್ಥಿಗಿರಬೇಕಾಗಿದೆ..

ಇದಕ್ಕೆ ಸೂಕ್ತ ಉದಾಹರಣೆ ನಮ್ಮ ಕುಂಜತ್ತೂರು ಶಾಲೆಯ ಸುತ್ತುಮುತ್ತ ಡ್ರಗ್ಸ್ ಎಷ್ಟೊಂದು ಪರಿಣಾಮ ಭೀರಿದೆ. ಎಷ್ಟೊಂದು ಕುಟುಂಬದ ಶಾಲಾ ಮಕ್ಕಳು ಈ ಚಟಕ್ಕೆ ಬಲಿಯಾಗುತಿದ್ದಾರೆ? ಇದೇ ಶಾಲೆಯ ಹಳೆಯ ಕಟ್ಟಡದಲ್ಲಿ ಡ್ರಗ್ಸ್ ವ್ಯಹವಾರ ನಡೆಯುತ್ತಿದೆಂಬ ಆತಂಕಕಾರಿ ವಿಷಯ ಕೂಡಾ ಕೇಳಿ ಬರುತ್ತಿದೆ.

ಈ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳಾದ ನಾವು ಮಾಡ ಬೇಕಾದ ಮೊದಲ ಕೆಲಸ ಶಾಲಾ ಪರಿಸರಗಳಲ್ಲಿ ತಲೆ ಎತ್ತುತ್ತಿರುವ ಡ್ರಗ್ಸ್ ಮಾಫಿಯಾಗಳಿಗೆ ಕಡಿವಾಣ ಹಾಕಬೇಕಾಗಿದೆ. ಇದರೊಂದಿಗೆ ಸರಕಾರ ನೀಡುವ ಹೈಟಕ್ ಕಟ್ಟಡದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಹೈಟೆಕ್ ವಿದ್ಯಾಭ್ಯಾಸ ಸಿಗಬಹುದು ಎಂಬುದಾಗಿ ಕುಂಜತ್ತೂರು ಪ್ರೌಢ ಶಾಲೆಯ ಹಳೆಯ ಅಧ್ಯಾಪಕ ನಿವೃತ ಈಶ್ವರ ಮಾಸ್ಟರ್ ಹೇಳಿದರು.

ಅವರು ಬಾನುವಾರದಂದು ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲೆಯ ಆರಂಭದ ದಿನಗಳಲ್ಲಿ ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷರಾಗಿದ್ದ ಉದ್ಯಾವರ ನಿವಾಸಿ ರವೀಂದ್ರ ಶೆಟ್ಟಿಯವರು ತಮ್ಮ ಹಳೆಯ ಕಾಲದ ನೆನಪುಗಳನ್ನು ಸಭೆಯಲ್ಲಿ ಹಂಚಿಕೊಂಡರು.

ಪತ್ರಕರ್ತ ಅಬ್ದುಲ್ ರಹ್ಮಾನ್ ಉದ್ಯಾವರ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಧ್ಯಾಯರಾದ ಅಗಸ್ಟಿನ್ ಬರ್ನಾಡ್, ಹಿರಿಯ ಅಧ್ಯಾಪಕಿ ಪ್ರಸನ್ನ ಟೀಚರ್ ಸಂಘಟನೆಯ ಉಪಾಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ಅಶ್ರಫ್ ಪದವು, ಪದಾಧಿಕಾರಿಗಳಾದ ಕುಂಞಿಮೋನು, ಅಶ್ರಫ್ ಕುಂಜತ್ತೂರು, ಸೇರಿದಂತೆ ಹಲವರು ಉಪಸ್ಥರಿದ್ದರು.

ಬಳಿಕ ನಡೆದ ಚರ್ಚೆಯಲ್ಲಿ ಸದ್ರಿ ಶಾಲೆಯ ಸ್ಮಾರ್ಟ್ ತರಗತಿಗಳಿಗಾಗಿ 10 ಕೊಠಡಿಗಳಿಗೆ ಬೇಕಾಗಿರುವ ವಿದ್ಯುತ್ ಸಂಪರ್ಕ ಫ್ಯಾನ್ ಅದೇ ರೀತಿ ಬೆಳಕುಗಳನ್ನು ನೀಡಲು ತೀರ್ಮಾನಿಸಲಾಯಿತು.
ಇದಕ್ಕೆ ಸಭೆಯಲ್ಲಿ ಹಾಜರಾದ ಹಳೆಯ ವಿದ್ಯಾರ್ಥಿಗಳು ಕೈ ಜೋಡಿಸಿದರು. ಈ ತಿಂಗಳಿನ ಕೊನೆಯಲ್ಲಿ ಈ ಕೆಲಸವನ್ನು ಪೂರ್ತೀಕರಿಸಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ ಕಲಿತ ಎಲ್ಲಾ ಹಳೆ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಒಂದು ದಿನದ ಕುಟುಂಬ ಸಂಗಮವನ್ನು ಮಾಡುವಂತೆ ಪ್ರಯತ್ನ ನಡೆಸಲು ಸಭೆ ತೀರ್ಮಾನಿಸಿದೆ. ಬಳಿಕ ಹಂತ ಹಂತವಾಗಿ ಶಾಲೆಯ ಅಭಿವೃದ್ದಿ ಗಾಗಿ ಹಳೆಯ ವಿದ್ಯಾರ್ಥಿಗಳ ಜತೆಯಾಗಿ ಊರವರನ್ನು ಹಾಗು ಸರಕಾರದಿಂದ ಸಿಗುವ ಸವಲತ್ತನ್ನು ಪಡಕೊಂಡು ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯನ್ನು ಒಂದು ಹೈಟೆಕ್ ಶಾಲೆಯಾಗಿ ಪರಿವರ್ತನೆಗೊಳಿಸುವಂತೆ ಸೇರಿದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ದಯಾಕರ ಮಾಡ ಸ್ವಾಗತಿಸಿ ಅಶ್ರಫ್ ವಂದಿಸಿದರು.

Comments