antalya otogar rent a car Elektronik Sigara al ordu haberleri fatsa haberleri ordu haberleri sesli chat

ಮಂಜೇಶ್ವರ: ವರ್ಕಾಡಿ ಕೃಷಿ ವಿಜ್ಞಾನ ಕೇಂದ್ರ ನಾಶದತ್ತ ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ : ಮುಸ್ಲಿಂ ಯೂತ್ ಲೀಗ್ ಮಂಡಲಾಧ್ಯಕ್ಷ ಸೈಫುಲ್ಲ ತಂಘಲ್ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮಂಜೇಶ್ವರ: ವರ್ಕಾಡಿ ಕೃಷಿ ವಿಜ್ಞಾನ ಕೇಂದ್ರ ನಾಶದತ್ತ ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ : ಮುಸ್ಲಿಂ ಯೂತ್ ಲೀಗ್ ಮಂಡಲಾಧ್ಯಕ್ಷ ಸೈಫುಲ್ಲ ತಂಘಲ್

Monday, January 09 2017
img

ಮಂಜೇಶ್ವರ (www.asiavisionnews.com): ಅಧಿಕಾರಿಗಳ ನಿರ್ಲ್ಯಕ್ಷದಿಂದ ಮೂಲೆ ಗುಂಪಾಗುತ್ತಿರುವ ಕಾಸರಗೋಡು ಜಿಲ್ಲೆಯ ಗಡಿನಾಡ ಪ್ರದೇಶದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ವರ್ಕಾಡಿ ಎಂಬಲ್ಲಿ ಕೃಷಿಕರ ಅಭಿವೃದ್ದಿ ಹಾಗು ಉನ್ನತಿಯ ಉದ್ದೇಶವನ್ನಿಟ್ಟು ಕೊಂಡು 1984 ರಲ್ಲಿ ಸ್ಥಾಪಿತವಾದ ವರ್ಕಾಡಿ ಕೃಷಿ ವಿಜ್ಞಾನ ಕೇಂದ್ರ ಇದೀಗ ಕಂದಾಯ ಇಲಾಖೆ ಹಾಗು ಕೃಷಿ ಇಲಾಖೆ ಯ ಅಧಿಕಾರಿಗಳ ನಿರ್ಲ್ಯಕ್ಷದಿಂದಾಗಿ ನಾಶದೆಡೆ ಸಾಗುತ್ತಿರುವುದಾಗಿ ಮುಸ್ಲಿಂ ಯೂತ್ ಲೀಗ್ ಅಧ್ಯಕ್ಷ ಸೈಫುಲ್ಲ ತಂಘಲ್ ಆರೋಪಿಸಿದ್ದಾರೆ.

ಈ ಕೇಂದ್ರಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವ ಅಧಿಕಾರಿಗಳು ನೇಮಕಗೊಂಡಿಲ್ಲ.ಜತೆಯಾಗಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ಭೂಮಿಯನ್ನು ಕಂದಾಯ ಇಲಾಖೆಯಿಂದ ಲೀಸ್ ಗೆ ಪಡೆದದ್ದಾಗಿದೆ. ಈ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಜ್ಞಾನ ಕೇಂದ್ರಕ್ಕಾಗಿ ಸಂಶೋಧನೆಗಾಗಿ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಉಳಕೊಳ್ಳಲು ನಿರ್ಮಿಸಿದಂತಹ ಹಾಸ್ಟೆಲ್ ಕಟ್ಟಡಗಳು ನಿರ್ಮಾಣ ಪೂರ್ತಿಗೊಳ್ಳದೆ ಅರ್ಧದಲ್ಲೇ ಬಾಕಿ ಉಳಿದಿದೆ.

ಇಲ್ಲೂ ಕೂಡಾ ಕಟ್ಟಡದ ಕಾಮಗರಿಯನ್ನು ಮುಂದುವರಿಸುವ ಕೃಷಿ ಇಲಾಖೆಗೆ ಭೂಮಿಯನ್ನು ಕಂದಾಯ ಇಲಾಖೆಯಿಂದ ಲೀಸ್ ಪಡೆದ ಕಾರಣವೇ ಮುಳ್ಳಾಗಿ ಪರಿಣಮಿಸಿರುವುದಾಗಿ ತಂಘಲ್ ಆರೋಪಿಸಿದ್ದಾರೆ.
ಈ ವಿಜ್ಞಾನ ಕೆಂದ್ರ ಸ್ಥಾಪನೆಗೆ ಮುತುವರ್ಜಿ ವಹಿಸಿದ್ದ ಅಧಿಕಾರಿಯೊಬ್ಬರ ವಿರುದ್ದ ಕಂದಾಯ ಇಲಾಖೆ ಯ ಅಧಿಕಾರಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಆ ಅಧಿಕಾರಿ ಇದೀಗ ಕೋರ್ಟು ಕಚೇರಿಗಳಿಗೆ ಅಲೆದಾಡುತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರವೇ ಮುತುವರ್ಜಿ ವಹಿಸಿ ಕೃಷಿಕರಿಗಾಗಿಯೇ ನಿರ್ಮಿಸಲಾಗಿರುವ ಈ ವಿಜ್ಞಾನ ಕೇಂದ್ರವನ್ನು ಅಭಿವೃದ್ದಿಪಥದತ್ತ ಕೊಂಡೊಯ್ಯುವಂತೆ ತಂಘಲ್ ಪ್ರಕಟನೆಯಲ್ಲಿ ವಿನಂತಿಸಿಕೊಂಡಿದ್ದಾರೆ.

Comments

haberler antalya haberleri