ಮಂಜೇಶ್ವರ 255 ಗ್ರಾಂ ಗಾಂಜದೊಂದಿಗೆ ಇಬ್ಬರ ಸೆರೆ: ಕಾಸರಗೋಡು ಅಬಕಾರಿ ವಿಶೇಷ ದಳದ ಕಾರ್ಯಾಚರಣೆ

Monday, January 09 2017
img

ಮಂಜೇಶ್ವರ (www.asiavisionnews.com) : 255 ಗ್ರಾಂ ಗಾಂಜಾದೊಂದಿಗೆ ಇಬ್ಬರನ್ನು ಅಬಕಾರಿ ವಿಶೇಷ ದಳ ಸೆರೆ ಹಿಡಿದಿದೆ.

ಕರ್ನಾಟಕ ಬಾಗಲಕೋಟೆ ನಿವಾಸಿಗಳಾದ ಎಲ್ಲಪ್ಪ (22) ಹಾಗು ಅಶೋಕ (24) ಬಂಧಿತ ಆರೋಪಿಗಳು. ಎಲ್ಲಪ್ಪನ ಕೈಯಿಂದ 155 ಗ್ರಾಂ ಗಾಂಜ ಹಾಗು ಅಶೋಕನ ಕೈಯಿಂದ 100 ಗ್ರಾಂ ಗಾಂಜವನ್ನು ಪತ್ತೆ ಹಚ್ಚಲಾಗಿದೆ.

ಕುಂಜತ್ತೂರು ಮಾಡ ಬಸ್ ನಿಲ್ದಾಣದಿಂದ ಎಲ್ಲಪ್ಪನನ್ನು ಸೆರೆ ಹಿಡಿದಿದ್ದಾರೆ. ಅದೇ ರೀತಿ ಅಶೋಕನನ್ನು ಕಣ್ವತೀರ್ಥ ರಸ್ತೆಯಿಂದ ಸೆರೆ ಹಿಡಿಯಲಾಗಿದೆ.

Comments