ಉದ್ಯಾವರ: ಕಿಡ್ನಿ ವೈಪಲ್ಯದಿಂದ ಬಳಲುತಿದ್ದ ಯುವಕ ಮೃತ್ಯು: ಕುಂಜತ್ತೂರು ಮಾಡ ಮಳಿಗೆ ಮನೆ ನಿವಾಸಿ ಪ್ರಮೋದ್ (33) ಮೃತ ದುರ್ದೈವಿ

Monday, January 09 2017
img

ಮಂಜೇಶ್ವರ (www.asiavisionnews.com): ಕಳೆದ ಕೆಲವು ವರ್ಷಗಳಿಂದ ಕಿಡ್ನಿ ವೈಪಲ್ಯದಿಂದ ಬಳಲುತಿದ್ದ ಯುವಕನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಮಧ್ಯೆ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಕುಂಜತ್ತೂರು ಮಾಡ ಮಳಿಗೆ ಮನೆ ನಿವಾಸಿ ಪ್ರಮೋದ್ (33) ಮೃತ ದುರ್ದೈವಿ. ಜೀವನ ಮಾರ್ಗಕ್ಕಾಗಿ ಪೈಂಟ್ ವೃತ್ತಿಯಲ್ಲಿ ತೊಡಗಿಸಿಕೊಂಡ ಪ್ರಮೋದ್ ಗೆ ಸುಮಾರು ನಾಲ್ಕು ವರ್ಷಕ್ಕೆ ಮೊದಲು ಕಿಡ್ನಿ ವೈಪಲ್ಯ ಕಾಣಿಸಿಕೊಂಡಿತ್ತು. ವಾರದಲ್ಲಿ ಎರಡು ಬಾರಿ ಇವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು.

ಇದರಂತೆ ಸೋಮವಾರ ಚಿಕಿತ್ಸೆಗೆ ಕೊಂಡೊಯ್ದಾಗ ಚಿಕಿಸೆಗೆ ಸ್ಪಂಧಿಸದೆ ಪ್ರಮೋದ್ ಕೊನೆಯುಸಿರೆಳೆದಿದ್ದಾರೆ.

Comments