ಮಂಜೇಶ್ವರ: ಬುಲೆಟ್ ಬೈಕ್ ಕಳವು ಪ್ರಕರಣ: ಒಬ್ಬನ ಸೆರೆ :ಆಲಂಪಾಡಿ ನಿವಾಸಿ ಹಕೀಂ ಎಂಬವರ ಪುತ್ರ ಮೊಹಮ್ಮದ್ ಅಕ್ಬರ್ (25) ಸೆರೆಗೀಡಾದ ಆರೋಪಿ

Tuesday, January 10 2017
img

ಮಂಜೇಶ್ವರ ( www.asiavisionnews.com ) : ಬುಲೆಟ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಮಂಜೇಶ್ವರ ಪೋಲೀಸರು ಸೆರೆಹಿಡಿದಿದ್ದಾರೆ.

ಆಲಂಪಾಡಿ ನಿವಾಸಿ ಹಕೀಂ ಎಂಬವರ ಪುತ್ರ ಮುಹಮ್ಮದ್ ಅಕ್ಬರ್(25) ಸೆರೆಗೀಡಾದ ಆರೋಪಿ. ಪ್ರಕರಣದ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

. ವಾಮಂಜೂರು ಚೆಕ್ಪೋಸ್ಟ್ ಡಿಕ್ಲರೇಶನ್ ನ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಬೋವಿಕ್ಕಾನ ನಿವಾಸಿಯು ತಾನು ವಾಸಿಸುವ ಫ್ಲಾಟ್ ನ ಅಂಗಣದಲ್ಲಿ ನಿಲ್ಲಿಸಿದ್ದ ಹೊಸ ಬುಲೆಟನ್ನು ನ್ಯೂ ಇಯರ್ ನ ದಿನದಂದು ಕಳವು ಗೈಯಲಾಗಿತ್ತು. ಇದೀಗ ಪ್ರಕರಣದ ಒಬ್ಬ ಆರೋಪಿಯನ್ನು ಮಂಜೇಶ್ವರ ಪೋಲೀಸರು ಸೆರೆ ಹಿಡಿದಿದ್ದಾರೆ.

Comments