antalya otogar rent a car Elektronik Sigara al ordu haberleri fatsa haberleri ordu haberleri sesli chat sesli chat yemek tarifleri

ಮಂಜೇಶ್ವರ: ರೈಲ್ವೇ ಮೇಲ್ಸೇತುವೆ ಯೋಜನೆಗೆ ಗ್ರಾ. ಪಂ. ವತಿಯಿಂದ 25 ಲಕ್ಷ ರೂ. ನೀಡುವುದಾಗಿ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ವಾಗ್ಧಾನ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮಂಜೇಶ್ವರ: ರೈಲ್ವೇ ಮೇಲ್ಸೇತುವೆ ಯೋಜನೆಗೆ ಗ್ರಾ. ಪಂ. ವತಿಯಿಂದ 25 ಲಕ್ಷ ರೂ. ನೀಡುವುದಾಗಿ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ವಾಗ್ಧಾನ

Thursday, February 08 2018
img

ಮಂಜೇಶ್ವರ(www.asiavisionnews.com) : ಬಹು ಕಾಲದ ಪ್ರದೆಶವಾಸಿಗಳ ಬೆಡಿಕೆಯಾದ ಮಂಜೇಶ್ವರ ರೈಲ್ವೇ ನಿಲ್ದಾಣ ಸಮೀಪದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿಯವರು ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದು, ಜೊತೆಯಾಗಿ ಪಂಚಾಯತು ಆಡಳಿತ ಸಮಿತಿಯಲ್ಲಿ ಈ ಯೋಜನೆಗಾಗಿ 25 ಲಕ್ಷ ರೂ. ವನ್ನು ಮೀಸಲಿಟ್ಟಿರುವುದಾಗಿ ಪಂ. ಅಧ್ಯಕ್ಷರು ತಿಳಿಸಿದ್ದಾರೆ.

ಈ ಯೋಜನೆಯನ್ನು ಸಾಕಾರಗೊಳಿಸಲು ಮಂಜೇಶ್ವರ ಬ್ಲೋಕ್ ಪಂ. ನೊಂದಿಗೆ ಕೈ ಜೋಡಿಸಿ ಎಲ್ಲಾ ರಾಜಕೀಯ ಪಕ್ಷಗಳ ನೇತಾರರನ್ನು ಒಟ್ಟು ಗೂಡಿಸಿ ಮೇಲ್ಸೇತುವೆಯ ಕಾಮಗಾರಿಯನ್ನು ಆದಷ್ಟು ಬೇಗಣೆ ಆರಂಭಗೊಳ್ಳುವಂತೆ ಪ್ರೋತ್ಸಾಹ ನೀಡಲಿರುವುದಾಗಿ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ರೈಲ್ವೇ ಹಳಿಯನ್ನು ದಾಟುವಾಗ ಇದೇ ಹಳಿಯಲ್ಲಿ ಎಳೆ ಕೂಸು ಸಹಿತ ಮೂರು ಮಂದಿ ಧಾರುಣ ಮರಣವನ್ನಪ್ಪಿದ್ದರು. ಮಂಜೇಶ್ವರ ಪರಿಸರದ ಜನತೆಗೆ ಯಾವುದೇ ಅಗತ್ಯಕ್ಕೂ ಇದೇ ಹಳಿಯನ್ನು ಆಶ್ರಯಿಸಬೇಕಾಗಿದೆ. ಕೆಲವೊಂದು ಸಲ ಗೂಡ್ಸ್ ರೈಲು ಇದೇ ಹಳಿಯಲ್ಲಿ ನಿಂತರೆ ಒಂದು ವಾರಗಳ ತನಕ ಕಾಲ್ನಡಿಗೆ ಯಾತ್ರಿಕರು ಇದೇ ಗೂಡ್ಸಿನ ಅಡಿಭಾಗದಿಂದ ಸಂಚರಿಸಬೇಕಾಗಿದೆ.

ಈ ಸಂದರ್ಭ ಗೂಡ್ಸ್ ಚಲಿಸಿ ಇಬ್ಬರು ಮರಣವನ್ನಪ್ಪಿದ ಘಟನೆ ಇದೇ ಹಳಿಯಲ್ಲಿ ಸಂಭವಿಸಿದೆ.
ಮೇಲ್ಸೇತುವೆಗೆ ಮುತುವರ್ಜಿ ವಹಿಸಿ ಯೋಜನೆಗೆ 25 ಲಕ್ಷ ರೂ. ಖಾದಿರಿಸಿದ ಪಂ. ಅಧ್ಯಕ್ಷರ ತೀರ್ಮಾನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಶೆಗಳು ಕೇಳಿ ಬರುತ್ತಿವೆ. ಪಂ. ಅಧ್ಯಕ್ಷರ ರೀತಿಯಲ್ಲಿ ಇತರ ಜನಪ್ರತಿನಿಧಿಗಳು, ಶಾಸಕರು, ಸಂಸದರು ಮುತುವರ್ಜಿವಹಿಸಿದರೆ ಈ ಯೋಜನೆ ಸಾಕಾರಗೊಳ್ಳಬಹುದಾಗಿ ಜನರು ಆಡಿಕೊಳ್ಳುತಿದ್ದಾರೆ.

Comments

haberler antalya haberleri