antalya otogar rent a car Elektronik Sigara al ordu haberleri fatsa haberleri ordu haberleri sesli chat sesli chat yemek tarifleri

ಧರ್ಮನಗರ: ಮಖಾಂ ಊರೂಸ್ ಗೆ ಚಾಲನೆ ಹಾಗೂ ನೂತನ ಮಖಾಂ ಕಟ್ಟಡ ಲೋಕಾರ್ಪಣೆ:2018 ಫೆಬ್ರವರಿ 09 ರಿಂದ 17 ರ ತನಕ ಧಾರ್ಮಿಕ ಪ್ರಭಾಷಣೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಧರ್ಮನಗರ: ಮಖಾಂ ಊರೂಸ್ ಗೆ ಚಾಲನೆ ಹಾಗೂ ನೂತನ ಮಖಾಂ ಕಟ್ಟಡ ಲೋಕಾರ್ಪಣೆ:2018 ಫೆಬ್ರವರಿ 09 ರಿಂದ 17 ರ ತನಕ ಧಾರ್ಮಿಕ ಪ್ರಭಾಷಣೆ

Saturday, February 10 2018
img

ಮಂಜೇಶ್ವರ(www.asiavisionnews.com): ಚರಿತ್ರೆ ಪ್ರಸಿದ್ದವಾದ ಧರ್ಮನಗರ ಮಖಾಂ ಉರೂಸಿಗೆ ಶುಕ್ರವಾರದಂದು ಉರೂಸ್ ಸಮಿತಿ ಚೇಯರ್ಮ್ಯಾನ್ ಮೊಯಿದೀನ್ ಕುಟ್ಟಿ ನೀರೊಳಿಕೆಯವರು ಧ್ವಜಾರೋಹಣ ಗೈಯುವುದರೊಂದಿಗೆ ಚಾಲನೆ ದೊರಕಿತು.

ಅದೇ ರೀತಿ ನೂತನ ಮಖಾಂ ಕಟ್ಟಡವನ್ನು ಪೊಯ್ಯತ್ತಬೈಲ್ ಜಮಾಹತ್ ಖಾಝಿ ಶೈಖುನಾ ತಾಜುಶ್ಯರೀಅ ಅಲಿಕುಂಞಿ ಉಸ್ತಾದ್ ಲೋಕಾಎಪಣೆ ಗೈದರು. ಬಳಿಕ ನಡೆದ ಪ್ರಾರ್ಥಣೆಗೆ ಅಸಯ್ಯದ್ ಅತ್ತಾವುಲ್ಲ ತಂಘಲ್ ಎಂ ಎ ಉದ್ಯಾವರ ನೇತೃತ್ವ ನೀಡಿದರು.

ಈ ಸಂದರ್ಭ ಪೊಯ್ಯತ್ತಬೈಲ್ ಜಮಾಹತ್ ಅಧ್ಯಕ್ಷ ಡಿ ಎಂ ಕೆ ಮೊಹಮ್ಮದ್ , ಹಾಜಿ ಎನ್ ಆಹ್ಮದ್ ಕುಂಞಿ, ಹಾಜಿ ಪಿ ಕೆ ಕುಂಞಿಆಹ್ಮದ್ ಮುಸ್ಲಿಯಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರು.
ಬಳಿಕ ಸಂಜೆ ಅಲಿ ಕುಂಞಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಅಸಯ್ಯದ್ ಶಮೀಮ್ ತಂಘಲ್ ಕುಂಬೋಲ್ ಉದ್ಘಾಟಿಸಿದರು.

ಅಬ್ದುಲ್ ಜಬ್ಬಾರ್ ಸಖಾಫಿ ಔಲಿಯಾಗಳು ಹಾಗೂ ಅವರ ಪವಾಡಗಳು ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣ ನಡೆಸಿದರು. ವೇದಿಕೆಯಲ್ಲಿ ವಿ ಆಹ್ಮದ್ ಕುಂಞಿ ಓಡಂಗಲ, ಹಾಜಿ ಅಬ್ದುಲ್ ರಹ್ಮಾನ್ (ಮೋನು) ಉಪಸ್ಥರಿದ್ದರು.

ಫೆಬ್ರವರಿ 17 ರ ತನಕ ವಿವಿಧ ಧಾರ್ಮಿಕ ಪಂಡಿತರಿಂದ ಧರ್ಮಿಕ ಪ್ರಭಾಷಣ ನಡೆಯಲಿದೆ. 17 ರಂದು ಸಮಾರೋಪ ಸಮಾರಂಭದಲ್ಲಿ ಅಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸ್ ತಂಘಲ್ ಕಿಲ್ಲೂರು ದುವಾ ಆಶೀರ್ವಚನ ನೀಡಲಿದ್ದಾರೆ.

ಬಳಿಕ ಫೆಬ್ರವರಿ 18 ಕ್ಕೆ ಮೌಲೂದ್ ಪಾರಾಯಣದ ಬಳಿಕ ಹಗಲು ಉರೂಸ್ ಸಮಾರಂಭ ನಡೆಯಲಿದ್ದು ಮದ್ಯಾಹ್ನ 2 ರಿಂದ ಸಂಜೆ 5 ರ ತನಕ ಅನ್ನದಾನ ನಡೆಯಲಿದೆ.

Comments

haberler antalya haberleri