antalya otogar rent a car ordu haberleri fatsa haberleri - instagram türk takipçi al yemek tarifleri

ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಶಾಲಾ ಸಮಯದಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಶಾಲಾ ಸಮಯದಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ

Monday, February 12 2018
img

ಮಂಜೇಶ್ವರ(www.asiavisionnews.com): ಶಾಲೆಗಳಲ್ಲಿ ತರಗತಿ ನಡೆಯುವ ಸಮಯದಲ್ಲಿ ಮೊಬೈಲ್ ಫೋನ್ ಬಳಕೆಗೆ ಶಿಕ್ಷಣ ಇಲಾಖೆಯು ಕಟ್ಟುನಿಟ್ಟಿನ ನಿಷೇಧ ಹೇರಿದೆ. ಕೇರಳ ರಾಜ್ಯ ಹೈಯರ್ ಸೆಕೆಂಡರಿ ನಿರ್ದೇಶಕರು ಈ ಆದೇಶ ಹೊರಡಿಸಿದ್ದಾರೆ.

ಅದರಂತೆ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳ ಮೊಬೈಲ್ ಫೋನ್ ಬಳಕೆಗೆ ನಿಯಂತ್ರಣ ಹೇರಲಾಗಿದೆ. ಮೊಬೈಲ್ ಫೋನ್, ಫೇಸ್ಬು ಕ್, ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೂ ನಿಷೇಧ ಹೇರಲಾಗಿದೆ. ಆದೇಶ ಪಾಲಿಸದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ವಿರುದ್ಧ ಆಯಾ ಶಾಲೆಗಳ ಪ್ರಾಂಶುಪಾಲರು ಶಿಸ್ತು ಕ್ರಮ ಕೈಗೊಳ್ಳುವಂತೆ ಹೈಯರ್ ಸೆಕೆಂಡರಿ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.

ಶಾಲೆಗಳಲ್ಲಿ ಮೊಬೈಲ್ ಫೋನ್, ಫೇಸ್ಬುಿಕ್, ವಾಟ್ಸಪ್ ಇತ್ಯಾದಿ ಸಾಮಾಜಿಕ ಜಾಲತಾಣಗಳನ್ನು ಬಳಸುವುದು ಕಲಿಕೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ನಿಷೇಧ ಹೇರಬೇಕೆಂದು ರಾಜ್ಯ ಬಾಲ ಹಕ್ಕು ಆಯೋಗವು ನಿರ್ದೇಶನ ನೀಡಿತ್ತು. ಇದರನ್ವಯ ಈ ಹೊಸ ಆದೇಶ ಹೊರಡಿಸಿದೆ.

ಶಾಲಾ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರಲ್ಲಿ ಮೊಬೈಲ್ ಫೋನ್ಗೇಳಿದ್ದು, ಶಾಲೆಗಳಿಗೆ ಬರುವಾಗ ಜೊತೆಗೆ ತರುತ್ತಿದ್ದಾರೆ. ಶಾಲಾ ಸಮಯದಲ್ಲೂ ವಾಟ್ಸಪ್, ಫೇಸ್ಬುಟಕ್ ಇತ್ಯಾದಿಗಳಲ್ಲೇ ಗಮನಹರಿಸುತ್ತಾರೆ. ಶಾಲೆಗಳಿಗೆ ಹೋಗುವ, ಬರುವ ವೇಳೆ ವಿದ್ಯಾರ್ಥಿಗಳು ಮೊಬೈಲ್ ಫೋನ್ನಚಲ್ಲೇ ಕಾಲ ಕಳೆಯುತ್ತಾರೆ. ಈ ಸಂದರ್ಭ ಪರಿಸರದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆಯೂ ಪರಿಜ್ಞಾನ ಅವರಿಗಿರುವುದಿಲ್ಲ. ಇಂಟರ್ ನೆಟ್ ಸೌಕರ್ಯ ಹೊಂದಿರುವ ಮೊಬೈಲ್ ಫೋನ್ಗಿಳನ್ನು ಬಳಸುವ ವಿದ್ಯಾರ್ಥಿಗಳು ಅಡ್ಡದಾರಿಗಳನ್ನು ಹಿಡಿಯುತ್ತಿರುವ ಬಗ್ಗೆಯೂ ಸಾಕಷ್ಟು ದೂರುಗಳು ಬರತೊಡಗಿವೆ.

ಹೆತ್ತವರು ಜಾಗೃತರಾಗಿರಬೇಕು : ಫೇಸ್ಬುೂಕ್, ವಾಟ್ಸಪ್ ಇತ್ಯಾದಿಗಳಲ್ಲಿ ಸಮಾಜಘಾತಕರೂ, ವಂಚಕರು, ಲೈಂಗಿಕ ದಂಧೆ ನಡೆಸುತ್ತಿರುವವರು, ಉಗ್ರಗಾಮಿಗಳ ಸಂಪರ್ಕ ಬೆಳೆಸಿ ಅದೆಷ್ಟೋ ವಿದ್ಯಾರ್ಥಿಗಳನ್ನು ತಮ್ಮ ಬಲೆಗೆ ಬೀಳಿಸಿ ಜೀವನನ್ನು ಹಾಳು ಮಾಡಿದ ಉದಾಹರಣೆಗಳಿವೆ.

ಭಯೋತ್ಪಾದಕರು ತಮ್ಮ ಉದ್ದೇಶಕ್ಕಾಗಿ ಇದೇ ದಾರಿ ಬಳಸುತ್ತಿದ್ದಾರೆ. ಅವರ ಬಲೆಗೆ ಬಿದ್ದ ವಿದ್ಯಾರ್ಥಿಗಳು, ಯುವಕ - ಯುವತಿಯರು ನಾಪತ್ತೆಯಾದ ಘಟನೆಗಳು ಕಾಸರಗೋಡು ಜಿಲ್ಲೆಯಲ್ಲಿ ಸಾಕಷ್ಟಿವೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಹೆತ್ತವರು ಸದಾ ಜಾಗ್ರತೆ ವಹಿಸಬೇಕು. ಈ ಬಗ್ಗೆ ಪೊಲೀಸ್ ಇಲಾಖೆ ಕೂಡ ಎಚ್ಚರಿಕೆ ಪಾಲಿಸುವಂತೆ ತಿಳಿಸಿದೆ.

Comments

haberler antalya haberleri