cilt bakim urunleri ko cuce sesli sohbet sesli panelci sesli sohbet Elektronik Sigara al

ಕುಂಬಳೆ: ಠಾಣಾ ಪರಿಸರದಲ್ಲೇ ಹಸಿರು ತರಕಾರಿ ಬೆಳೆಸಿ ಮಾದರಿಯಾಗುತ್ತಿರುವ ಕರಾವಳಿ ತೀರ ಪ್ರದೇಶ ಪೊಲೀಸರು | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಕುಂಬಳೆ: ಠಾಣಾ ಪರಿಸರದಲ್ಲೇ ಹಸಿರು ತರಕಾರಿ ಬೆಳೆಸಿ ಮಾದರಿಯಾಗುತ್ತಿರುವ ಕರಾವಳಿ ತೀರ ಪ್ರದೇಶ ಪೊಲೀಸರು

Monday, February 12 2018
img

ಮಂಜೇಶ್ವರ(www.asiavisionnews.com): ಠಾಣಾ ಪರಿಸರದಲ್ಲಿ ಹಸಿರು ತರಕಾರಿಗಳನ್ನು ಬೆಳೆಸಿ ಮಾದರಿಯಾಗುತಿದ್ದಾರೆ ಕುಂಬಳೆ ಕರಾವಳಿ ತೀರ ಪ್ರದೇಶದ ಪೊಲೀಸರು ಪಡವಲ ಕಾಯಿಯಿಂದ ಆರಂಭಿಸಿ ಹಸಿ ಮೆಣಸಿನ ತನಕ ಹಸಿರು ತರಕಾರಿಗಳು ಪೊಲೀಸರ ಸಂರಕ್ಷಣೆಯಿಂದ ಬೆಳೆದು ನಿಂತಿದೆ.
ಠಾಣಾ ಪರಿಸರದ ಮುಂಬಾಗದಲ್ಲಿ ಮೂರು ತಿಂಗಳಿಗೆ ಮೊದಲು ಹಸಿರು ಕೇರಳ ಯೋಜನೆಯ ಅಂಗವಾಗಿ ಹಸಿರು ತರಕಾರಿಯನ್ನು ಬೆಳೆಸಲಾಗಿತ್ತು.

ಕರ್ತವ್ಯ ಮುಗಿಸಿ ಸಿಗುವ ಸಮಯಗಳಲ್ಲಿ ಕೃಷಿ ಭವಣಕ್ಕೆ ತೆರಳಿ ಅಲ್ಲಿಂದ ಸಿಗುವ ತರಕಾರಿ ಬೀಜಗಳನ್ನು ತಂದು ಠಾಣಾ ಪರಿಸರದಲ್ಲಿ ಹಾಕಿ ಹಸಿರು ತರಕಾರಿ ಬೆಳೆಸುವ ಉದ್ದೇಶದಿಂದ ಇಲ್ಲಿಯ ಪೊಲೀಸರು ಕೃಷಿಯಲ್ಲಿ ಇತರರಿಗೆ ಮಾದರಿಯಾಗುತಿದ್ದಾರೆ.

ಜೈವ ಗೊಬ್ಬರಗಳನ್ನು ಮಾತ್ರ ಉಪಯೋಗಿಸಿ ಕೃಷಿಯನ್ನು ಬೆಳೆಸಲಾಗಿದೆ. ನುಗ್ಗೆ ಕಾಯಿ, ಬೆಂಡೆಕಾಯಿ, ಪಡವಲ ಕಾಯಿ, ಹೀರೆಕಾಯಿ, ತೊಂಡೆಕಾಯಿ, ಸೋರೆಕಾಯಿ, ಸೌತೆಕಾಯಿ, ಕೆಂಪು ಮೆಣಸು, ಹಸಿ ಮೆಣಸು ಸೇರಿದಂತೆ ವಿವಿಧ ರೀತಿಯ ಹಸಿರು ತರಕಾರಿಗಳು ಕರಾವಳಿ ಪೊಲೀಸ್ ಠಾಣೆಯ ಮುಂಬಾಗದಲ್ಲಿ ಬೆಳೆದು ನಿಂತಿದೆ.

ಠಾಣೆಯ ಅಡಿಷನಲ್ ಎಸ್ಸೈ ಶಶಿ ಎಂಬವರ ಶ್ರಮದ ಫಲದಿಂದ ಉಳಿದ ಪೊಲೀಸರು ಅದಕ್ಕೆ ಕೈ ಜೋಡಿಸಿದ ಫಲವಾಗಿ ಇಷ್ಟೊಂದು ತರಕಾರಿಗಳನ್ನು ಬೆಳೆಸಲು ಸಾಧ್ಯವಾಗಿರುವುದಾಗಿ ಠಾಣಾಧಿಕಾರಿ ಹೇಳುತಿದ್ದಾರೆ.

ಠಾಣೆಯಲ್ಲಿರುವ ಪೊಲೀಸರ ಸ್ವಂತ ಉಪಯೋಗಕ್ಕೆ ತೆಗೆದು ಉಳಿದ ತರಕಾರಿಗಳನ್ನು ಠಾಣಾ ಪರಿಸರದಿಂದ ಹಾದು ಹೋಗುವ ಜನರಿಗೆ ಪೊಲೀಸರು ಕೊಡುವುದರ ಜೊತೆಗೆ ಸ್ವಂತ ಮನೆ ಪರಿಸರದಲ್ಲಿ ಜೈವಿಕ ಗೊಬ್ಬರವನ್ನು ಉಪಯೋಗಿಸಿ ಹಸಿರು ತರಕಾರಿ ಬೆಳೆಸುವಂತೆ ಪ್ರೇರೇಪಣೆ ನೀಡುತಿದ್ದಾರೆ..

ಅಂತೂ ಪೊಲೀಸರು ಹಸಿರು ತರಕಾರಿ ಬೆಳೆಸಲು ತೋರಿಸಿದ ಆಸಕ್ತಿಯನ್ನು ಕಂಡು ಪರಿಸರದಲ್ಲಿರುವ ಮನೆಯವರು ಕೂಡಾ ಹಸಿರು ತರಕಾರಿ ಬೆಳೆಸಲು ಆರಂಭಿಸಿದ್ದಾರೆ.

Comments

haberler antalya haberleri