cilt bakim urunleri ko cuce sesli sohbet sesli panelci sesli sohbet Elektronik Sigara al

ಕುಂಜತ್ತೂರು ಶಾಲೆಯಲ್ಲಿ ಶೈಕ್ಷಣಿಕ ಯೋಜನೆಗೆ ಚಾಲನೆ ಹಾಗೂ ಅನಾವರಣ: ಹರ್ಷಾದ್ ವರ್ಕಾಡಿ ಉದ್ಘಾಟನೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಕುಂಜತ್ತೂರು ಶಾಲೆಯಲ್ಲಿ ಶೈಕ್ಷಣಿಕ ಯೋಜನೆಗೆ ಚಾಲನೆ ಹಾಗೂ ಅನಾವರಣ: ಹರ್ಷಾದ್ ವರ್ಕಾಡಿ ಉದ್ಘಾಟನೆ

Tuesday, February 13 2018
img

ಮಂಜೇಶ್ವರ(www.asiavisionnews.com): ವಿದ್ಯಾಭ್ಯಾಸ ಸಂರಕ್ಷಣಾ ಯಜ್ಞದ ಅಂಗವಾಗಿ ರೂಪಿಸಲಾದ ಶೈಕ್ಷಣಿಕ ಮಾಸ್ಟರ್ ಪ್ಲಾನ್ ನ ಉದ್ಘಾಟನೆ ಹಾಗೂ ಘೋಷಣೆ ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯ ಸಭಾಂಗಣದಲ್ಲಿ ಜರಗಿತು.

ಕಾಸರಗೋಡು ಜಿಲ್ಲಾ ಸ್ಥಾಯೀ ಸಮಿತಿ ಅಧ್ಯಕ್ಷರಾದ ಹರ್ಷಾದ್ ವರ್ಕಾಡಿಯವರು ಮಾಸ್ಟರ್ ಪ್ಲಾನನ್ನು ಪ್ರಾಂಶುಪಾಲರಿಂದ ಸ್ವೀಕರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಡಿದ ಅವರು ಮರಳಿ ಬಾ ಶಾಲೆಗೆ ಎಂಬ ಪರಿಕಲ್ಪಣೆಯೊಂದಿಗೆ ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಸಂರಕ್ಷಣೆ ಹಾಗೂ ಶಿಕ್ಷಣ ಅಭಿವೃದ್ದಿಗೆ ಸಂಘಟಿತರಾಗಿ ಮುನ್ನಡೆಯಬೇಕೆಂಬುದಾಗಿ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯು ಎಚ್ ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದರು. ನೂತನವಾಗಿ ಟೈಲ್ಸ್ ಹಾಕಿದ ಕೊಠಡಿಗಳ ಉದ್ಘಾಟನೆ ಕೂಡಾ ಈ ಸಂದರ್ಭ ನಡೆಯಿತು.

ಶಾಲಾ ತರಗತಿ ಕೊಠಡಿಗಳಿಗೆ ಟೈಲ್ಸ್ ಹಾಕಲು ಉದಾರ ದೇಣಿಗೆ ನೀಡಿದ ಡಾ. ಜಯಪಾಲ ಶೆಟ್ಟಿ ಹಾಗೂ ನಿವೃತ ಶಿಕ್ಷಕ ಶ್ರೀ ಈಶ್ವರ ಮಾಸ್ಟರ್ ಇವರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ಪ್ರಸನ್ನ ಕುಮಾರಿ, ಮುಖ್ಯೋಪಧ್ಯಾಯ ಅಗಸ್ಟಿನ್ ಬರ್ನಾಡ್, ಅನಿತಾ ಟೀಚರ್, ವಿ ಎಚ್ ಎಸ್ ಪ್ರಾಂಶುಪಲ ಶಿಶುಪಾಲನ್, ಶಿಕ್ಷಕ ರವೀಂದ್ರ ರೈ ಸೇರಿದಂತೆ ಹಲವರು ಉಪಸ್ಥರಿದ್ದರು.

Comments

haberler antalya haberleri