antalya otogar rent a car ordu haberleri fatsa haberleri - instagram türk takipçi al instagram yavaş beğeni satın al Dış cephe temizliği ko-cuce ko-cuce

ಬಂಗ್ರ ಮಂಜೇಶ್ವರ: ಊರವರ ಪರಿಶ್ರಮದಿಂದಲೇ ನಿರ್ಮಾಣಗೊಂಡ ಎರಡು ಊರುಗಳನ್ನು ಸಂಪರ್ಕಿಸುವ ಉರೂಸ್ ಸೇತುವೆ...ತಾತ್ಕಾಲಿಕ ಸೇತುವೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಬಂಗ್ರ ಮಂಜೇಶ್ವರ: ಊರವರ ಪರಿಶ್ರಮದಿಂದಲೇ ನಿರ್ಮಾಣಗೊಂಡ ಎರಡು ಊರುಗಳನ್ನು ಸಂಪರ್ಕಿಸುವ ಉರೂಸ್ ಸೇತುವೆ...ತಾತ್ಕಾಲಿಕ ಸೇತುವೆ

Friday, March 02 2018

ಮಂಜೇಶ್ವರ(www.asiavisionnews.com: ಹಿರಿಯ ತಲೆಮಾರಿನ ಉತ್ಸಾಹಿಗಳು ಸಂಬಂಧಗಳನ್ನು ಗಟ್ಟಿಯಾಗಿಸಲು, ಧಾರ್ಮಿಕ ಚಿಂತನೆಗಳೊಂದಿಗೆ ಮಾಡಿದ ಹಲವು ಮಹತ್ಸಾಧನೆಗಳು ಇಂದಿನ ಹೊಸ ತಲೆಮಾರಿಗೆ ಕುತೂಹಲದೊಂದಿಗೆ ಮಾರ್ಗದರ್ಶಿಯಾಗಿ ಕುತೂಹಲಕರವಾಗಿರುತ್ತದೆ.

ಉಪ್ಪಳ ಸಮೀಪದ ಕಡಲ ಅಳಿವೆಬಾಗಿಲ ತೀರ ಮುಸೋಡಿ ಅಧಿಕದಲ್ಲಿರುವ ಹಝ್ರತ್ ಬಾಬಾ ಫಕ್ರುದ್ದೀನ್ ವಲಿಯಲ್ಲಾಹಿ ಮಸೀದಿಯಲ್ಲಿ ಐದು ವರ್ಷಗಳಿಗೊಮ್ಮೆ ವಿಧಿವಿಧಾನಗಳೊಂದಿಗೆ ಉರೂಸ್ ಆಚರಿಸಲ್ಪಡುತ್ತಿದ್ದು, ಇದಕ್ಕೆ ಅನತಿ ದೂರದ ಬಂಗ್ರಮಂಜೇಶ್ವರದ ಮುಹಿಯ್ಯದ್ದೀನ್ ಜುಮಾ ಮಸಿದಿಯವರು, ಆ ಪರಿಸರದ ಮುಸ್ಲಿಂ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಇದರಲ್ಲಿ ಏನು ವಿಶೇಷ ಎಂದಿರಾ.? ಅವರು ಆಗಮಿಸುವುದು ಕಾರು, ವ್ಯಾನ್ ಗಳಲ್ಲಿ ಅಲ್ಲ. ಅವರು ತಾತ್ಕಾಲಿಕವಾಗಿ ಅಳಿವೆಗೆ ನಿರ್ಮಿಸಿದ ಸಂಕಗಳ ಮೂಲಕ ನಡೆದು ಬರುತ್ತಾರೆ.

ಏನು ಸಂಕ:
ಬಂಗ್ರಮಂಜೇಶ್ವರದಿಂದ ಮುಸೋಡಿ ಅಧಿಕದಲ್ಲಿರುವ ಮಸೀದಿಯ ಉರೂಸ್ ಸಮಾರಂಭಕ್ಕೆ ಆಗಮಿಸುವ ಭಕ್ತರಿಗೆ ಸಂಚರಿಸಲು ಮರಳು, ಮರಗಳನ್ನು ಉಪಯೋಗಿಸಿ ತಾತ್ಕಾಲಿಕವಾಗಿ ನಿರ್ಮಿಸಿದ ಸಂಕಗಳನ್ನು ಬಳಸಲಾಗುತ್ತಿದೆ. ಮೂವರು ಜೊತೆಯಾಗಿ ಸಾಗುವಷ್ಟು ಅಗಲವಾಗಿರುವ ಮೂರು ಹಂತಗಳಲಲಿರುವ ಕಾಲು ಸಂಕ ಸುಮಾರು 960 ಮೀಟರ್ ಗಳಷ್ಟು ಉದ್ದವಿದೆ.

ಬಂಗ್ರಮಂಜೇಶ್ವರದಿಂದ ಆರಂಭಗೊಳ್ಳುವ ಈ ಸಂಕ ಮೊದಲು ನೀರು ಕಡಿಮೆ ಇರುವಲ್ಲಿ ಹದವಾದ ಮೆದು ಮಣ್ಣಿನಿಂದ ನಿರ್ಮಿಸಲ್ಪಟ್ಟಿದ್ದು, ಮಧ್ಯದಲ್ಲಿ ಮರಳು ಚೀಲಗಳಿಂದ ಕಟ್ಟಲ್ಪಟ್ಟ ಸಂಕ ನಿರ್ಮಿಸಲಾಗಿದೆ. ಮೂರನೇ ಹಂತದ, ಮುಸೊಡಿ ಅಧಿಕದ ಮಸೀದಿಯ ಸನಿಹ ತಲಪುತ್ತಿರುವಲ್ಲಿ ಮರಳು ಚೀಲಗಳ ಮೇಲೆ ಹಲಗೆಗಳನ್ನು ಬಳಸಿ ಒಂದಷ್ಟು ಗಟ್ಟಿಯಾಗಿರುವ ಸಂಕ ನಿರ್ಮಿಸಲಾಗುತ್ತದೆ.

ಸಂಕ ನಿರ್ಮಾಣಕ್ಕೆ ಆರಾಧವಾಗಿ ಮರಗಳ ಗಟ್ಟಿಯಾದ ಕಂಬಗಳನ್ನು ತೊಲೆಗಳಂತೆ ಬಳಸಲಾಗಿದೆ. ರಾತ್ರಿ ಕಾಲದಲ್ಲಿ ಮಾತ್ರ ಉರೂಸ್ ಹಬ್ಬಾಚರಣೆ ನಡೆಯುವುದರಿಂದ ಸೇತುವೆ(ಸಂಕ) ಪೂರ್ಣ ವಿದ್ಯುತ್ ದೀಪಗಳಿಂದ ಅಲಂಕೃತವಾಗಿರುತ್ತದೆ. ಜೊತೆಗೆ ಅಲ್ಲಲ್ಲಿ ಆಗಮಿಸುವವರ ಸುರಕ್ಷತೆಗೆ ಸುರಕ್ಷಾ ಕಾರ್ಯಕರ್ತರಿಗೆ ಪ್ರತ್ಯೇಕ ಏಯ್ಡ್ ಪೋಸ್ಟ್ ಗಳನ್ನೂ ನಿರ್ಮಿಸಲಾಗಿರುತ್ತದೆ.

ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಸುಮಾರು ನಾಲ್ಕು ತಿಂಗಳುಗಳು ಬೇಕಾಗಿದ್ದು, ಪ್ರತಿ ಐದು ವರ್ಷಗಳಿಗೊಮ್ಮೆ ಈ ಸೇತುವೆ ನಿರ್ಮಿಸಲಾಗುತ್ತದೆ. ಉರೂಸ್ ಕೊನೆಗೊಳ್ಳುತ್ತಿರುವಂತೆ ಸೇತುವೆಯನ್ನು ಕೆಡವಲಾಗುತ್ತದೆ. ಸೇತುವೆಯ ಮೇಲೆ ಸಂಚರಿಸುವವರ ಖಷಿಗಾಗಿ ಅಲ್ಲಲ್ಲಿ ಬೆಳಕಿನ ಚಿತ್ತಾರ ಮೂಡಿಸುವ ಸರಳ ಲೈಟ್ ಆರ್ಟ್ಗುಳನ್ನೂ ವ್ಯವಸ್ಥೆಗೊಳಿಸಲಾಗಿದೆ. ಮಹಿಳೆಯರ ಸಂಚಾರಕ್ಕೆ ಪ್ರತ್ಯೇಕ ವ್ಯವಸ್ಥೆಯೂ ಒಳಗೊಂಡಿದೆ.ಸೇತುವೆ ನಿರ್ಮಾಣಕ್ಕೆ ಅಂದಾಜು 4-5 ಲಕ್ಷ ರೂ.ಗಳ ವೆಚ್ಚ ತಗಲಬಹುದಾಗಿದ್ದು, ಆದರೆ ಸ್ಥಳೀಯು ಪರಿಶ್ರಮ ವಹಿಸಿ ಸೇವಾರ್ಥವಾಗಿ 4 ತಿಂಗಳುಗಳಿಂದ ಈ ಸೇತುವೆ ನಿರ್ಮಿಸಿದ್ದಾರೆ.

ಯಾವಾಗ ಬಳಕೆ:
ಮುಸೋಡಿ ಅಧಿಕದ ಹಝ್ರತ್ ಬಾಬಾ ಫಕ್ರುದ್ದೀನ್ ವಲಿಯಲ್ಲಾಹಿ ಮಸಿದಿಯಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಉರೂಸ್ ಉತ್ಸವ ನಡೆಯುತ್ತಿದ್ದು, ಪ್ರಸ್ತುತ ವರ್ಷ ಫೆ.22 ರಿಂದ ಮೊದಲ್ಗೊಂಡು ಮಾ.4ರ ತನಕ ಮತ ಪ್ರವಚನಗಳೊಂದಿಗೆ ನಡೆಯುತ್ತಿದೆ. ಬಂಗ್ರಮಂಜೇಶ್ವರದಿಂದ ದಿನನಿತ್ಯ ತಾತ್ಕಾಲಿಕ ನಿರ್ಮಿತಿಯ ಸೇತುವೆಯ ಮೂಲಕ ಸಾವಿರಾರು ಜನರು ಕಾಲ್ನಡಿಗೆಯಲ್ಲಿ ಆಗಮಿಸುತ್ತಿದ್ದಾರೆ.

ಹಿನ್ನೆಲೆ:
ಮುಸೋಡಿ ಅಧಿಕದ ಮಸೀದಿಯು ಬಹಳ ಪ್ರಾಚೀನ ಮಸಿದಿಯಾಗಿದ್ದು, ಸ್ಥಳೀಯ ಮೀನು ಹಿಡಿದು ಬದುಕುವ ನಿವಾಸಿಗಳು ನಂಬಿಕೊಂಡು ಬರುತ್ತಿದ್ದಾರೆ. ಅದು 1960ರ ಕಾಲಘಟ್ಟ. ಅಂದಿನ ಕೇರಳದ ಅತ್ಯಂತ ಹಿರಿಯ ಮುಸ್ಲಿಂ ಪಂಡಿತರಾದ ಸಿ.ಎಂ.ಮಡವೂರು ರವರು ತಮ್ಮ ಸಂಬಂಧಿಕರ ಮನೆಗೆಂದು ಮಂಜೇಶ್ವರದ ಜೈನರ ಪೇಟೆಗೆ ಆಗಮಿಸಿದ್ದರು. ಆ ಸಂದರ್ಭ ಅವರು ತಮ್ಮ ಸಂಬಂಧಿಯಲ್ಲಿ ಸ್ಥಳದ ಬಗ್ಗೆ ವಿಚಾರಿಸುತ್ತ, ಅಂದು ಬಂಗ್ರಮಂಜೇಶ್ವರ, ಜೈನ ಪೇಟೆಗಳ ಮುಸ್ಲಿಂ ಜನಾಂಗಕ್ಕೆ ಅರಿವಿರದ ಉಪ್ಪಳ ಮುಸೊಡಿಯ ಮಸೀದಿಯ ಬಗ್ಗೆ ಸ್ವತಃ ಪ್ರಶ್ನಿಸಿ ಅಲ್ಲಿಗೆ ತೆರಳಿ ಪ್ರಾರ್ಥನೆಗೆ ಕೇಳಿಕೊಂಡಿದ್ದು, ಅವರನ್ನು ಅಲ್ಲಿಗೆ ಕರೆದೊಯ್ಯಲಾಯಿತು. ಸಿ.ಎಂ ಮಡವೂರು ರವರು ಅಧಿಕದ ಅನಾಮಿಕ ಮಸೀದಿಯಲ್ಲಿ ದೀರ್ಘ ಪ್ರಾರ್ಥನೆಗೈದು, ತಮ್ಮ ಸಂಬಂಧಿಕರಲ್ಲಿ ಬಂಗ್ರಮಂಜೇಶ್ವರದ ಮಸಿದಿಯ ಮೂಲಕ ಮುಸೊಡಿಯ ಮಸೀದಿಯಲ್ಲಿ ವಿಶೇಷ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲು ತಿಳಿಸಿ ತೆರಳಿದ್ದರು.

ಆದರೆ ಮುಸೊಡಿ ಅಧಿಕಕ್ಕೆ ತೆರಳಲು ಮಾರ್ಗಗಳಿಲ್ಲದೆ ಕೊನೆಗೆ ತಾತ್ಕಾಲಿಕ ಸೇತುವೆ ನಿರ್ಮಿಸಲು ಸಿ.ಎಂ.ಮಡವೂರರ ನಿರ್ದೇಶಾನುಸಾರ ಅನುಗ್ರಹದಿಂದ ಆರಂಭಿಸಿದರು. ಬಳಿಕ ಪ್ರತಿ ಐದು ವರ್ಷಗಳಿಗೊಮ್ಮೆ ಈ ರೀತಿ ಸೇತುವೆ ನಿರ್ಮಿಸಿ ಆಚರಣೆಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ವರದ ಮರ:
ಮುಸೊಡಿ ಅಧಿಕದ ಮಸಿದಿಯ ಒಳಬದಿ ಮೂರು ವಿಶೇಷ ಅನುಗ್ರಹದ ಮರಗಳಿದ್ದು(ಅತ್ತಿಯಂತಹ ಮರ) ಆ ಮರದ ತೊಗಟೆಯ ಕಶಾಯವನ್ನು ಕುಡಿಯುವುದರಿಂದ ರೋಗ ರುಜಿನಗಳು, ಸಂಕಷ್ಟಗಳು ನಿವಾರಣೆಯಾಗುತ್ತಿರುವ ಬಗ್ಗೆ ಪ್ರತೀಕಗಳಿದ್ದು, ಈಗಲೂ ಹಲವಾರು ಭಕ್ತರು ಈ ಮೂಲಕ ಕಷ್ಟಗಳಿಂದ ಪಾರಾಗಿರುತ್ತಾರೆ. ಮಕ್ಕಳಿಲ್ಲದವರಿಗೆ ಸಂತಾನ, ಗುಣಮುಖವಾಗದ ಕೈಬಿಟ್ಟ ಜೀವಗಳಿಗೆ ಮರು ಜೀವನ ನಿಡಿದ ಉದಾಹರಣೆ ಈ ಮಸಿದಿಯ ಪವಿತ್ರ ಮರಗಳದ್ದು ಎಂಬುದು ಮಸಿದಿಯ ಉರೂಸ್ ಸಮಿತಿಯ ಅಧ್ಯಕ್ಷರೂ, ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷರೂ ಆಗಿರುವ ಹಾಜಿ ಅಬ್ದುಲ್ ಅಸೀಸ್ ಏಶ್ಯಾ ವಿಷನ್ ನ್ಯೂಸಿಗೆ ತಿಳಿಸಿರುವರು.
ಈ ಬಾರಿ ಫೆ. 22 ರಿಂದ ಆರಂಭಗೊಂಡಿರುವ ಉರೂಸ್ ಹಾಗೂ ವಿಶೇಷ ಮತ ಪ್ರವಚನಗಳು ಮಾ. 4ರ ವರೆಗೆ ನಡೆಯಲಿದೆ. ದಿನನಿತ್ಯ ಬಂಗ್ರಮಂಜೇಶ್ವರ ಸಹಿತ ಇತರ ಕಡೆಗಳಿಂದ ಸಾವಿರಾರು ಜನರು ಮಸೀದಿಗೆ ಆಗಮಿಸಿ ಪ್ರಾರ್ಥನೆಗೈದು ಭಾಗವಹಿಸಿ ತೆರಳುತ್ತಾರೆ.

ಸೌಹಾರ್ಧತೆಯ ನೆಲೆ:
ಬಂಗ್ರಮಂಜೇಶ್ವರ ಹಾಗೂ ಮುಸೊಡಿ ಅಧಿಕದ ಜನರು ಸೌಹಾರ್ಧತೆ, ಶಾಂತಿಯಿಂದ ನೆಲೆಕಂಡುಕೊಳ್ಳಬೇಕೆಂಬ ಅತ್ಯುತ್ಸಾಹದ ಯುವ ಸಮೂಹ ಹಿರಿಯ ತಲೆಮಾರಿನ ಮರ್ಗದರ್ಶನಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸೇತುವೆಯ ಮೂಲಕ ಐದು ವರ್ಷಗಳಿಗೊಮ್ಮೆ ಅತ್ತಿತ್ತ ಸಂಚರಿಸಿ ಸೌಹಾರ್ಧತೆಯಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ಈ ಸಂಬಂಧಗಳನ್ನು ಶಾಶ್ವತವಾಗಿ ಕಾಪಿಡುವಲ್ಲಿ ಆಧುನಿಕ ವ್ಯವಸ್ಥೆಗಳನ್ನು ಸಮರ್ಪಕವಾಗಿ ಬಳಸಿ ಮುಂದುವರಿಯುತ್ತಿದೆ. ಉರೂಸ್ ಸಮಿತಿಯ ಮುಖಂಡರಾದ ಅಬ್ದುಲ್ಲ ಕಡವತ್, ಮೊಹಮ್ಮದಾಲಿ, ಹಮೀದ್ ಹಾಜಿ ಸಹಿತ ಹಲವರು ಮಾರ್ಗದರ್ಶಕರಾಗಿದ್ದಾರೆ.

Comments

haberler antalya haberleri