cilt bakim urunleri ko cuce sesli sohbet sesli panelci sesli sohbet Elektronik Sigara al

ಮಂಜೇಶ್ವರ: ಖ್ಯಾತ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಮಾರ್ಚ್ 9 ರಂದು ಬಾಯಾರಿಗೆ. | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮಂಜೇಶ್ವರ: ಖ್ಯಾತ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಮಾರ್ಚ್ 9 ರಂದು ಬಾಯಾರಿಗೆ.

Wednesday, March 07 2018
img

ಮಂಜೇಶ್ವರ (www.asiavisionnews.com):ಎಸ್.ಕೆ.ಎಸ್.ಎಸ್.ಎಫ್ ಬಾಯಾರು ಶಾಖೆ ವತಿಯಿಂದ ಮಜ್ಲಿಸುನ್ನೂರ್ ಹಾಗೂ ಸುನ್ನೀ ಮಹಾ ಸಮ್ಮೇಳನ ಮಾರ್ಚ್ 9 ರಂದು ಬಾಯಾರು ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆಯೆಂದು ಪದಾಧಿಕಾರಿಗಳು ಮಂಜೇಶ್ವರ ಪ್ರೆಸ್ಕ್ಲ ಬ್ ನಲ್ಲಿಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

9 ರಂದು ಶುಕ್ರವಾರ ಸಂಜೆ 4 ಘಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿಕೆ.ಎಸ್.ಕೆ ತಂಘಳ್ ಅಧ್ಯಕ್ಷತೆ ವಹಿಸುವರು. ಸಯ್ಯಿದ್ ಅಲೀ ತಂಘಳ್ ಕುಂಬೋಳ್ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಆದಂದಾರಿಮಿ ಪ್ರಾಸ್ತಾವಿಕ ಭಾಷಣ ಮಾಡುವರು.ಪಳ್ಳಿಕ್ಕರೆ ಖಾಝಿಅಬ್ದುಲ್ಖಾ.ದರ್ ಮುಸ್ಲಿಯಾರ್ ದುವಾಗೆ ನೇತೃತ್ವ ನೀಡುವರು.ಅಂತಾರಾಷ್ಟ್ರೀಯಖ್ಯಾತಿ ಹೊಂದಿರುವ ಸಿಂಸಾರುಲ್ ಹಖ್ ಹುದವಿ ಮುಖ್ಯ ಭಾಷಣ ಮಾಡುವರು.ಬಳಿಕ ನಡೆಯುವ ಮಜ್ಲಿಸುನ್ನೂರ್ ಗೆ ನಜ್ಮುದ್ದೀನ್ ಪೂಕ್ಕೋಯ ತಂಘಳ್ ನೇತೃತ್ವ ನೀಡುವರು.

ಸುದ್ದಿಗೋಷ್ಟಿಯಲ್ಲಿ ಮೋನು ಹಾಜಿ ಮಳಿಗ , ಪಿ.ಪಿ ಕುಂಞ ಬಾಯಾರು , ಹಮೀದ್ ಹಾಜಿ ಪೈವಳಿಕೆ , ಲತೀಫ್ ಫೈಝಲ್ರ ಹ್ಮಾನಿ , ಹಮೀದ್ ಮಳಿಗ , ಹನೀಫ್ಜಾದರ ಉಪಸ್ತಿತರಿದ್ದರು.

Comments

haberler antalya haberleri