antalya otogar rent a car ordu haberleri fatsa haberleri - instagram türk takipçi al yemek tarifleri instagram yavaş beğeni satın al

ಕನ್ನಡ ಮಾಧ್ಯಮಕ್ಕೆ ಮಲೆಯಾಳಂ ಶಿಕ್ಷಕರ ನೇಮಕಾತಿ : ಪಿಎಸ್ಸಿು ರಾಂಕ್ ಪಟ್ಟಿ ರದ್ದುಗೊಳಿಸಲು ಹರ್ಷಾದ್ ವರ್ಕಾಡಿ ಆಗ್ರಹ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಕನ್ನಡ ಮಾಧ್ಯಮಕ್ಕೆ ಮಲೆಯಾಳಂ ಶಿಕ್ಷಕರ ನೇಮಕಾತಿ : ಪಿಎಸ್ಸಿು ರಾಂಕ್ ಪಟ್ಟಿ ರದ್ದುಗೊಳಿಸಲು ಹರ್ಷಾದ್ ವರ್ಕಾಡಿ ಆಗ್ರಹ

Thursday, March 08 2018
img

ಮಂಜೇಶ್ವರ(www.asiavisionnews.com): ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಶಾಲೆಗಳಲ್ಲಿ ಕನ್ನಡ ಬಲ್ಲ ಶಿಕ್ಷಕರ ಹುದ್ದೆಗಳಿಗೆ ಪಿ.ಎಸ್.ಸಿ ನಡೆಸಿದ ಪರೀಕ್ಷೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ರಾಂಕ್ ಪಟ್ಟಿ ಪ್ರಕಟವಾಗಿದ್ದು, ಪೂರ್ಣ ಮಲೆಯಾಳ ಬಲ್ಲವರೇ ಪಟ್ಟಿಯಲ್ಲಿ ತುಂಬಿದ್ದಾರೆ.

ಹೊರ ಜಿಲ್ಲೆಗಳ ಅಭ್ಯರ್ಥಿಗಳೇ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದು,ಇವರಲ್ಲಿ ಕನ್ನಡ ಬಲ್ಲವರು ಯಾರು ಇಲ್ಲ ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧಕ್ಷ ಹರ್ಷಾದ್ ವರ್ಕಾಡಿ ಆರೋಪಿಸಿದ್ದಾರೆ.

ಕನ್ನಡ ಮೀಸಲು ಹುದ್ದೆಗಳಿಗೆ ಅನ್ಯ ಭಾಷಿಗರು ಯಾವ ಮಾಯಾಜಾಲದಲ್ಲಿ ಪ್ರವೇಶಿಸಿದ್ದಾರೆಂದು ತಿಳಿಯದೆ ಕನ್ನಡ ಪ್ರೇಮಿಗಳು ತಲೆಗೆ ಕೈ ಹೊತ್ತು ಕುಳಿತಿದ್ದಾರೆ. ಕನ್ನಡ ಓದು,ಬರಹ ಹಾಗೂ ಮಾತನಾಡಲು ಸಂದರ್ಶನದಲ್ಲಿ ಇಪ್ಪತ್ತು ಅಂಕಗಳನ್ನು ನೀಡಲಾಗಿದ್ದು, ಈ ಸಂದರ್ಶನದಲ್ಲಿ ಕನಿಷ್ಠ ಅಂಕ ಸಂಪಾದಿಸಿದರೂ, ಈಗಿನ ನಿಯಮದಂತೆ ನೇಮಕಾತಿಗೆ ಯಾವುದೇ ಅಡ್ಡಿಯಿಲ್ಲವೆನ್ನಲಾಗಿದೆ.

ಒಟ್ಟು 12 ಹುದ್ದೆಗಳ ರಾಂಕ್ ಲಿಸ್ಟ್ ಪ್ರಕಟವಾಗಿದ್ದು, ಈ ಕನ್ನಡ ಮೀಸಲು ಹುದ್ದೆಗಳಲ್ಲಿ ಕನ್ನಡ ಬಲ್ಲವರು ಯಾರು ಇಲ್ಲ. ಈಗಾಗಲೇ ಪ್ರಕಟಗೊಂಡ ಪ್ರೌಢಶಾಲಾ ಸಹಾಯಕ ದೈಹಿಕ ಶಿಕ್ಷಕ ಕನ್ನಡ ಮಾಧ್ಯಮ ವಿಭಾಗದ ರಾಂಕ್ ಪಟ್ಟಿಯಲ್ಲಿ 12 ಮಂದಿ ಮಲೆಯಾಳಿಗರು ಆಯ್ಕೆಗೊಂಡಿದ್ದು, ಕೂಡಲೇ ಈ ರಾಂಕ್ ಪಟ್ಟಿ ರದ್ದುಗೊಳಿಸಿ,ಕನ್ನಡ ಮೀಸಲು ಹುದ್ದೆಗಳ ನೇಮಕಾತಿ ಮಾನದಂಡಗಳಲ್ಲಿ ಅಗತ್ಯ ಬದಲಾವಣೆಮಾಡಿ ಮೀಸಲಾತಿ ನಿಯಮ ಬುಡಮಮೇಲುಗೊಳಿಸುವುದನ್ನು ಕೊನೆಗೊಳಿಸಬೇಕು ಎಂದು ಹರ್ಷಾದ್ ವರ್ಕಾಡಿಯವರು ಕೇರಳ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಕನ್ನಡ ಶಾಲೆಗಳಲ್ಲಿ ಅಥವಾ ಇತರ ಇಲಾಖೆಗಳ ಕನ್ನಡ ಮೀಸಲು ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ ವರೆಗೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಂಡವರು ಮಾತ್ರ ಆರ್ಹರು ಎಂಬ ತಿದ್ದುಪಡಿಯನ್ನು ತಂದು ಕನ್ನಡಿಗರ ಹಿತಾಶಕ್ತಿ ಸಂರಕ್ಷಿಸಬೇಕು ಎಂದು ಅವರು ಮನವಿ ಮಾಡಿದ್ದು ಶಿಕ್ಷಣ ಸಚಿವರು,ವಿರೋಧ ಪಕ್ಷದ ನಾಯಕರು ಮುಂತಾದವರಲ್ಲಿ ಈ ಕುರಿತು ಮಧ್ಯಪ್ರವೇಶಿಸಲು ಮನವಿ ಮಾಡಿದ್ದಾರೆ.

Comments

haberler antalya haberleri