antalya otogar rent a car Elektronik Sigara al ordu haberleri fatsa haberleri - instagram türk takipçi al sesli chat sesli sohbet sesli siteler yemek tarifleri sesli siteler

ನವಶಕ್ತಿ ಫ್ರೆಂಡ್ಸ್ ಸರ್ಕಲ್ ತೂಮಿನಾಡು ಹಾಗೂ ನೆಹರೂ ಯುವ ಕೇಂದ್ರ ಕಾಸರಗೋಡು ಜಂಠಿ ಆಶ್ರಯದಲ್ಲಿ ನೆರವೇರಿದ ಬೃಹತ್ ರಕ್ತದಾನ ಹಾಗೂ ಉಚಿತ ವೈದ್ಯಕೀಯ ಶಿಬಿರ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ನವಶಕ್ತಿ ಫ್ರೆಂಡ್ಸ್ ಸರ್ಕಲ್ ತೂಮಿನಾಡು ಹಾಗೂ ನೆಹರೂ ಯುವ ಕೇಂದ್ರ ಕಾಸರಗೋಡು ಜಂಠಿ ಆಶ್ರಯದಲ್ಲಿ ನೆರವೇರಿದ ಬೃಹತ್ ರಕ್ತದಾನ ಹಾಗೂ ಉಚಿತ ವೈದ್ಯಕೀಯ ಶಿಬಿರ

Tuesday, March 13 2018
img

ಮಂಜೇಶ್ವರ (www.asiavisionnews.com) : ನವಶಕ್ತಿ ಫ್ರೆಂಡ್ಸ್ ಸರ್ಕಲ್ ತೂಮಿನಾಡು ಹಾಗೂ ನೆಹರೂ ಯುವ ಕೇಂದ್ರ ಕಾಸರಗೋಡು ಇವರ ಆಶ್ರಯದಲ್ಲಿ ಮತ್ತು ಯನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇವರ ಸಹಯೋಗದೊಂದಿಗೆ 37 ನೇ ವಾರ್ಷಿಕೋತ್ಸವದ ಪ್ರಯುಕ್ತ ಇದೇ ಕುಂಜತ್ತೂರು ಜಿ ವಿ ಎಚ್ ಎಸ್ ಎಸ್ ನಲ್ಲಿ ಬೃಹತ್ ರಕ್ತಾದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ಶಿಬಿರ ನಡೆಯಿತು

ಇ ಎನ್ ಟಿ ವಿಭಾಗ, ಜನರಲ್ ಮೆಡಿಸಿನ್, ಮಕ್ಕಳ ವಿಭಾಗ, ನೇತ್ರಾ ತಪಾಸಣೆ, ಎಲುಬು ಮತ್ತು ಕೀಲು ಚಿಕಿತ್ಸೆ, ಚರ್ಮ ರೋಗ ಚಿಕಿತ್ಸೆ ಗಳ ಶಿಬಿರ ದಲ್ಲಿ ನೂರಾರು ಮಂದಿ ಇದರ ಸದುಪಯೋಗವನ್ನು ಪಡಕೊಂಡರು

ಕೃಷ್ಣಾ ಶಿವ ಕೃಪಾ ಕುಂಜತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರಕ್ಕೆ ಡಾ. ಜಯಪಾಲ ಶೆಟ್ಟಿ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಇಂಡಿಯನ್ ಆಸ್ಪತ್ರೆಯ ಖ್ಯಾತ ವೈದ್ಯ ಡಾ., ಮನ್ಸೂರ್ ಮಾತನಾಡಿ ರಕ್ತದಾನ ಎಂಬುದು ಬಹಳ ಶ್ರೇಷ್ಟವಾದ ತ್ಯಾಗಗಳ್ಳೊಂದಾಗಿದೆ. ಅದೇ ರೀತಿ ನವಶಕ್ತಿಯವರ ಮುತುವರ್ಜಿಯಿಂದ ನಡೆಯುತ್ತಿರುವ ಉಚಿತ ವೈದ್ಯಕೀಯ ಶಿಬಿರದಲ್ಲಿ ಸ್ಥಳೀಯನೇ ಆದ ನಾನು ಭಾಗವಹಿಸಿದ್ದು ಹೆಮ್ಮೆಯನ್ನು ತಂದಿದೆ. ನಮ್ಮ ಊರಿನ ಸ್ಥಳೀಯರಿಗೆ ನಾನು ಪ್ರತ್ಯೇಕವಾದ ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ಹೃದಯ ತೊಂದರೆಯಲ್ಲಿ ಬಳಲುತ್ತಿರುವವರು ನನ್ನನ್ನು ಆಸ್ಪತ್ರೆಯಲ್ಲಿ ಸಂಪರ್ಕಿಸಿದರೆ ನನ್ನಿಂದಾಗುವ ಸಹಾಯವನ್ನು ಮಾಡುವುದಾಗಿ ಮಾನವೀಯತೆಯ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ವೈದ್ಯರುಗಳಾದ ಖಾದರ್ ಎ, ದೀಪ್ತಿ ರಾಣಿ ಎನ್, ಹರೀಶ್ ಶೆಟ್ಟಿ ಮಾಡ ಹಾಗೂ ಆನಂದ ಮಾಸ್ಟರ್ ತೂಮಿನಾಡು ಉಪಸ್ಥರಿದ್ದರು. ಕ್ಲಬ್ ಪದಧಿಕಾರಿಗಳಾದ ವಿಷ್ನೇಶ್ ಸ್ವಾಗತಿಸಿ ರವೀಂದ್ರ ಶೆಟ್ಟಿ ವಂದಿಸಿದರು.

Comments

haberler antalya haberleri