antalya otogar rent a car ordu haberleri likit satın al - instagram türk takipçi al instagram yavaş beğeni satın al ko cuce

ದುರಸ್ಥಿ ಕೇವಲ ನೆಪ ಮಾತ್ರಕ್ಕೆ: ಇನ್ನೂ ಮರೀಚಿಕೆಯಾಗಿಯೇ ಉಳಿದ ಹೆದ್ದಾರಿಯ ಮರಣ ಗುಂಡಿಗಳು | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ದುರಸ್ಥಿ ಕೇವಲ ನೆಪ ಮಾತ್ರಕ್ಕೆ: ಇನ್ನೂ ಮರೀಚಿಕೆಯಾಗಿಯೇ ಉಳಿದ ಹೆದ್ದಾರಿಯ ಮರಣ ಗುಂಡಿಗಳು

Thursday, October 03 2019
img

ಮಂಜೇಶ್ವರ (www.asiavisionnews: ರಾ. ಹೆದ್ದಾರಿಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿದರೂ ಹೊಂಡಗಳಿಂದ ಹಾಗು ಧೂಳುಗಳಿಂದ ಸಂಚಾರ ದುಸ್ತರದಿಂದ ಇನ್ನೂ ಮುಕ್ತಗೊಂಡಿಲ್ಲ.

ಕಾಸರಗೋಡಿನಿಂದ ತಲಪಾಡಿಯ ತನಕ ಹೆದ್ದಾರಿ ಹೊಂಡಗಳಿಂದ ತುಂಬಿ ಸಂಚಾರ ಸಮಸ್ಯೆ ಉಂಟಾದಾಗ ಜನರ ಆಕ್ರೋಶ ಹೆಚ್ಚಳದ ಸಂದರ್ಭ ನಾಗರಿಕರ ಕಣ್ಣಿಗೆ ಮಣ್ಣೆರಚಲು ತಾತ್ಕಾಲಿಕ ದುರಸ್ತಿಗೆ ಮುಂದಾಗಿ ಮೊದಲಿಗಿಂತಲೂ ಹೆಚ್ಚಿನ ರೀತಿಯ ಸಮಸ್ಯೆಗೆ ಕಾರಣವಾಗಿದ್ದರು . ಇದನ್ನು ವಿಚಾರಿಸುವಾಗ ಮಳೆ ಕಮ್ಮಿಯಾದ ಕೂಡಲೇ ರಸ್ತೆ ಸರಿಪಡಿಸುವುದಾಗಿ ಸುಳ್ಳು ಭರವಸೆಯನ್ನು ನೀಡಿ ಅಪ್ರತ್ಯಕರಾಗಿದ್ದರು . ಆ ಸಂದರ್ಭ ಬುಲ್ಡೋಜರನ್ನು ತಂದು ಇದ್ದ ಹೊಂಡಕ್ಕೆ ಇತರ ಡಾಮಾರುಗಳನ್ನು ಅಗೆದು ಸಮ ತಟ್ಟು ಮಾಡಲಾಗಿತ್ತು .

ಆದರೆ ಜಲ್ಲಿ ಹಾಕಿ ಡಾಮರೀಕರಣ ನಡಸದೇ ಇರುವುದರಿಂದ ಮತ್ತೆ ಇಲ್ಲಿ ಹೊಂಡಗಳು ಸೃಷ್ಟಿಯಾಗಿ ಧೂಳು ಎಬ್ಬಿಸಲು ಸಹಾಯಕವಾಯಿತಲ್ಲದೆ ದುರಸ್ತಿಯ ಖರ್ಚು ನೀರಿನಲ್ಲಿಟ್ಟ ಹೋಮದಂತಾಯಿತೆಂಬುದಾಗಿ ನಾಗರಿಕರು ಆಡಿಕೊಳ್ಳುತ್ತಿದ್ದಾರೆ .

ಕಾಸರಗೋಡಿನಿಂದ ತಲಪಾಡಿ ತಲುಪಲು ಈ ಮೊದಲು ೫೦ ನಿಮಿಷ ಬೇಕಾಗಿದ್ದರೆ ಈಗ ಸುಮಾರು ಎರಡು ತಾಸಿಗಿಂತಲೂ ಮಿಕ್ಕ ಸಮಯ ತಗಲುತ್ತದೆ . ಮಂಗಳೂರಿಗೆ ಸಾಗಿಸುವ ರೋಗಿಗಳ ಅವಸ್ಥೆ ಹೇಳಿ ಪ್ರಯೋಜನವಿಲ್ಲ.

ಒಂದೆಡೆ ಹೊಂಡಗಳು ಇನ್ನೊಂದೆಡೆ ಸರಕು ಸಾಗಾಟ ಲಾರಿಗಳು ಮತ್ತೊಂದೆಡೆ ರಸ್ತೆಯಿಂದ ಎದ್ದೇಳುವ ಧೂಳು ಎಲ್ಲಾ ಸೇರಿದಾಗ ಹೆದ್ದಾರಿಯ ಸಂಚಾರ ನರಕ ಸದೃಶವಾಗುತ್ತಿದೆ. ಸರಕು ಸಾಗಾಟ ಲಾರಿಗಳ ಸಂಚಾರ ಸಂಜೆ ವೇಳೆಗೆ ಸೀಮಿತ ಗೊಳಿಸಿದ್ದ ಕಾಲದಲ್ಲಿ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಿ ಸಂಚಾರ ಸುಗಮವಾಗಿತ್ತು .

ಆದರೆ ಈಗ ಲಾರಿಗಳು ಕೂಡಾ ಹಗಲಿಡೀ ಸಂಚರಿಸುತ್ತಿದ್ದು, ಇತರ ವಾಹನಗಳಿಗೆ ಸಂಚರಿಸಲು ಕಷ್ಟವಾಗುತ್ತಿದೆ . ರಸ್ತೆಯ ಹೊಂಡಗಳಿಗೆ ಬಿದ್ದು ಎದ್ದು ಸಾಗುವ ಘನ ವಾಹನಗಳನ್ನು ಹಿಂದಿಕ್ಕು ಸಾಗಲು ಹೆದ್ದಾರಿಯ ಮರಣ ಗುಂಡಿಗಳು ಸಾಪವಾಗಿ ಪರಿಣಮಿಸಿವೆ .

ಸಾಲು ಸಾಲಾಗಿ ಸಂಚರಿಸುವ ವಾಹನಗಳ ದಟ್ಟಣೆ ಹೆದ್ದಾರಿಯಲ್ಲಿ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿವೆ . ಮಳೆಗಾಲ ದೂರವಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವಂತೆ ಆಗ್ರಹಿಸಿದ್ದಾರೆ

Comments

haberler antalya haberleri