antalya otogar rent a car ordu haberleri likit satın al - instagram türk takipçi al instagram yavaş beğeni satın al ko cuce

ಆಕರ್ಷಕ ಬೋರ್ಡರ್ ಎಕ್ಸ್‌ಪೋ 2019 ಕ್ಕೆ ಚಾಲನೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಆಕರ್ಷಕ ಬೋರ್ಡರ್ ಎಕ್ಸ್‌ಪೋ 2019 ಕ್ಕೆ ಚಾಲನೆ

Wednesday, October 23 2019
img

ಮಂಜೇಶ್ವರ (www.asiavisionnews: ಮೊದಲ ಬಾರಿಗೆ ಕೇರಳ ಕರ್ನಾಟಕದ ಗಡಿ ಪ್ರದೇಶವಾದ ತಲಪಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಉದ್ಯಾವರದ ಎ ಎಚ್ ಎಸ್ ಗೆಳೆಯರ ತಂಡದ ಪ್ರಾಯೋಜಕತ್ವದಲ್ಲಿ ವಸ್ತುಗಳ ಪ್ರದರ್ಶನ , ಮನರಂಜನೆ ಹಾಗೂ ಮಾರಾಟ ಹಬ್ಬಗಳ ಒಂದು ತಿಂಗಳ ಬೋರ್ಡರ್ ಎಕ್ಸ್‌ಪೋ ೨೦೧೯ ಕ್ಕೆ ಚಾಲನೆ ದೊರಕಿದೆ .

ಸಣ್ಣ ದರದಲ್ಲಿ ಪ್ರವೇಶಾತಿಯನ್ನು ಹೊಂದಿರುವ ಬೋರ್ಡರ್ ಎಕ್ಸ್‌ಪೋ 2019 ವಿವಿಧ ರೀತಿಯ ವಿನ್ಯಾಸಗಳನ್ನು ಹೊಂದಿದ್ದು, ಮಕ್ಕಳಿಗೆ ಹಾಗೂ ಹಿರಿಯರಿಗೆ ಮನರಂಜನೆಯನ್ನು ನೀಡುತ್ತಿದೆ . ಈ ಪ್ರದರ್ಶನದಲ್ಲಿ ಈವರೆಗೆ ನೋಡಿರದ ಮತ್ತು ಕೇಳಿರದ ಹೊಸ ಹೊಸ ಮನರಂಜನೆಗಳನ್ನು ಕಾಣಬಹುದಾಗಿದೆ . ಬೋರ್ಡರ್ ಎಕ್ಸ್‌ಪೋ’ಗೆ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರ ಅಗತ್ಯತೆಯನ್ನು ಮನಗಂಡು ಉತ್ತಮ ಗುಣಮಟ್ಟದ ಉತ್ಪನ್ನಗಳು ಹಾಗೂ ಸೇವೆ ಗ್ರಾಹಕರಿಗೆ ಲಭ್ಯವಾಗಬೇಕೆಂಬ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿರುವುದಾಗಿ ಆಯೋಜಕರು ತಿಳಿಸಿದ್ದಾರೆ .

ಕಾಸರಗೋಡು ಹಾಗು ಮಂಗಳೂರು ನಗರದ ಜನರಿಗೆ ಮಾತ್ರ ಇಂಥ ಎಕ್ಸ್‌ಪೋಗಳ ಭಾಗವಾಗುವ ಅವಕಾಶ ಪ್ರಾಪ್ತವಾಗುತ್ತಿತ್ತು. ಆದರೆ ಉತ್ಸಾಹಿ ತರುಣರ ಆಸಕ್ತಿಯಿಂದ ಇದೀಗ ಈ ಅವಕಾಶ ಗಡಿನಾಡ ಜನರಿಗೂ ತಲುಪಿದೆ .

ಕಾಸರಗೋಡು ಹಾಗೂ ಮಂಗಳೂರಿನಲ್ಲಿ ಈ ತನಕ ಪ್ರದರ್ಶನಗೊಳ್ಳದ ಚಾಂತಾರ ಮನರಂಜನೆ ಇಲ್ಲಿಯ ವಿಶೇಷತೆಯಾಗಿದೆ . ಜೊತೆಗೆ ಐಸ್ ವರ್ಲ್ಡ್ , ಸೆಲ್ಫಿ ಯು ಪಾಯಿಂಟ್ , ಜಾನ್ ಫಿಲ್ , ಕೊಲಂಬೊಸ್ , ಡ್ರಾಗನ್ ರೈಲು, ಬ್ರೇಕ್ ಡ್ಯಾನ್ಸ್ , ಮಕ್ಕಳ ವಾಟರ್ ಬೋಟ್ , ಮಿನಿ ಟ್ರೈನ್. ಬೋನ್ಸಿ ಜಂಪಿಂಗ್ , ಆಹಾರ ಮಳಿಗೆ , ಫರ್ನಿಚರ್ ಮಳಿಗೆ , ಪ್ಹ್ಯಾನ್ಸಿ ಮಳಿಗೆ, ವಸ್ತ್ರಗಳ ಮಳಿಗೆ , ಚಪ್ಪಲಿ ಮಳಿಗೆ, ಟಾಯ್ಸ್ ಮಳಿಗೆ ಸೇರಿದಂತೆ ವಿವಿಧ ವಿನ್ಯಾಸಗಳ ಆಕರ್ಷಕ ವಿವಿಧ ರೀತಿಯ ಮಳಿಗೆಗಳನ್ನು ಒಳಗೊಂಡಿದೆ.

ಬೋರ್ಡರ್ ಎಕ್ಸ್‌ಪೋ 2019 ಕ್ಕೆ ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ರಿಬ್ಬನ್ ಕತ್ತರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು . ಬಳಿಕ ಮಾತನಾಡಿದ ಅವರು (Bytes1) ಉತ್ಸಾಹಿ ತರುಣರ ಮುತುವರ್ಜಿಯಿಂದ ಇಂದು ಗಡಿನಾಡು ಪ್ರದೇಶ ಕಂಗೊಳಿಸವಂತಾಗಿದೆ . ಸಣ್ಣ ದರದಲ್ಲಿ ಪ್ರವೇಶಾತಿಯನ್ನು ನೀಡಿ ಊರವರಿಗೆ ಮನರಂಜನೆಯನ್ನು ಸಮರ್ಪಿಸಿರುವ ಇದರ ಆಯೋಜಕರಾದ ತರುಣರ ಸೇವೆ ನಿಜಕ್ಕೂ . ಶ್ಲಾಘನೀಯ. ಇಂತಹ ಎಕ್ಸ್‌ಪೋಗಳನ್ನು ನಾವು ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿ ಶುಭವನ್ನು ಹಾರೈಸಿದರು .

ಮುಖ್ಯ ಅತಿಥಿಯಾಗಿ ಆಗಮಿಸಿದ ಸಿ ಪಿ ಐ ಜಿಲ್ಲಾ ನೇತಾರ ಬಿ ವಿ ರಾಜನ್ ಮಾತಾನಾಡಿ (Bytes2) ಊರ ಯುವಕರ ಉತ್ಸಾಹದಿಂದ ಆಯೋಜಿಸಿರುವ ಈ ಬೋರ್ಡರ್ ಎಕ್ಸ್‌ಪೋ ದಲ್ಲಿ ಪಾಲ್ಗೊಂಡದರಲ್ಲಿ ಅತೀವ ಸಂತೋಷವಿದೆ . ಹಿಂದಿನ ಕಾಲದಲ್ಲಿ ಸರ್ಕಸ್ ಗಳನು ನೋಡ ಬಹುದಿತ್ತು. ಆದರೆ ಇಂದು ಆಧುನಿಕ ಜಗತ್ತಿನಲ್ಲಿ ಮನರಂಜನೆಗಾಗಿ ಜನರು ಮುಗಿ ಬೀಳುತ್ತಿರುವ ಕಾಲವಾಗಿದೆ . ಕಾಲಕ್ಕನುಸಾರವಾಗಿ ಇಂದು ಈ ಬೋರ್ಡರ್ ಎಕ್ಸ್‌ಪೋ ಗಡಿನಾಡ ಪ್ರದೇಶದಲ್ಲಿ ಸಜ್ಜಾಗಿದೆ ಎಂದು ಹೇಳಿ ಶುಭವನ್ನು ಹಾರೈಸಿದರು .

ಕಾರ್ಯಕ್ರಮಕ್ಕೆ ಆಗಮಿಸಿದ ಇನ್ನೊಬ್ಬ ಮುಖ್ಯ ಅತಿಥಿ ಎಸ್ ಡಿ ಪಿ ಐ ಪಕ್ಷದ ನೇತಾರ ಇಕ್ಬಾಲ್ ಹೊಸಂಗಡಿ ಮಾತನಾಡಿ (Bytes3) ಜನರ ಅಗತ್ಯತೆಯನ್ನು ಮನಗಂಡು ಗಡಿನಾಡ ಜನರಿಗೆ ಒಂದು ತಿಂಗಳ ಹಬ್ಬವನ್ನೇ ತರುಣರು ಸಮರ್ಪಿಸಿದ್ದಾರೆ . ಇದಕ್ಕೆ ಗಡಿನಾಡ ಜನತೆ ಉತ್ತಮವಾದ ಪ್ರೋತ್ಸಾಹವನ್ನು ನೀಡಬೇಕಾಗಿದೆ ಎಂದು ಹೇಳಿ ಎಲ್ಲಾ ರೀತಿಯ ಶುಭವನ್ನು ಹಾರೈಸಿದರು .

ಈ ಸಂದರ್ಭ ವೇದಿಕೆಯಲ್ಲಿ ಬ್ಲಾಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಸ್ತಫಾ ಉದ್ಯಾವರ , ಅಬ್ದುಲ್ಲಾ ಗುಡ್ಡಕ್ಕೇರಿ, ಹಮೀದ್ ಹೊಸಂಗಡಿ, ಮುಸ್ತಫಾ ಕಡಂಬಾರ್, ಹನೀಫ್ ಪಿ ಎ , ದಯಾಕಾರ ಮಾಡ, ಬೋರ್ಡರ್ ಎಕ್ಸ್‌ಪೋ ಪಾಲುದಾರರಾದ ಅಲಿಕುಟ್ಟಿ , ಅಫಿಜ್ , ಹನೀಫ್, ಶಾನವಾಜ್ , ಹಕೀಮ್ , ಸಲೀಮ್ ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರು . ಅತಿಥಿಗಳನ್ನು ವೇದಿಕೆಯಲ್ಲಿ ಸಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Comments

haberler antalya haberleri