Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಕಾಸರಗೋಡು : ಕ್ರೀಡಾ ಪದಾಧಿಕಾರಿಗಳಿಗೆ ಹಾಗೂ ಕ್ರೀಡಾ ಪಟುಗಳಿಗೆ ಸನ್ಮಾನ

Sunday, April 24 2016
img

ಮಂಜೇಶ್ವರ [ www.asiavisionnews.com ] : ಕಾಸರಗೋಡು ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ನ ನೇತೃತ್ವದಲ್ಲಿ ಕ್ರೀಡಾ ಪಟುಗಳನ್ನು ಹಾಗೂ ಕೌನ್ಸಿಲ್ ಪದಾಧಿಕಾರಿಗಳನ್ನು ಸಮ್ಮಾನಿಸಲಾಯಿತು.
ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷೆ ಅಂಜು ಬೇಬಿ ಜೋರ್ಜ್, ಉಪಾಧ್ಯಕ್ಷ ಡಿ ಕೆ ಇಬ್ರಾಹಿಂ ಕುಟ್ಟಿ, ಸ್ಪೋರ್ಟ್ಸ್ ಕೌನ್ಸಿಲ್ ಕಾರ್ಯದರ್ಶಿವಿನೋದ್ ಜಾರ್ಜ್ ವರ್ಗೀಸ್, ಅಡ್ಮಿನಿಸ್ಟ್ರೇಟಿವ್ ಬೋರ್ಡ್ ಮೆಂಬರ್ ಎಸ್ ನಜ್ಮುದ್ದೀನ್ ಎಂಬಿವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಬಳಿಕ ಅಂಜು ಬೇಬಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕೇರಳ ರಾಜ್ಯ ಕ್ರೀಡೆಯಲ್ಲಿ ರಾಷ್ಟ್ರಕ್ಕೆ ಹಲವರನ್ನು ಸನ್ಮಾನಿಸಿದೆ. ಇಂದಿಗೂ ರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಕೇರಳ ರಾಜ್ಯದ ತಾರೆಯರೇ ಮಿಂಚುತಿದ್ದಾರೆ. ಇಂತವರನ್ನು ನಾವು ಪ್ರೋತ್ಸಾಹಿಸಬೇಕಾಗಿದೆ. ಇವತ್ತು ನಡೆದ ಸನ್ಮಾನ ಕಾರ್ಯಕ್ರಮ ಅಭಿನಂದನೀಯ ವೆಂದರು. ಕಾರ್ಯಕ್ರಮವನ್ನು ಮುನ್ಸಿಪಲ್ ಚೇರ್ ಮ್ಯಾನ್ ಬೀಫಾತಿಮ ಇಬ್ರಾಹಿಂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷ ಎನ್ ಎ ಸುಲೈಮಾನ್ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಅಂತರಾಷ್ಟ್ರೀಯ ಕಾರು ರಾಲಿ ಚಾಂಪಿಯನ್ ಮೂಸಾ ಶೆರೀಫ್ ನನ್ನು ಕೂಡಾ ಸನ್ಮಾನಿಸಲಾಯಿತು. ಎನ್ ಎ ಮೊಹಮ್ಮದ್ ಹಾಜಿ, ಮಾಲತಿ ಸುರೇಶ್, ಶಾಹಿದಾ ಸಲೀಂ, ಸದಾನಂದ, ಸಿ ಎ ಅಬ್ದುಲ್ ಅಝೀಝ್ ಮೊದಲಾದವರು ಉಪಸ್ಥರಿದ್ದರು.

Comments