Flash News
വാർത്തകൾക്കും,പരസ്യങ്ങൾക്കും ബന്ധപെടുക:9895854501,9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಗುಜರಾತ್ ಲಯನ್ಸ್ ವಿರುದ್ಧ ಬೆಂಗಳೂರಿಗೆ 4 ವಿಕೆಟ್ ಗಳ ರೋಚಕ ಜಯ

Tuesday, May 24 2016
img

ಬೆಂಗಳೂರು [ www.asiavisionnews.com ] : ಐಪಿಎಲ್ ಸೀಸನ್ 9ನ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡವನ್ನು ನಾಲ್ಕು ವಿಕೆಟ್ ಗಳ ಅಂತರಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಪ್ರವೇಶಿಸಿದೆ.
ಗುಜರಾತ್ ನೀಡಿದ 159ರನ್ ಗಳ ಸವಾಲಿನ ಮೊತ್ತ ಬೆನ್ನುಹತ್ತಿದ ಬೆಂಗಳೂರು ತಂಡ ಆರಂಭಿಕ ಆಘಾತದ ನಡುವೆಯೂ ಮಧ್ಯಮ ಕ್ರಮಾಂಕದ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ (ಅಜೇಯ 79) ಮತ್ತು ಕೆಳ ಕ್ರಮಾಂಕದ ಆಟಗಾರರಾದ ಸ್ಟುವರ್ಟ್ ಬಿನ್ನಿ (21 ರನ್), ಅಬ್ದುಲ್ಲಾ (ಅಜೇಯ 33 ರನ್) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

Comments