ಐ.ಪಿ.ಎಲ್ ಫೈನಲ್ : ಹೈದರಾಬಾದ್ ಚಾಂಪ್ಯನ್

Sunday, May 29 2016
img

ಬೆಂಗಳೂರು [ www.asiavisionnews.com ] : ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರು ವಿಭಾಗದಲ್ಲಿ ಉತ್ತಮ ನಿರ್ವಹಣೆ ತೋರಿದ ಸನ್ ರೈಸರ್ಸ್ ಹೈದರಬಾದ್ ತಂಡ 2016 ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದೆ.
ಹೈದರಾಬಾದ್ ತಂಡ ನೀಡಿದ 208ರನ್ ಗಳ ಬೃಹತ್ ಮೊತ್ತವನ್ನು ಆತ್ಮ ವಿಶ್ವಾಸದಿಂದಲೇ ಬೆನ್ನು ಹತ್ತಿದ ಆರ್ ಸಿಬಿ ತಂಡಕ್ಕೆ ಕ್ರಿಸ್ ಗೇಯ್ಲ್ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೇ ಈ ಜೋಡಿ ಶತಕದ ಜೊತೆಯಾಟ ಆಡುವ ಮೂಲಕ ಗೆಲುವಿನ ಮುನ್ಸೂಚನೆ ನೀಡಿತು. ಆದರೆ ಈ ಹಂತದಲ್ಲಿ 75 ರನ್ ಗಳಿಸಿದ್ದ ಗೇಯ್ಲ್ ಕಟ್ಟಿಂಗ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಉತ್ತಮ ಆಟ ಮುಂದುವರೆಸಿದ ಕೊಹ್ಲಿ 54 ರನ್ ಗಳಿಸಿ ಸ್ರ್ಯಾನ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು.
ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೀರವ ಮೌನ ಆವರಿಸಿತು. ಬಳಿಕ ಸ್ಫೋಟಕ ಬ್ಯಾಟ್ಸಮನ್ ಎಬಿಡಿ ಕೂಡ ಕೇವಲ 5 ರನ್ ಗಳಿಗೆ ಔಟ್ ಆಗಿದ್ದು ಆರ್ ಸಿಬಿ ಗೆ ಗಾಯದ ಮೇಲೆ ಬರೆ ಎಳೆದ ಅನುಭವವಾಗಿತ್ತು.ಬಳಿಕ ಬಂದ ಯಾವೊಬ್ಬ ಬ್ಯಾಟ್ಸಮನ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡದೇ ಪೆವಿಲಿಯನ್ ಪರೇಡ್ ನಡೆಸಿದರು. ಹೀಗಾಗಿ ಆರ್ ಸಿಬಿ ತಂಡ ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿ 8 ರನ್ ಗಳ ಅಂತರದ ವಿರೋಚಿತ ಸೋಲು ಕಂಡಿತು.

Comments